IPL Mega Auction KL Rahul: ಈ ಬಾರಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದ RCB ಫ್ರಾಂಚೈಸಿ ಮೊದಲ ದಿನವೇ ಅಭಿಮಾನಗಳಿಗೆ ನಿರಾಸೆ ಮೂಡಿಸಿದೆ. ಭಾನವಾರ (ಇಂದು) ಅಬುಧಾಬಿಯ ಜೆಡ್ಡಾದಲ್ಲಿ ನಡೆದ ಮೊದಲ ದಿನದ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿಗೆ ಖರೀದಿಸಿತು.
ಕೆಎಲ್ ರಾಹುಲ್ರನ್ನು ಈ ಬಾರಿ ಆರ್ಸಿಬಿ ಖರೀದಿಸುತ್ತದೆ ಎಂದು ಕನ್ನಡಿಗರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಹರಾಜು ಪ್ರಕ್ರಿಯೆಯ ಒಂದು ಹಂತದಲ್ಲಿ ಆರ್ಸಿಬಿ ಕೂಡ ರಾಹುಲ್ ಮೇಲೆ ಬಿಡ್ಡಿಂಗ್ ಮಾಡಿತು. ಆದರೇ ಉಳಿದ ಫ್ರಾಂಚೈಸಿಗಳು ಪೈಪೋಟಿ ನೀಡಿದ್ದರಿಂದ ಖರೀದಿಸಲು ಹಿಂದೇಟು ಹಾಕಿತು. ಅಂತಿಮವಾಗಿ ಕನ್ನಡಿಗ ರಾಹುಲ್ ಡೆಲ್ಲಿ ಪಾಲಾದರು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಪ್ರತಿನಿಧಿಸಿದ್ದ ರಾಹುಲ್ ಕೆಲಕಾಲ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಈ ಬಾರಿ ಲಕ್ನೋ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆಸಕ್ತಿ ತೋರಿದ್ದರು ರಾಹುಲ್ ನಿರಾಕರಿಸಿ ಹರಾಜಿಗೆ ಎಂಟ್ರಿ ಕೊಟ್ಟಿದ್ದಾರೆ.
He garners interest ✅
— IndianPremierLeague (@IPL) November 24, 2024
He moves to Delhi Capitals ✅#DC & KL Rahul join forces for INR 14 Crore 🙌 🙌#TATAIPLAuction | #TATAIPL | @klrahul | @DelhiCapitals pic.twitter.com/ua1vTBNl4h
ಕಳೆದ ಸೀಸನ್ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ರಾಹುಲ್ ವಿರುದ್ಧ ಕೋಪ ಹೊರಹಾಕಿದ್ದರು. ಈ ಘಟನೆಯಿಂದಾಗಿ ಗೋಯೆಂಕಾ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಈ ಘಟನೆ ಬಳಿಕ ರಾಹುಲ್ ಲಕ್ನೋ ಫ್ರಾಂಚೈಸಿಯಿಂದ ದೂರವಿರಲು ನಿರ್ಧರಿಸಿದ್ದರು ಎಂದು ವರದಿಗಳಾಗಿತ್ತು. ಅದಾಗ್ಯೂ ರಾಹುಲ್ ಅವರು ಈ ಬಾರಿ ಹೊಸ ಫ್ರಾಂಚೈಸಿ ಪರ ಆಡಲು ಬಯಸಿದ್ದು ನನಗೆ ಆಟವಾಡಲು ತಂಡದಲ್ಲಿ ಸ್ವಾತಂತ್ರ್ಯ ಬೇಕು ಎಂದು ತಿಳಿಸಿದ್ದರು.
KLASSSSS 👌👌
— IndianPremierLeague (@IPL) November 24, 2024
KL Rahul is acquired by @DelhiCapitals for INR 14 Crore💥💥#TATAIPLAuction | #TATAIPL
ಈ ಸುದ್ದಿ ಬೆನ್ನಲ್ಲೇ ಕನ್ನಡಿಗ ರಾಹುಲ್ ಆರ್ಸಿಬಿಗೆ ಸೇರ್ಪಡೆಯಾಗುತ್ತಾರೆ. ಅವರನ್ನು ಹರಾಜಿನಲ್ಲಿ ಆರ್ಸಿಬಿ ಖರೀದಿಸುತ್ತದೆ ಎಂದೇ ವರದಿಗಳಾಗಿದ್ದವು. ಆದರೆ ರಾಹುಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ ಪಾಲಾಗಿದ್ದಾರೆ. ರಾಹುಲ್ ಅವರನ್ನು ಬಿಟ್ಟುಕೊಟ್ಟ ಆರ್ಸಿಬಿ ಫ್ರಾಂಚೈಸಿ ವಿರುದ್ಧವೂ ಜನ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್ ದಾಖಲೆ: ಇದುವರೆಗೂ ರಾಹುಲ್ ಒಟ್ಟು 132 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 4683 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ಮತ್ತು 37 ಅರ್ಧಶತಕ ಸಿಡಿಸಿದ್ದಾರೆ. 132 ಇವರ ಹೈಸ್ಕೋರ್ ಆಗಿದೆ.
ಇದನ್ನೂ ಓದಿ: IPL Mega Auction: ದಾಖಲೆಯ ಮೊತ್ತಕ್ಕೆ ರಿಷಭ್ ಪಂತ್ ಬಿಕರಿ; ₹27 ಕೋಟಿ ಕೊಟ್ಟು ಖರೀದಿಸಿದ ಲಕ್ನೋ