ಕರ್ನಾಟಕ

karnataka

By ETV Bharat Karnataka Team

Published : 21 hours ago

ETV Bharat / snippets

ಡ್ರಿಂಕ್ ಆ್ಯಂಡ್ ಡ್ರೈವ್: ಬೆಂಗಳೂರಲ್ಲಿ ಒಂದು ವಾರದಲ್ಲಿ 1,146 ಚಾಲಕರ ವಿರುದ್ಧ ಎಫ್‌ಐಆರ್‌

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಬೆಂಗಳೂರು:ನಗರದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು, ಕಳೆದ‌ೊಂದು ವಾರದಲ್ಲಿ 1,146 ಪ್ರಕರಣಗಳ‌ನ್ನು ದಾಖಲಿಸಿಕೊಂಡಿದ್ದಾರೆ.

ಡ್ರಿಂಕ್ ಆ್ಯಂಡ್ ಡ್ರೈವ್​ನಿಂದ ಸಂಭವಿಸುವ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸೆಪ್ಟಂಬರ್ 16ರಿಂದ 22ರವರೆಗೂ ನಗರದಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಒಟ್ಟು 75,800 ವಾಹನಗಳನ್ನು ತಪಾಸಣೆ ನಡೆಸಿ, ಈ ಪೈಕಿ ಪಾನಮತ್ತರಾಗಿದ್ದ 1,146 ಚಾಲಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ನಗರದಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ದೃಷ್ಟಿಯಿಂದ ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಯುವಕನ ಮುಖಕ್ಕೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಎರಚಿ ದುಷ್ಕರ್ಮಿ ಪರಾರಿ - Acid Attack

ABOUT THE AUTHOR

...view details