ETV Bharat / sports

ಸೂಪರ್​ ಓವರ್​ನಲ್ಲಿ ಒಂದೇ ಒಂದು ರನ್​ ಬಿಟ್ಟುಕೊಡದೆ ವಿಶ್ವದಾಖಲೆ ಬರೆದ ಬೌಲರ್​ ಯಾರು ಗೊತ್ತಾ?

ಟಿ20 ಕ್ರಿಕೆಟ್​ನಲ್ಲಿ ಸೂಪರ್​ ಓವರ್​ ಮೇಡನ್​ ಮಾಡಿ ಬೌಲರ್​ವೊಬ್ಬರು ವಿಶ್ವ ದಾಖಲೆ ಬರೆದಿದ್ದಾರೆ. ​

author img

By ETV Bharat Sports Team

Published : 2 hours ago

ಕ್ರಿಕೆಟ್​ ಅಪರೂಪ ದಾಖಲೆ
ಕ್ರಿಕೆಟ್​ ಅಪರೂಪ ದಾಖಲೆ (Getty Images)

Maiden super over in T20:ಕ್ರಿಕೆಟ್​ ಜಗತ್ತಿನಲ್ಲಿ ದಾಖಲೆಗಳನ್ನು ನಿರ್ಮಿಸುವುದು ಮತ್ತು ಆ ದಾಖಲೆಗಳನ್ನು ಬೇರೊಂದು ತಂಡ ಅಥವಾ ಆಟಗಾರರು ಮುರಿಯುವುದು ಸಹಜವಾಗಿದೆ. ಆದರೆ ಇದೇ ಕ್ರಿಕೆಟ್​ನಲ್ಲಿ ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗದಂತಹ ಹಲವಾರು ಅಪರೂಪದ ದಾಖಲೆಗಳು ಕೂಡ ನಿರ್ಮಾಣವಾಗಿವೆ. ಅವುಗಳಲ್ಲಿ 'ಮೇಡನ್​ ಸೂಪರ್​ ಓವರ್​' ಕೂಡ ಒಂದಾಗಿದೆ.

ಹೌದು, ಈ ದಾಖಲೆ ನಿರ್ಮಾಣವಾಗಿ ಇಂದಿಗೆ 10 ವರ್ಷಗಳು ಕಳೆದಿವೆ. ಆದರೆ ಇದನ್ನು ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ. ಅಲ್ಲದೇ ಇದನ್ನು ಮುರಿಯುವುದು ಕೂಡ ಸುಲಭದ ಮಾತಾಗಿಲ್ಲ. ಹಾಗಾದ್ರೆ ಬನ್ನಿ ಯಾವ ಆಟಗಾರ ಮೇಡನ್​ ಸೂಪರ್​ ಓವರ್ ದಾಖಲೆ ಬರೆದಿದ್ದು ಮತ್ತು ಯಾವ ಲೀಗ್​​ನಲ್ಲಿ ಇದು ಸಂಭವಿಸಿತು ಎಂದು ತಿಳಿದುಕೊಳ್ಳೋಣ.

ಸುನಿಲ್​ ನರೈನ್​
ಸುನಿಲ್​ ನರೈನ್​ (IANS)

2014ರಲ್ಲಿ ನಡೆದ ಕೆರೆಬಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ ರೆಡ್​ ಸ್ಟೀಲ್​ ಮತ್ತು ಗಯಾನ ಅಮೇಜಾನ್ ವಾರಿಯರ್ಸ್​ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ರೆಡ್​​ ಸ್ಟೀಲ್​ ತಂಡ ಎವಿನ್​ ಲೇವಿಸ್​ (39), ನಿಕೋಲಸ್​ ಪೂರನ್​ (37) ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 118 ಕಲೆಹಾಕಿತ್ತು. ಇದಕ್ಕುತ್ತರವಾಗಿ ಗಯಾನ ವಾರಿಯರ್ಸ್​ ಕೂಡ 20 ಓವರ್​ಗಳಲ್ಲಿ 118 ರನ್​ಗಳಿಸಿದ ಕಾರಣ ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು. ನಂತರ ಪಂದ್ಯದ ಫಲಿತಾಂಶಕ್ಕಾಗಿ ಉಭಯ ತಂಡಗಳ ನಡುವೆ ಸೂಪರ್​ ಓವರ್​​ ಆಡಿಸಲಾಯಿತು.

