ETV Bharat / state

ಬುಲೆಟ್ ಬೈಕ್ ಇಲ್ಲದ ಹತಾಶೆ: ಪೆಟ್ರೋಲ್ ಕದ್ದು 3 ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟವ ಅರೆಸ್ಟ್ - Bengaluru Crime

ರಾಯಲ್ ಎನ್​ಫೀಲ್ಡ್ ಸೇರಿ ಮೂರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟ ಆರೋಪಿ ಅರೆಸ್ಟ್
ದ್ವಿಚಕ್ರವಾಹನಗಳಿಗೆ ಬೆಂಕಿ ಇಟ್ಟ ಆರೋಪಿ ಅರೆಸ್ಟ್ (ETV Bharat)
author img

By ETV Bharat Karnataka Team

Published : Sep 24, 2024, 9:45 AM IST

ಬೆಂಗಳೂರು: ತನ್ನ ಬಳಿ ಬುಲೆಟ್ ಬೈಕ್ ಇಲ್ಲದಿರುವ ಹತಾಶೆಯಲ್ಲಿ ಪೆಟ್ರೋಲ್ ಕದ್ದು ನಗರದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುಲಕೀತ್ (25) ಬಂಧಿತ ಆರೋಪಿ.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ವಾಸವಾಗಿರುವ ಈತ ಸೆ.19ರ ಬೆಳಗ್ಗೆ ಹೆಚ್.ಎಂ.ಟಿ ಲೇಔಟ್ ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್​​ಫೀಲ್ಡ್ ಸೇರಿದಂತೆ ಮೂರು ದ್ವಿಚಕ್ರವಾಹನಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಬೆಂಕಿಯ ತೀವ್ರತೆಗೆ ಮೂರು ದ್ವಿಚಕ್ರವಾಹನಗಳಿಗೆ ಹಾನಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರವಾಹನಗಳಿಗೆ ಬೆಂಕಿ
ದ್ವಿಚಕ್ರವಾಹನಗಳಿಗೆ ಬೆಂಕಿ (ETV Bharat)

ಕಾಲೇಜು ವಿದ್ಯಾರ್ಥಿ ದೀಪಾಂಶು ಅಗರವಾಲ್ ಎಂಬವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ದೂರು ನೀಡಿದ ವಿದ್ಯಾರ್ಥಿ ಪಿಜಿಯಲ್ಲಿ ನೆಲೆಸಿದ್ದು, ಕೆಲ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬುಲೆಟ್ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

"ಸೆ.19ರಂದು ಪಿಜಿ ಮುಂದೆ ಬೈಕ್ ಪಾರ್ಕ್ ಮಾಡಿ ರಾತ್ರಿ 1 ಗಂಟೆವರೆಗೆ ಮಾತನಾಡಿ ಮಲಗಿದ್ದೆ. ಕೆಲ ಹೊತ್ತಿನ ಬಳಿಕ ಪಿಜಿಯಲ್ಲಿ ವಾಸವಾಗಿರುವ ಕೆಲವರು ಬಂದು ಬೈಕ್​​ಗೆ ಬೆಂಕಿ ಹೊತ್ತಿಕೊಂಡಿರುವ ವಿಚಾರ ತಿಳಿಸಿದರು. ಮಾರನೇ ದಿನ ಸಿಸಿಟಿವಿ ಪರಿಶೀಲಿಸಿದಾಗ, ಆರೋಪಿ ಪಾರ್ಕ್ ಮಾಡಲಾಗಿದ್ದ ಪೆಟ್ರೋಲ್ ಕದ್ದು ಮೂರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿರುವ ವಿಷಯ ಗೊತ್ತಾಯಿತು" ಎಂದು ಬೈಕ್ ಮಾಲೀಕ ಅಗರ್‌ವಾಲ್ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಲಕ್ಷಾಂತರ ರೂಪಾಯಿ ‌ಬಿಲ್ ಬಾಕಿ: ಉಡುಪಿ ಪ್ರವಾಸಿ ಮಂದಿರಕ್ಕೆ ಕತ್ತಲೆ ಭಾಗ್ಯ - power cut in pravasi mandhira

ETV Bharat Logo

Copyright © 2024 Ushodaya Enterprises Pvt. Ltd., All Rights Reserved.