ಮೈಸೂರು: ಕರ್ನಾಟಕ ರಾಜ್ಯ ಅಂಧರ ಕ್ರಿಕೆಟ್ ಪಂದ್ಯಾವಳಿ 2024ರ ಮೈಸೂರು ಸರ್ಕಾರಿ ಅಂಧರ ಶಾಲೆ ಚಾಂಪಿಯನ್ ಆಗಿ, ಮೈಸೂರು ಸಮರ್ಥನಂ ಟ್ರಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿವೆ.
ಮೊದಲು ಸರ್ಕಾರಿ ಅಂಧರ ಮೈಸೂರು ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸಮರ್ಥನಂ ಟ್ರಸ್ಟ್ ಮೈಸೂರು 10 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ಸಮರ್ಥನಂ ಪರವಾಗಿ ಭಾಸ್ಕರ್ 7 ಬೌಂಡರಿಯೊಂದಿಗೆ 65 ರನ್ 34 ಎಸೆತ, ಹುಸೇನ್ 22 ಎಸೆತಗಳಲ್ಲಿ 32 ರನ್ ಗಳಿಸಿದರು.
109 ರನ್ಗಳ ಗುರಿ ಬೆನ್ನತ್ತಿದ ಮೈಸೂರು ಅಂಧರ ಶಾಲೆ ಯಾವುದೇ ವಿಕೆಟ್ ನಷ್ಟವಿಲ್ಲದೇ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ಕೇಕೆ ಹಾಕಿತು. ಮೈಸೂರು ಅಂಧರ ಶಾಲೆಯ ಪರವಾಗಿ ಸುಬ್ರಮಣಿ 7 ಬೌಂಡರಿಗಳೊಂದಿಗೆ 31 ಎಸೆತಗಳಲ್ಲಿ 47 ರನ್ ಪಡೆದರು. ಅಭಿ 30 ಎಸೆತಗಳಲ್ಲಿ 40 ರನ್ ಗಳಿಸಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.
ಸರಣಿ ಪುರುಷೋತ್ತಮ ಪ್ರಶಸ್ತಿಗಳು: ಬಿ1 ವಿಭಾಗದಲ್ಲಿ ಹಾವೇರಿ ತಂಡದ ಸಂಜೀವಯ್ಯ, ಬಿ2 ವಿಭಾಗದಲ್ಲಿ ಮೈಸೂರು ಅಂಧರ ಶಾಲೆಯ ಅಭಿ, ಬಿ3 ವಿಭಾಗದಲ್ಲಿ ಮೈಸೂರು ಅಂಧರ ಶಾಲೆ ಸುಬ್ರಮಣಿ ಸರಣಿ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭ: ಈ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಶೈಲಜಾ, ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾದ ಎಸ್ ಮೂರ್ತಿ, ಲಯನ್ಸ್ ಕ್ಲಬ್ ನ ಜಯಕುಮಾರ್, ರೋಟರಿ ವೆಸ್ಟ್ ಮೈಸೂರು ಅಧ್ಯಕ್ಷರಾದ ನಾಗೇಶ್, ಕರ್ನಾಟಕ ಅಂಧರ ಕ್ರಿಕೆಟ್ ಮಂಡಳಿಯ ಚಂದ್ರಶೇಖರ್, ಸತೀಶ್, ಚಂದ್ರಕಾಂತ್, ಸಮರ್ಥನಂ ಮೈಸೂರು ವಿಭಾಗದ ಸಂಯೋಜಕ ಶಿವರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಮುಂದಿನ ಕ್ಯಾಪ್ಟನ್ ಇವರೇ: ಸಿಕ್ಕಿತು ದೊಡ್ಡ ಸುಳಿವು!