ಸುನಿಲ್​ ನರೈನ್​
ಸುನಿಲ್​ ನರೈನ್​ (IANS)

ಸೂಪರ್​ ಓವರ್​ನಲ್ಲಿ ಮೊದಲು ಬ್ಯಾಟ್​ ಮಾಡಿದ ಗಯಾನ ವಾರಿಯರ್ಸ್​ 6 ಎಸೆತಗಳಲ್ಲಿ 11 ರನ್​ ಕಲೆಹಾಕಿತು. ಈ ಪಂದ್ಯವನ್ನು ಗೆಲ್ಲಲು ರೆಡ್​ ಸ್ಟೀಲ್​ಗೆ 12 ರನ್​ಗಳು ಬೇಕಿತ್ತು. ಈ ವೇಳೆ ವಾರಿಯರ್ಸ್​ ತಂಡ ಸ್ಪಿನ್ನರ್​ ಸುನಿಲ್​ ನರೈನ್​ ಅವರನ್ನು ಬೌಲಿಂಗ್​ ಮಾಡಲು ಕಣಕ್ಕಿಳಿಸಿತು. ಗೆಲ್ಲಲು 12ರನ್​ ಗಳಿಸಿಬೇಕಿದ್ದ ರೆಡ್​ ಸ್ಟೀಲ್​ ನರೈನ್​ ಅವರ ಸ್ಪಿನ್​ ದಾಳಿಗೆ ಸಿಲುಕಿ ಈ ಓವರ್​ನಲ್ಲಿ ಒಂದೇ ಒಂದು ರನ್​ ಗಳಿಸಲು ಸಾಧ್ಯವಾಗಲಿಲ್ಲ.

ಸುನಿಲ್​ ನರೈನ್​
ಸುನಿಲ್​ ನರೈನ್​ (IANS)

ಅಲ್ಲದೇ ಈ ಸೂಪರ್​ ಓವರ್​ನಲ್ಲಿ ಸುನೀಲ್​ ನರೈನ್​ ತಮ್ಮ 6 ಎಸೆತಗಳಲ್ಲಿ ಒಂದು ವಿಕೆಟ್​ ಕೂಡ ಪಡೆದರು. ಇದರಿಂದಾಗಿ ವಾರಿಯರ್ಸ್​ ತಂಡ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಸುನೀಲ್​ ನರೈನ್​ ಕೂಡ ಸೂಪರ್​ ಓವರ್​ ಮೇಡನ್​ ಮಾಡಿದ ವಿಶ್ವದ ಮೊದಲ ಬೌಲರ್​ ಎಂಬ ದಾಖಲೆ ಬರೆದರು. ಅಂದೂ ನಿರ್ಮಾಣವಾಗಿರುವ ಈ ದಾಖಲೆ ಇಂದಿಗೂ ಯಾರಿಂದ ಮುರಿಯಲು ಸಾಧ್ಯವಾಗದೆ ಹಾಗೆ ಉಳಿದುಕೊಂಡಿದೆ.

ಸುನಿಲ್​ ನರೈನ್​
ಸುನಿಲ್​ ನರೈನ್​ (IANS)

ಇದಕ್ಕೂ ಮುನ್ನ ಈ ಪಂದ್ಯದಲ್ಲಿ 4 ಓವರ್​ ಬೌಲಿಂಗ್​ ಮಾಡಿದ್ದ ನರೈನ್​ 23 ರನ್​ಗಳನ್ನು ನೀಡಿ 2 ವಿಕೆಟ್​ ಕೂಡ ಉರುಳಿಸಿದ್ದರು. ಬ್ಯಾಟಿಂಗ್​ನಲ್ಲಿ 9 ಎಸೆತಗಳಲ್ಲಿ 16 ರನ್​ಗಳನ್ನು ಚಚ್ಚಿದ್ದರು.

ಇದನ್ನೂ ಓದಿ: 'ಕೊಹ್ಲಿ ಬ್ಯಾಟ್ ನನ್ನ ಇಮೇಜ್ ಡ್ಯಾಮೇಜ್ ಮಾಡಿತು, ಇನ್ಮುಂದೆ ಯಾರಿಗೂ ಬ್ಯಾಟ್ ಕೇಳಲ್ಲ': ರಿಂಕು ಹೀಗೆ ಹೇಳಿದ್ದು ಏಕೆ?​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.