ETV Bharat / entertainment

1 ಚಿತ್ರ, 5 ಡೈರೆಕ್ಟರ್ಸ್, 5 ಕಥೆ: 'ಬಿಟಿಎಸ್' ಟ್ರೇಲರ್​ ನೋಡಿ - BTS TRAILER

'ಬಿಟಿಎಸ್' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ​

BTS film team
ಬಿಟಿಎಸ್​ ಚಿತ್ರತಂಡ (ETV Bharat)
author img

By ETV Bharat Entertainment Team

Published : Nov 5, 2024, 7:53 PM IST

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲ ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ. ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಹೆಮ್ಮೆಯ ವಿಷಯ.‌

ಇದೀಗ ಉಪ್ಪಿನ ಕಾಗದ, ನೋಡಿ ಸ್ವಾಮಿ ಇವನು ಇರೋದೇ ಹೀಗೆ, ಕ್ರಿಟಿಕಲ್ ಕಥೆಗಳು, ನಾನು ಅದು ಮತ್ತು ಸರೋಜಾ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಐಡೆಂಟಿಟಿ ಹೊಂದಿರುವ ಅಪೂರ್ವ ಭಾರದ್ವಾಜ್ ಅವರು ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಐವರು ಯುವ ಸಿನಿಮೋತ್ಸಾಹಿಗಳ ಹೊಸ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಬಿಟಿಎಸ್ ಅಂತಾ ಟೈಟಲ್ ಇಡಲಾಗಿದೆ.

ಬಿಟಿಎಸ್ ಎಂದರೆ 'ಬಿಹೈಂಡ್ ದಿ ಸೀನ್ಸ್' ಎಂದರ್ಥ. ಇಡೀ ಸಿನಿಮಾದ ಥೀಮ್ - ತೆರೆಯ ಹಿಂದಿನ ಕಥೆಗಳು. ಹೀಗಾಗಿ ಈ ಚಿತ್ರಕ್ಕೆ ಈ ಟೈಟಲ್ ಇಡಲಾಗಿದೆ. 'ಬಿಟಿಎಸ್' ಟ್ರೇಲರ್ ರಿಲೀಸ್ ಆಗಿದ್ದು, ಹೊಸಬರ ಪ್ರಯತ್ನ ಗಮನ ಸೆಳೆಯುತ್ತಿದೆ. ಈ ಕಾಲದ ನಿರ್ದೇಶಕರ ಐದು ಕಥೆಗಳು ಈ ಸಿನಿಮಾದಲ್ಲಿವೆ. 'ಬಾನಿಗೊಂದು ಎಲ್ಲೆ ಎಲ್ಲಿದೆ', 'ಕಾಫಿ, ಸಿಗರೇಟ್ಸ್ ಅಂಡ್ ಲೈನ್ಸ್', 'ಹೀರೋ', 'ಬ್ಲ್ಯಾಕ್ ಬಸ್ಟರ್' ಹಾಗೂ ಸುಮೋಹ' ಎಂಬ ಕಥೆಗಳು ಬಿಟಿಎಸ್ ಚಿತ್ರದ ಹೈಲೆಟ್ಸ್.

BTS film team
ಬಿಟಿಎಸ್​ ಚಿತ್ರತಂಡ (film poster)

ಇದನ್ನೂ ಓದಿ: ರಿಷಬ್​ ಶೆಟ್ಟಿ ಸಿನಿಮಾದಲ್ಲಿ ಬಾಹುಬಲಿ​​ ಸ್ಟಾರ್​?: ಇಂಟ್ರೆಸ್ಟಿಂಗ್​​ ಫೋಟೋ ಹಂಚಿಕೊಂಡ 'ಜೈ ಹನುಮಾನ್​' ನಿರ್ದೇಶಕ

ಬಿಹೈಂಡ್ ದಿ ಸೀನ್ಸ್ ಚಿತ್ರವನ್ನು ಅಪೂರ್ವ ಭಾರದ್ವಾಜ್, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್. ಶಂಕದ್ ಸೇರಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಸಿನಿಮಾಗೆ ಬಂಡವಾಳ ಹಾಕಿರುವುದು ಗಮನಾರ್ಹ. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಸೇರಿದಂತೆ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

BTS film team
ಬಿಟಿಎಸ್​ ಚಿತ್ರತಂಡ (film poster)

ಇದನ್ನೂ ಓದಿ: ಭೈರತಿ ರಣಗಲ್ ಟ್ರೇಲರ್​​: ಶಿವಣ್ಣನ ಮಾಸ್​ ಲುಕ್​​​​ಗೆ ಫ್ಯಾನ್ಸ್ ಫಿದಾ; ಇನ್ಮುಂದೆ ರೋಣಾಪುರದಲ್ಲಿರೋದು ಏನ್​ ಗೊತ್ತಾ?

ಬಿಟಿಎಸ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದೇ ನ.8ಕ್ಕೆ ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದೆ. ಚಿತ್ರತಂಡ ಜನರ ಬಳಿಗೆ ಹೋಗಿ ಅವರು ಕಾಫಿ ಕುಡಿಯುವ, ಸಿಗರೇಟ್ ಸೇದುವ ಟೈಮಲ್ಲೇ ಸಿನಿಮಾ ಟೀಸರ್ ತೋರಿಸಿ, ಚಿತ್ರದತ್ತ ಸೆಳೆಯುವ ಪ್ರಯತ್ನದಲ್ಲಿದೆ ಚಿತ್ರತಂಡ. ಚಾ ಅಂಗಡಿ ಸೇರಿ ಮೊದಲಾದೆಡೆ ಬಿಳಿ ಹಾಳೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಗಮನ ಸೆಳೆಯುವ ಟ್ಯಾಗ್‌ಲೈನ್‌ನೊಂದಿಗೆ ಸಿನಿಮಾ ಪ್ರಮೋಶನ್ ಮಾಡಲಾತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವುದಕ್ಕೆ ಚಿತ್ರತಂಡ ಖುಷಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.