ETV Bharat / international

ಇಸ್ರೇಲ್​ಗೆ ಥಾಡ್ ರಕ್ಷಣಾ ವ್ಯವಸ್ಥೆ ನಿಯೋಜಿಸಲು ಮುಂದಾದ ಅಮೆರಿಕ: ಏನಿದು ಥಾಡ್​​, ಹೇಗಿರುತ್ತೆ ಈ ಅಭೇದ್ಯ ಕೋಟೆ?

ಥಾಡ್‌ ಎಂಬುದು ಆಕಾಶದಲ್ಲೇ ಶತ್ರುಗಳ ಕ್ಷಿಪಣಿಗಳನ್ನು ತಡೆದು ನಾಶಗೊಳಿಸುವ ರಕ್ಷಣಾ ತಂತ್ರಜ್ಞಾನವಾಗಿದೆ. ಇದು ಸಣ್ಣ ಹಾಗೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಆಕಾಶದಲ್ಲಿಯೇ ತಡೆದು ನಾಶಗೊಳಿಸುತ್ತದೆ.

author img

By ETV Bharat Karnataka Team

Published : 2 hours ago

US to deploy THAAD missile system to Israel amid rising tensions with Iran
ಇಸ್ರೇಲ್​ಗೆ ಥಾಡ್ ಕ್ಷಿಪಣಿ ವ್ಯವಸ್ಥೆ ನಿಯೋಜಿಸಲು ಮುಂದಾದ ಅಮೆರಿಕ: ಏನಿದು ಥಾಡ್​​, ಹೇಗಿರುತ್ತೆ ಈ ಅಭೇದ್ಯ ಕೋಟೆ? (IANS)

ವಾಷಿಂಗ್ಟನ್ , ಅಮೆರಿಕ: ಇಸ್ರೇಲ್‌ಗೆ ಮಿಲಿಟರಿ ಸಿಬ್ಬಂದಿಯೊಂದಿಗೆ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -ಥಾಡ್ ಕ್ಷಿಪಣಿ ನಿಯೋಜಿಸುವುದಾಗಿ ಅಮೆರಿಕ ಭಾನುವಾರ ಘೋಷಿಸಿದೆ.

ಏಪ್ರಿಲ್ 13 ರಂದು ಮತ್ತು ಮತ್ತೆ ಅಕ್ಟೋಬರ್ 1 ರಂದು ಇರಾನ್‌ ಇಸ್ರೇಲ್​ ಮೇಲೆ ಭಾರಿ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್​​ನಿಂದ ಭಾರಿ ಅಪಾಯ ಇದೆ ಎಂದು ಪೆಂಟಗನ್ ವಿವರಿಸಿದ ನಂತರ ಇಸ್ರೇಲ್‌ನ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಅಮೆರಿಕ ಚಿತ್ತ ಹರಿಸಿದೆ. ಹೀಗಾಗಿ ಇಸ್ರೇಲ್​ಗೆ ಥಾಡ್​ ರಕ್ಷಣಾ ವ್ಯವಸ್ಥೆ ನೀಡಲು ಕ್ರಮ ಕೈಗೊಂಡಿದೆ.

ಅಮೆರಿಕ ಅಧ್ಯಕ್ಷರ ನಿರ್ದೇಶನದ ಮೇರೆಗೆ, ಸೆಕ್ರೆಟರಿ ಆಸ್ಟಿನ್ ಅವರು, ಟರ್ಮಿನಲ್ ಹೈ-ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ -THAAD ಅನ್ನು ಇಸ್ರೇಲ್‌ಗೆ ನಿಯೋಜಿಸಲು ಅಧಿಕಾರ ನೀಡಲಾಗಿದೆ. ಏಪ್ರಿಲ್ 13 ರಂದು ಇರಾನ್‌ನ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿದ ಬಳಿಕ ಅಮೆರಿಕ ಇಂತಹದ್ದೊಂದು ನಿರ್ಧಾರಕ್ಕೆ ಬಂದಿದೆ. ಅಕ್ಟೋಬರ್ 1 ರಂದು ಈ ಬಗ್ಗೆ " ಪೆಂಟಗನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು.

