ಬೆಂಗಳೂರು: ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿ.ಇ.ಆರ್.ಟಿ- ಇನ್), ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಫೊರೆನ್ಸಿಕ್ಸ್ ಚಾಲಿತ ಸೈಬರ್ ಸೆಕ್ಯುರಿಟಿಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸಿಸಾ ಸಂಸ್ಥೆ ಜಂಟಿಯಾಗಿ ಸರ್ಟಿಫೈಡ್ ಸೆಕ್ಯುರಿಟಿ ಪ್ರೊಫೆಷನಲ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮವು ಕೃತಕ ಬುದ್ಧಿಮತ್ತೆಯ ಭದ್ರತಾ ಪ್ರಮಾಣೀಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಪ್ರೋಗ್ರಾಂ ಸುಸ್ಥಿರತೆಗೆ ಬದ್ಧವಾಗಿರುವಾಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ವ್ಯಾಪಾರದ ಪ್ರಕ್ರಿಯೆಗಳಿಗೆ ಪರಿಣಾಮಕಾರಿಯಾಗಿ ಸಂಯೋಜಿಸಲು ಅಗತ್ಯವಿರುವ ಕೌಶಲ್ಯಗಳನ್ನು ಒಳಗೊಂಡ ಭದ್ರತಾ ವೃತ್ತಿಪರರನ್ನು ಸಜ್ಜುಗೊಳಿಸಲಿದೆ.
ಸೋಮವಾರ ಬೆಂಗಳೂರಿನ ಸಿಸಾ ಪ್ರಧಾನ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿ.ಇ.ಆರ್.ಟಿ-ಇನ್ ಮಹಾನಿರ್ದೇಶಕ ಡಾ.ಸಂಜಯ್ ಬಹ್ಲ್, ಸಿಸಾ ಸಂಸ್ಥಾಪಕ-ಸಿಇಒ ದರ್ಶನ್ ಶಾಂತಮೂರ್ತಿ ಮಾನ್ಯತೆ ಪಡೆದ ಕೃತಕ ಬುದ್ಧಿಮತ್ತೆ ಭದ್ರತಾ ಪ್ರಮಾಣೀಕರಣ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಡಾ.ಸಂಜಯ್ ಬಹ್ಲ್ ಮಾತನಾಡಿ, "ಸಿಸಾ ಸಂಸ್ಥೆಯ ಸಮಯೋಚಿತ ಕಾರ್ಯಕ್ರಮ ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಬಗ್ಗೆ ತಿಳುವಳಿಕೆಯನ್ನು ಪಡೆಯಲು ಮತ್ತು ಹೊಸ ಸ್ಪೆಕ್ಟ್ರಮ್ ಬೆದರಿಕೆಗಳ ವಿರುದ್ಧ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಲು ಸಮಗ್ರ ಪರಿಣತಿ ಹೊಂದಿರುವ ವೃತ್ತಿಪರರನ್ನು ತಯಾರು ಮಾಡಲಿದೆ. ಇದು ಮೊದಲ ಮಾನ್ಯತೆ ಪಡೆದ ಕೃತಕ ಬುದ್ಧಿಮತ್ತೆ ಭದ್ರತಾ ಪ್ರಮಾಣೀಕರಣ ಕಾರ್ಯಕ್ರಮವಾಗಿದೆ. ಈ ಕೋರ್ಸ್ ಸೈಬರ್ ಭದ್ರತೆಯಲ್ಲಿ ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ಬೆದರಿಕೆಗಳಿಗೆ ಉತ್ತಮವಾಗಿ ಪ್ರತಿಕ್ರಿಯೆ ನೀಡಲಿದೆ" ಎಂದು ಅಭಿಪ್ರಾಯಪಟ್ಟರು.
"ಈ ಕ್ಯುರೇಟೆಡ್ ಕೋರ್ಸ್ ಕೃತಕ ಬುದ್ಧಿಮತ್ತೆಯ ಭದ್ರತೆಯ ಎಲ್ಲಾ ಪ್ರಮುಖ ಅಂಶಗಳನ್ನು ಹೊಂದಿದೆ ಮತ್ತು ಕೆಲಸದ ಪರಿಸರದಲ್ಲಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳಲು ಮತ್ತು ನಿಯೋಜಿಸಲು ಸಹಾಯ ಮಾಡಲಿದೆ. ಕಾರ್ಯಕ್ರಮವು ಉದಯೋನ್ಮುಖ ಉದ್ಯೋಗಾವಕಾಶಗಳಿದೆ ಮುನ್ನುಡಿ ಬರೆಯಲಿದೆ. ಜಂಟಿ ಪ್ರಮಾಣೀಕರಣ ಕಾರ್ಯಕ್ರಮವು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಬೆಳೆಸುವ ನಮ್ಮ ಪ್ರಯತ್ನಗಳಲ್ಲಿ ಮತ್ತೊಂದು ಹೆಜ್ಜೆಯಾಗಿದೆ" ಎಂದು ಅವರು ಹೇಳಿದರು.
ದರ್ಶನ್ ಶಾಂತಮೂರ್ತಿ ಮಾತನಾಡಿ, "ಕಾರ್ಯಕ್ರಮವು ಭವಿಷ್ಯದ ಸೈಬರ್ ಸುರಕ್ಷತೆ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲಿದೆ. ಈ ಕಾರ್ಯಕ್ರಮ ಭಾರತದಲ್ಲಿ ಮತ್ತು ಜಾಗತಿಕವಾಗಿ ಹೆಚ್ಚಾಗಿ ತೊಂದರೆಯನ್ನು ಉಂಟುಮಾಡುತ್ತಿರುವ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲಿದೆ. ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳನ್ನು ರಕ್ಷಿಸಲು ಪರಿಕರಗಳನ್ನು ತಯಾರಿಸುವ ಜ್ಞಾನ ಹೊಂದಿರುವ ವೃತ್ತಿಪರರನ್ನು ಸಜ್ಜುಗೊಳಿಸಲಿದೆ. ಸುರಕ್ಷಿತ ಡಿಜಿಟಲ್ ಭವಿಷ್ಯವನ್ನು ನಿರ್ಮಿಸಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.