ETV Bharat / snippets

ಚಾಮರಾಜನಗರ: ಹಾಸ್ಟೆಲ್​ನಲ್ಲೇ ಅಡುಗೆ ಮೇಲ್ವಿಚಾರಕ ಆತ್ಮಹತ್ಯೆ

author img

By ETV Bharat Karnataka Team

Published : 14 hours ago

suicide
ಪ್ರಮೋದ್ ಕುಮಾರ್ (ETV Bharat)

ಚಾಮರಾಜನಗರ: ಅಡುಗೆ ಮೇಲ್ವಿಚಾರಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದ ಪ್ರಮೋದ್ ಕುಮಾರ್ (29) ಮೃತ ವ್ಯಕ್ತಿ. ಈತ ಬಿಸಿಎಂ ವಿದ್ಯಾರ್ಥಿ ನಿಲಯದ ರೂಮ್​​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬೇಗೂರಿನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಂಚಕನ ಬಂಧನ: ವಿವಿಧ ಯೋಜನೆಯಡಿ ಬಡ್ಡಿರಹಿತ ರೂಪದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ, ಸುಮಾರು 21 ಮಂದಿಯಿಂದ ಲಕ್ಷಾಂತರ ರೂ. ಹಣ ವಂಚಿಸಿದ್ದ ಆರೋಪದ ಮೇಲೆ ಹರೀಶ್ ಎಲ್ಲಪ್ಪ ಎಂಬಾತನನ್ನು ಚಾಮರಾಜನಗರದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಸಾಲ ಕೊಡಿಸುವುದಾಗಿ ನಂಬಿಸಿ ಹಂತ - ಹಂತವಾಗಿ ಲಕ್ಷಾಂತರ ರೂ‌. ಪಡೆದು ವಂಚಿಸಿದ್ದಾನೆಂದು ಈತನ ವಿರುದ್ಧ ಮಹಿಳೆಯೊಬ್ಬರು ಹರೀಶ್ ವಿರುದ್ಧ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೈಸೂರಿನ ಬಾರ್​ವೊಂದರಲ್ಲಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.