ETV Bharat / technology

ಶೀಘ್ರದಲ್ಲೇ ಥೀಮ್ ಚಾಟ್ ಪರಿಚಯಿಸಲಿದೆ ವಾಟ್ಸ್‌ಆ್ಯಪ್​ - WhatsApp Theme Chat Feature

author img

By ETV Bharat Tech Team

Published : 2 hours ago

WhatsApp Theme Chat Feature: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಮತ್ತೊಂದು ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ಗ್ರಾಹಕರಿಗೆ ಉತ್ತಮ ಅನುಭವ ಒದಗಿಸುವ ಚಾಟ್ ಥೀಮ್ ಶೀಘ್ರದಲ್ಲೇ ಬೀಟಾ ಬಳಕೆದಾರರಿಗೆ ಲಭ್ಯವಾಗಲಿದೆ.

WHATSAPP NEW UPDATE TODAY  WHATSAPP LATEST FEATURES  WHATSAPP NEW FEATURES 2024  WHATSAPP CHAT THEME
ವಾಟ್ಸ್‌ಆ್ಯಪ್​ (ETV Bharat)

WhatsApp Theme Chat Feature: ಬಳಕೆದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಪ್ಲಾಟ್‌ಫಾರ್ಮ್ ಅನ್ನು ಆಲ್-ಇನ್-ಒನ್ ಮಾಡಲು ಪ್ರಯತ್ನಿಸುತ್ತಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಹಲವು ವೈಶಿಷ್ಟ್ಯಗಳನ್ನು ಹೊರತಂದಿದೆ.

ಸಂವಹನವನ್ನು ಮತ್ತಷ್ಟು ಸುಲಭಗೊಳಿಸಲು ವಾಯ್ಸ್ ನೋಟ್ ಟ್ರಾನ್ಸ್‌ಕ್ರಿಪ್ಟ್ ಎಂಬ ಹೊಸ ಫೀಚರ್‌ ಅನ್ನು ಇತ್ತೀಚೆಗೆ ಪರಿಚಯಿಸಿತ್ತು. ಚಾಟ್ ಎಂಬ ಹೊಸ ವೈಶಿಷ್ಟ್ಯವನ್ನು ಹೊತ್ತು ತರಲು ಇದೀಗ ಮತ್ತೊಂದು ಥೀಮ್ ಸಿದ್ಧವಾಗುತ್ತಿದೆ.

ವಾಟ್ಸ್‌ಆ್ಯಪ್ ಚಾಟ್ ಥೀಮ್ ಫೀಚರ್ ಎಂದರೇನು?:

  • WhatsAppನ ಈ ಹೊಸ ವೈಶಿಷ್ಟ್ಯದ ಸಹಾಯದಿಂದ ಚಾಟ್‌ಗೆ ವಿವಿಧ ಥೀಮ್‌ಗಳನ್ನು ಸೇರಿಸಬಹುದು.
  • ತಮ್ಮ ಆಯ್ಕೆಯ ಬಣ್ಣಗಳಿಂದ ತುಂಬಿಸಬಹುದು. ಅಂದರೆ, ಇಷ್ಟಕ್ಕೆ ತಕ್ಕಂತೆ ಚಾಟ್ ಪುಟ ರಚಿಸಬಹುದು.
  • ಚಾಟಿಂಗ್ ಅನ್ನು ಹೆಚ್ಚು ಆಕರ್ಷಕವಾಗಿಸಲು WhatsApp ಈ ಸೌಲಭ್ಯವನ್ನು ತರುತ್ತಿದೆ.

ಇದು ಯಾವಾಗ ಲಭ್ಯ?:

  • ಪ್ರಸ್ತುತ ಹೊಸ ಥೀಮ್ ಚಾಟ್ ಅಭಿವೃದ್ಧಿ ಹಂತದಲ್ಲಿದೆ.
  • WhatsApp ಬಗ್ಗೆ ನಿಯಮಿತವಾಗಿ ನವೀಕರಣಗಳನ್ನು ಒದಗಿಸುವ Wabita Info ತನ್ನ ಬ್ಲಾಗ್​ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
  • ಬೀಟಾ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿಕೊಂಡಿದೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ.

Insta ಶೈಲಿಯ ಟ್ಯಾಗ್:

  • ಸಾಮಾನ್ಯವಾಗಿ, Instagramನಲ್ಲಿ ನಾವು ಸ್ಟೋರಿಯನ್ನು ಪೋಸ್ಟ್ ಮಾಡುವಾಗ @ ಸಹಾಯದಿಂದ ನಾವು ಇಷ್ಟಪಡುವ ಜನರನ್ನು ಟ್ಯಾಗ್ ಮಾಡುತ್ತೇವೆ.
  • ಅಂದರೆ, ನಾವು ಸ್ಟೋರಿಯನ್ನು ಪೋಸ್ಟ್ ಮಾಡಿದ್ದೇವೆ ಎಂದು ಥರ್ಡ್​ ಪಾರ್ಟಿ ನೋಟಿಫಿಕೇಶನ್​ ಸ್ವೀಕರಿಸುತ್ತಾರೆ. ಆಗ ಅವರು ನಮ್ಮ ಸ್ಟೋರಿಯನ್ನು ನೋಡಬಹುದು.
  • ವಾಟ್ಸ್‌ಆ್ಯಪ್ ಕೂಡ ಇಂತಹ ಸೌಲಭ್ಯವನ್ನು ತರಲು ಮುಂದಾಗಿದೆ. ಅಂದರೆ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಹೊಂದಿಸುವಾಗ ಕಾಂಟ್ಯಾಕ್ಟ್‌ಗಳಲ್ಲಿ ನಮಗಿಷ್ಟವಾದವರನ್ನು ಟ್ಯಾಗ್ ಮಾಡಬಹುದು.
  • ಆದರೆ, ಟ್ಯಾಗ್ ಮಾಡಿದ ವ್ಯಕ್ತಿಯ ಹೆಸರು WhatsAppನಲ್ಲಿ ಎಲ್ಲರಿಗೂ ಕಾಣಿಸುವುದಿಲ್ಲ. ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗದಂತೆ ಈ ವೈಶಿಷ್ಟ್ಯವನ್ನು ತರಲಾಗುತ್ತಿದೆ.

ಇದನ್ನೂ ಓದಿ: ಬ್ಯೂಟಿ ಫಿಲ್ಟರ್​ ನಿಲ್ಲಿಸಲಿದೆ ಇನ್​ಸ್ಟಾಗ್ರಾಮ್ - Instagram Beauty Filter

ETV Bharat Logo

Copyright © 2024 Ushodaya Enterprises Pvt. Ltd., All Rights Reserved.