ETV Bharat / business

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?: SIPಯ ಈ ತಂತ್ರ ಅನುಸರಿಸಿ - ಲಾಭ ಗ್ಯಾರಂಟಿ! - HOW TO INVEST IN SIP

ನೀವು SIP ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವಿರಾ? ಹಾಗಾದರೆ ಈ ಅತ್ಯುತ್ತಮ ಸಿಪ್ ತಂತ್ರ ನಿಮಗಾಗಿ.

smart-sip-tips-how-to-get-better-returns-with-your-mutual-fund-sips
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ?: SIPಯ ಈ ತಂತ್ರ ಅನುಸರಿಸಿ - ಲಾಭ ಗ್ಯಾರಂಟಿ! (ANI)
author img

By ETV Bharat Karnataka Team

Published : Oct 12, 2024, 11:24 AM IST

ಇಂದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅವು ನೇರವಾಗಿ ಷೇರು ಮಾರುಕಟ್ಟೆಗೆ ಸಂಬಂಧಿಸಿರುವುದರಿಂದ ಅಪಾಯ ಸ್ವಲ್ಪ ಹೆಚ್ಚೇ ಇರುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಹೂಡಿಕೆ ತಂತ್ರಗಳನ್ನು ಅನುಸರಿಸಬೇಕು. ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (SIP) ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು.

ಒಂದಿಷ್ಟು ಹಣ ನಿಮ್ಮ ಬಳಿ ಇರಲಿ: ತುರ್ತು ಸಂದರ್ಭಗಳಲ್ಲಿಯೂ ಸಹ ದೀರ್ಘಾವಧಿಗೆ ಮಾಡಿರುವ ಹೂಡಿಕೆಯ ಹಣವನ್ನು ಹಿಂಪಡೆಯುವುದನ್ನು ತಪ್ಪಿಸಿ. ಇದಕ್ಕಾಗಿ ನೀವು ಕನಿಷ್ಠ 6 ತಿಂಗಳ ವೆಚ್ಚಗಳಿಗೆ ಬೇಕಾಗುವಷ್ಟು ಹಣವನ್ನು ಕೂಡಿಟ್ಟರಬೇಕು. ಇಷ್ಟು ಹಣ ಇದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಸುರಕ್ಷಿತ. ಇದಕ್ಕಾಗಿ ನೀವು ಲಿಕ್ವಿಡ್ ಫಂಡ್‌ಗಳಲ್ಲಿ ಸಿಪ್ ಮಾಡುವುದು ಸರಿ ಎನಿಸುತ್ತದೆ.

ಮಧ್ಯಮ ಅವಧಿ ಗುರಿ: ಯುವ ಹೂಡಿಕೆದಾರರು ಕೆಲವು ಮಧ್ಯಮ ಅವಧಿಯ ಗುರಿಗಳನ್ನು ಹೊಂದಿದ್ದಾರೆ. ಅಂತಹ ಅಗತ್ಯಗಳಿಗಾಗಿ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗುತ್ತದೆ. ಉದಾಹರಣೆಗೆ ನೀವು ಕಾರನ್ನು ಖರೀದಿಸಲು ಬಯಸಬಹುದು, ಇಲ್ಲವೇ ನೀವು ಮನೆಗಾಗಿ ಡೌನ್ ಪೇಮೆಂಟ್ ಮಾಡಲು ಬಯಸಬಹುದು. ಇವೆಲ್ಲವೂ ಪ್ರತ್ಯೇಕ ಸಿಪ್​ ಯೋಜನೆಯೊಂದಿಗೆ ಪ್ರಾರಂಭವಾಗಬೇಕು. ಈ ಉದ್ದೇಶಕ್ಕಾಗಿ ಅಲ್ಪಾವಧಿಯ ಸಾಲ ನಿಧಿಗಳನ್ನು ಸಹ ಆಯ್ಕೆ ಮಾಡಬಹುದು.