ಇದನ್ನು ಓದಿ: ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್​ ವೈಮಾನಿಕ ದಾಳಿ: 16 ಮಂದಿ ಸಾವು, ಲೆಬನಾನ್​ ಮೇಲೆ ಮುಂದುವರಿದ ದಾಳಿ

50 ವರ್ಷಗಳ ನಂತರ ಸಹರಾ ಮರುಭೂಮಿಯಲ್ಲಿ ಪ್ರವಾಹ! ಬಸವಳಿದ ಬುವಿಗೆ ಮತ್ತೆ ಬಂತು ಜೀವಕಳೆ

ವಾಯು ರಕ್ಷಣಾ ವ್ಯವಸ್ಥೆ ಬಲಗೊಳಿಸಲು ಅಸ್ತ್ರ: "THAAD ಬ್ಯಾಟರಿಯು ಇಸ್ರೇಲ್‌ನ ಸಮಗ್ರ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುತ್ತದೆ ಎಂದು ಪೆಂಟಗನ್ ಹೇಳಿದೆ. ಥಾಡ್​​ ನಿಯೋಜನೆಯು ಇಸ್ರೇಲ್ ಅನ್ನು ರಕ್ಷಿಸಲು ಮತ್ತು ಇರಾನ್‌ನ ಯಾವುದೇ ದಾಳಿಯಿಂದ ಈ ಪ್ರದೇಶದ ರಕ್ಷಣೆ ನೀಡಲು ಅಮೆರಿಕ ಬದ್ಧವಾಗಿದೆ ಎಂದು ಇದೇ ವೇಳೆ ಪೆಂಟಗನ್​ ಸ್ಪಷ್ಟಪಡಿಸಿದೆ. ಇದು ಇಸ್ರೇಲ್​​​​ನ ಸುರಕ್ಷತೆಯನ್ನು ಒದಗಿಸುವುದಲ್ಲದೇ. ಇರಾನ್ ಮತ್ತು ಇರಾನ್-ಸಂಯೋಜಿತ ಸೇನಾಪಡೆಗಳ ದಾಳಿಯಿಂದ ಅಮೆರಿಕನ್ನರನ್ನು ರಕ್ಷಿಸಲು US ಮಿಲಿಟರಿ ಇತ್ತೀಚಿನ ತಿಂಗಳುಗಳಲ್ಲಿ ಮಾಡಿದ ವ್ಯಾಪಕ ಹೊಂದಾಣಿಕೆಗಳ ಭಾಗವಾಗಿದೆ ಎಂದು ಹೇಳಿಕೆ ಸೇರಿಸಲಾಗಿದೆ.

ಅಮೆರಿಕದಿಂದ ಇಸ್ರೇಲ್​​ಗೆ ನಿರಂತರ ಬೆಂಬಲ: ಅಮೆರಿಕ ಇದೇ ಮೊದಲ ಬಾರಿಗೆನೂ ಇಸ್ರೇಲ್​​ಗೆ THAAD ವ್ಯವಸ್ಥೆಯನ್ನು ಒದಗಿಸಿಲ್ಲ. ಇದಕ್ಕೂ ಮೊದಲು ಇಂತಹ ವ್ಯವಸ್ಥೆಯನ್ನು ಅಮೆರಿಕ ಮಾಡಿತ್ತು. ಈ ವಿಚಾರವನ್ನು ಪೆಂಟಗನ್​ ಮತ್ತೊಮ್ಮೆ ಹೇಳಿದೆ. ಕಳೆದ ವರ್ಷ ಅಮೆರಿಕ ಪ್ರಾದೇಶಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಕ್ಟೋಬರ್ 7 ರ ದಾಳಿಯ ನಂತರ ಮಧ್ಯಪ್ರಾಚ್ಯಕ್ಕೆ THAAD ಬ್ಯಾಟರಿಯನ್ನು ಕಳುಹಿಸಿಕೊಟ್ಟಿತ್ತು.

