ಬೆಂಗಳೂರು: ಎಸ್ಎಸ್ಎಲ್ಸಿ ಅರ್ಧವಾರ್ಷಿಕ ಪರೀಕ್ಷೆ ಸಂಕಲನಾತ್ಮಕ ಮೌಲ್ಯ ಮಾಪನ-1 ನಾಳೆಯಿಂದ ಅಕ್ಟೋಬರ್ 1ರವರೆಗೆ ನಡೆಯಲಿದ್ದು, ಇದೇ ಮೊದಲ ಬಾರಿ ರಾಜ್ಯಾದ್ಯಂತ ಏಕರೂಪದ ಪರೀಕ್ಷೆ ನಡೆಯಲಿದೆ.
ಅದೇ ರೀತಿ ಮೊದಲ ಬಾರಿಗೆ ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲೂ ಏಕರೂಪದ ಪರೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುತ್ತಿದೆ. ಪರೀಕ್ಷಾ ಸಮಯಕ್ಕೆ ಸರಿಯಾಗಿ ಎಲ್ಲ ಶಾಲೆಗಳಿಗೂ ಪ್ರಶ್ನೆ ಪತ್ರಿಕೆ ತಲುಪಲಿವೆ.
ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳನ್ನು ಅಕ್ಟೋಬರ್ 1ರಂದು ಮಧ್ಯಾಹ್ನ ಆಯಾ ಶಾಲೆಗಳಲ್ಲಿ ನಡೆಸುವಂತೆ ಮಂಡಳಿ ಸೂಚಿಸಿದೆ.
ಇದನ್ನೂ ಓದಿ: ಯುಜಿ ಸಿಇಟಿ-ನೀಟ್: ಎಂಜಿನಿಯರಿಂಗ್ ಸೆ.23, ವೈದ್ಯಕೀಯ ಸೆ.24ರಿಂದ ಪ್ರವೇಶ ಆರಂಭ - UG CET NEET Seat Allotment