ದೀರ್ಘಾವಧಿಯ ಗುರಿ: ನಿಮ್ಮ ಗುರಿಯು 15-20 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ದೀರ್ಘಾವಧಿಯ ತಂತ್ರದೊಂದಿಗೆ ಹೂಡಿಕೆ ಮಾಡಿ. ಉದಾಹರಣೆಗಳೆಂದರೆ ಮಕ್ಕಳ ಉನ್ನತ ಶಿಕ್ಷಣ ಮತ್ತು ನಿಮ್ಮ ನಿವೃತ್ತಿ. ಇದಕ್ಕಾಗಿ, ನಷ್ಟದ ಅಪಾಯವನ್ನು ಭರಿಸುವ ಸಾಮರ್ಥ್ಯದ ಆಧಾರದ ಮೇಲೆ 80-90 ಶೇಕಡಾವನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು.

ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸುವವರು ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ದೊಡ್ಡ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿಗಳು ಚಂಚಲತೆಗೆ ಸಮಾನಾರ್ಥಕವಾಗಿದೆ. ಹಾಗಾಗಿ ಮಾರುಕಟ್ಟೆಯ ಏರಿಳಿತಗಳಿಗೆ ಮಾನಸಿಕವಾಗಿ ಸಿದ್ಧರಾಗಿರಬೇಕು. ಇದು ಕನಿಷ್ಠ ಎರಡರಿಂದ ಮೂರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅದರ ನಂತರ ನಿಫ್ಟಿ ಮಿಡ್ ಕ್ಯಾಪ್ ಇಂಡೆಕ್ಸ್‌ನಂತಹವುಗಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದ ಹೂಡಿಕೆ ನಿಗದಿ ಮಾಡಿ, ಹೂಡಿಕೆ ಮಾಡುತ್ತಾ ಸಾಗಬೇಕು.

ಎಲ್ಲ ವಿಚಾರಿಸಿ ಅನುಭವ ಪಡೆದು ಬಳಿಕ ಹೂಡಿಕೆ ಮಾಡಿ: ಹೂಡಿಕೆಯಲ್ಲಿ ಸ್ವಲ್ಪ ಅನುಭವವನ್ನು ಪಡೆದ ನಂತರ, ದೀರ್ಘಾವಧಿಯ ಪೋರ್ಟ್​ ಪೋಲಿಯೋಗಳನ್ನು ಸಿದ್ಧಪಡಿಸಬೇಕು. ಶೇ 70-80ರಷ್ಟು ನಿಫ್ಟಿ ಸೂಚ್ಯಂಕ ನಿಧಿಗಳನ್ನ ಆಯ್ಕೆ ಮಾಡಿಕೊಳ್ಳಬೇಕು. ಆಗ ಮಾತ್ರ ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು. ಸ್ಮಾಲ್ ಮತ್ತು ಮಿಡ್ ಕ್ಯಾಪ್ ಫಂಡ್‌ಗಳಲ್ಲಿ ಚಂಚಲತೆ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ, ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಅನುಭವ ಇದ್ದಾಗ ಮಾತ್ರ ಇವುಗಳತ್ತ ಗಮನ ಹರಿಸಬೇಕು.

ನಿಮ್ಮ ಹೂಡಿಕೆ ವೈವಿಧ್ಯೀಕರಣ ಮಾಡಿ: ನಿಮ್ಮ ಎಲ್ಲಾ ಹಣವನ್ನು ಈಕ್ವಿಟಿಗಳಲ್ಲಿ ಮಾತ್ರ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಸಾಲ, ಚಿನ್ನ ಮತ್ತು ಇತರ ಯೋಜನೆಗಳನ್ನು ಸಹ ಪರಿಶೀಲಿಸಬೇಕು. ಕನಿಷ್ಠ ಶೇ.20ರಷ್ಟು ಹೂಡಿಕೆಯನ್ನು ಇವುಗಳಿಗೆ ವಿನಿಯೋಗಿಸಬೇಕು. ಆಗ ಮಾತ್ರ ಪೋರ್ಟ್ಫೋಲಿಯೊ ಸ್ಥಿರತೆಯ ಅವಕಾಶವಿರುತ್ತದೆ.