ಅಕ್ಟೋಬರ್ 1 ರಂದು ಇಸ್ರೇಲ್ ಮೇಲೆ ಇರಾನ್​ ಕನಿಷ್ಠ 200 ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಈ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಇಸ್ರೇಲ್​ ತನ್ನ ನಾಗರಿಕರಿಗೆ ಅಡಗುತಾಣಗಳಲ್ಲಿ ರಕ್ಷಣೆ ಪಡೆದುಕೊಳ್ಳುವಂತೆ ಸೂಚನೆ ನೀಡಿತ್ತು. ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಇರಾನ್ ದಾಳಿಯ ಕೆಲವೇ ಗಂಟೆಗಳ ನಂತರ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭದ್ರತಾ ಕ್ಯಾಬಿನೆಟ್ ಸಭೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು "ಇರಾನ್ ದೊಡ್ಡ ತಪ್ಪು ಮಾಡಿದೆ ಮತ್ತು ಅದಕ್ಕೆ ನಾವು ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ನೇರ ಎಚ್ಚರಿಕೆ ನೀಡಿತ್ತು.

ಅಕ್ಟೋಬರ್ 1ರ ಇರಾನ್‌ನ ದಾಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ಅಮೆರಿಕ, ಇಸ್ರೇಲ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಇರಾನ್ ಪರಮಾಣು ತಾಣಗಳ ಮೇಲೆ ಇಸ್ರೇಲ್ ದಾಳಿ ಮಾಡುವುದು ನಮಗೆ ಇಷ್ಟವಿಲ್ಲ ಎಂದೂ ಅಮೆರಿಕ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದಾರೆ.

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಆಗಸ್ಟ್ ನಂತರ ಮೊದಲ ಬಾರಿಗೆ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ.

ಏನಿದು ಥಾಡ್‌ ?: ಥಾಡ್‌ ಎಂಬುದು ಒಂದು ಕ್ಷಿಪಣಿ ರಕ್ಷಣಾ ತಂತ್ರಜ್ಞಾನವಾಗಿದೆ. ಇದು ಸಣ್ಣ ಹಾಗೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಆಕಾಶದಲ್ಲಿಯೇ ತಡೆದು ನಾಶಗೊಳಿಸುವ ವ್ಯವಸ್ಥೆಯಾಗಿದೆ. 1987ರಲ್ಲಿ ಇದನ್ನು ವಿನ್ಯಾಸಗೊಳಿಸಲಾಯಿತು ಹಾಗೂ 2008ರಲ್ಲಿ ಇದನ್ನು ಅಂತಿಮಗೊಳಿಸಿ ಪ್ರಯೋಗಿಸಲಾಯಿತು. ಇದನ್ನು ವೈರಿಯ ಮೇಲೆ ದಾಳಿ ಮಾಡಲು ಉಪಯೋಗಿಸುವಂತಿಲ್ಲ. ಆದರೆ, ವೈರಿ ದೇಶಗಳ ಕ್ಷಿಪಣಿ ದಾಳಿಯನ್ನು ತಡೆಯಲು ಇದು ಅತ್ಯಅಗತ್ಯ. ಶಕ್ತಿಯುತ ರೇಡಾರ್‌ ಹೊಂದಿರುವ ಥಾಡ್‌, ಕ್ಷಿಪಣಿಗಳನ್ನು ಮೂಲದಲ್ಲಿಯೇ ಗುರುತಿಸಿ ಉಡಾವಣೆಗೂ ಮುನ್ನ ಅಥವಾ ಆಕಾಶಮಾರ್ಗದಲ್ಲಿ ಸ್ಫೋಟಿಸಿ ನಾಶಗೊಳಿಸುತ್ತದೆ.

ಇದನ್ನು ಓದಿ: ಇಸ್ರೇಲ್​ ಸೇನಾ ನೆಲೆ ಮೇಲೆ ಹಿಜ್ಬುಲ್ಲಾ ಪ್ರತಿದಾಳಿ 4 ಸೈನಿಕರು ಸಾವು: IDF ಶೆಲ್​ ದಾಳಿಗೆ 19 ಪ್ಯಾಲಿಸ್ಟೇನಿಯರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.