ಇವುಗಳು ನಿಮ್ಮ ಗಮನದಲ್ಲಿರುವುದು ಮುಖ್ಯ!

  • ಮಾರುಕಟ್ಟೆಯ ಏರಿಳಿತದ ಸಮಯದಲ್ಲಿ ಶಿಸ್ತುಬದ್ಧವಾಗಿರಿ.
  • ಫಂಡ್‌ಗಳನ್ನು ಆಯ್ಕೆಮಾಡುವಾಗ ಅಲ್ಪಾವಧಿಯ ಆದಾಯಗಳ ಮೇಲೆ ಮಾತ್ರ ಗಮನಹರಿಸಬಾರದು.
  • ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಿಧಿಗಳನ್ನು ಆಯ್ಕೆ ಮಾಡಲು ಯೋಚಿಸಬೇಡಿ. ಅದರ ಮೂಲಭೂತ ಅಂಶಗಳನ್ನು ತಿಳಿಯಿರಿ. ಭವಿಷ್ಯದಲ್ಲಿ ಇದು ಬೆಳೆಯುತ್ತದೆಯೇ? ಅಥವಾ? ಅದನ್ನು ಸಹ ಪರಿಗಣಿಸಿ.
  • ಹಂತ ಹಂತವಾಗಿ ಹೂಡಿಕೆಯನ್ನು ಮುಂದುವರಿಸಿ.
  • ಮಾರುಕಟ್ಟೆ ಕುಸಿದಾಗಲೂ ಹೂಡಿಕೆ ಮುಂದುವರಿಸಬೇಕು. ನಿಯಮಿತವಾಗಿ ಹೂಡಿಕೆ ಮಾಡುವತ್ತ ಗಮನ ಹರಿಸಿ.
  • ಆರಂಭದಲ್ಲಿ ಒಂದೇ ವಲಯಕ್ಕೆ ಸೀಮಿತವಾಗಿರುವ ವಲಯದ ನಿಧಿಗಳ ಮೇಲೆ ಹೆಚ್ಚು ಗಮನಹರಿಸಬೇಡಿ.
  • ನಿಮ್ಮ ಪೋರ್ಟ್‌ಫೋಲಿಯೋ ವೈವಿಧ್ಯಮಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ.

ಇವುಗಳನ್ನು ಓದಿ: ಆಯುಧ ಪೂಜೆ ದಿನ ರಾಜ್ಯದಲ್ಲಿ ಎಷ್ಟಿದೆ ಬಂಗಾರದ ಬೆಲೆ: ಬೆಂಗಳೂರಿನಲ್ಲಿನ ಚಿನ್ನದ ದರದ ವಿವರ ಇಂತಿದೆ

ಈ ವರ್ಷದ ಮೊದಲ 6 ತಿಂಗಳಲ್ಲಿ ಯುಪಿಐ ವಹಿವಾಟು 78.97 ಬಿಲಿಯನ್‌ಗೆ ಏರಿಕೆ: ವರದಿ

ಹೊಸ ಪ್ಲಾನ್ ಪರಿಚಯಿಸಿದ ಸ್ಪಾಟಿಫೈ: 4 ತಿಂಗಳಿಗೆ ಕೇವಲ 59 ರೂಪಾಯಿ

ಹಬ್ಬದ ಋತುವಿನಲ್ಲಿ ದಾಖಲೆಯ ಆನ್​ಲೈನ್​ ಮಾರಾಟ - ವಾರದಲ್ಲೇ 54 ಸಾವಿರ ಕೋಟಿ ರೂಪಾಯಿಯ ಆರ್ಡರ್​ಗಳು​! - FESTIVE SEASON ONLINE SALES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.