ETV Bharat / state

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿಗೆ ಕಂಟೈನರ್‌ನಲ್ಲಿ ಹಣ ಬಂದಿರುವುದೇ ಕಾರಣ: ಬಿ.ಕೆ.ಹರಿಪ್ರಸಾದ್

ಬಿಜೆಪಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲ್ಲಲು ನೋಟು ಎಣಿಸುವ ಮಶಿನ್ ಬಿಟ್ಟು, ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ದೂರಿದ್ದಾರೆ.

ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್ (ETV Bharat)
author img

By ETV Bharat Karnataka Team

Published : 2 hours ago

ಮಂಗಳೂರು(ದಕ್ಷಿಣ ಕನ್ನಡ): ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಬಿಜೆಪಿಗೆ ಕಂಟೈನರ್​ನಲ್ಲಿ ದುಡ್ಡು ಬಂದಿರುವುದೇ ಕಾರಣ. ಚುನಾವಣೆಯಲ್ಲಿ ಗೆಲ್ಲಲು ನೋಟು ಎಣಿಸುವ ಮಶಿನ್ ಬಿಟ್ಟು ತೂಕದ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲೂ ಬಿಜೆಪಿ ಅದೇ ರೀತಿ ದುಡ್ಡು ಖರ್ಚು ಮಾಡಿತ್ತು. ಆದರೆ ಜನ ಅದನ್ನು ತಿರಸ್ಕರಿಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿ ಮತ್ತು ಜೆಡಿಎಸ್ ಚುನಾವಣೆ ಗೆಲ್ಲಲು ಏನೆಲ್ಲಾ ಮಾಡಿತ್ತೋ, ಅದನ್ನು ನಾವು ಮಾಡಿದ್ದೇವೆ. ಆದರೆ ನಮ್ಮ ಕಾರ್ಯಕ್ರಮಗಳಿಗೆ ಜನರು ಬೆಂಬಲ ಸೂಚಿಸಿದ್ದಾರೆ ಎಂದರು.

ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ (ETV Bharat)

ಬೇರೆ ಬೇರೆ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದಾಗ ಮತದಾರರಿಂದ ಮಿಶ್ರ ಪ್ರತಿಕ್ರಿಯೆ ದೊರಕಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದೆ. ಚುನಾವಣೆಗೂ ಮೊದಲು ಬಿಜೆಪಿ ಗ್ಯಾರಂಟಿ, ವಕ್ಫ್ ವಿಚಾರದಲ್ಲಿ ಅಪಪ್ರಚಾರ ಮಾಡಿ ಸುಳ್ಳು ವದಂತಿ ಹಬ್ಬಿಸಿತ್ತು. ಚುನಾವಣೆಗಾಗಿ ಜಾರಿ ನಿರ್ದೇಶನಾಯ (ಇ.ಡಿ) ಬಳಸಿಕೊಂಡಿದ್ದರು. ಜಾರ್ಖಂಡ್​ನಲ್ಲಿ ನುಸುಳುಕೋರರು ಬಂದಿದ್ದಾರೆ ಎಂದು ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿ ಸೈನಿಕರಿಗೆ ಅವಮಾನ ಮಾಡಿತ್ತು. ಆದರೆ ಕರ್ನಾಟಕ ಮತ್ತು ಜಾರ್ಖಾಂಡ್‌ನಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಯಶಸ್ಸು ದೊರಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೂರು‌ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಪಕ್ಷ ಜಯಿಸಿದೆ. ಕಾಂಗ್ರೆಸ್ ತನ್ನ ಕೈಯಲ್ಲಿದ್ದ ಒಂದನ್ನು ಉಳಿಸಿಕೊಂಡು, ವಿಪಕ್ಷದ ಹಿಡಿತದಲ್ಲಿದ್ದ ಎರಡನ್ನು ಗೆದ್ದುಕೊಂಡು ಅಭೂತಪೂರ್ವ ಯಶಸ್ಸು ಗಳಿಸಿದ್ದು, ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದರು.

ಚುನಾವಣಾ ಮೊದಲು ಕರ್ನಾಟಕದಲ್ಲಿ ವಿಪಕ್ಷಗಳು ಹಲವಾರು ಷಡ್ಯಂತ್ರ, ಕುತಂತ್ರ, ಅಪಪ್ರಚಾರ, ಸುಳ್ಳು ಸುದ್ದಿಯನ್ನು ಹರಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸಲು ಪ್ರಯತ್ನ ಮಾಡಿರುವುದನ್ನು ಜನಸಾಮಾನ್ಯರು ನೋಡಿದ್ದಾರೆ ಎಂದು ಹೇಳಿದರು.

ಮೊದಲನೆಯದಾಗಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಬಗ್ಗೆ, ವಕ್ಫ್, ಭ್ರಷ್ಟಾಚಾರದ ಬಗ್ಗೆ ಇಲ್ಲ ಸಲ್ಲದ ಆರೋಪ, ಇಡಿ, ಸಿಬಿಐ, ಐಟಿ ಸಂಸ್ಥೆಗಳ ದುರುಪಯೋಗ ಮಾಡಿಕೊಂಡು ಕಾಂಗ್ರೆಸನ್ನು ಮಣಿಸಲು ವಿಪಕ್ಷಗಳು ಸತತ ಪ್ರಯತ್ನ ಮಾಡಿದರೂ, ಜನತೆ ಅವರನ್ನು ತಿರಸ್ಕರಿಸಿ ಜನತೆ ಒಳ್ಳೆಯ ತೀರ್ಪನ್ನು ನೀಡಿದ್ದಾರೆ. ಅದಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಕರ್ನಾಟಕದ ಜನತೆಯನ್ನು, ಅದರಲ್ಲೂ ಮೂರು ಕ್ಷೇತ್ರಗಳ ಮತದಾರರನ್ನು ಅಭಿನಂದಿಸುತ್ತೇನೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆಆರ್ ಲೋಬೊ, ಪಕ್ಷದ ಪ್ರಮುಖರಾದ ಪದ್ಮರಾಜ್ ಆರ್ ಪೂಜಾರಿ, ಶಶಿಧರ ಹೆಗ್ಡೆ, ಸಾರಿಕಾ ಪೂಜಾರಿ, ಟಿಕೆ ಸುಧೀರ್, ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ವಿಕಾಸ್ ಶೆಟ್ಟಿ, ಜಿತೇಂದ್ರ ಸುವರ್ಣ, ಚಿತ್ತರಂಜನ್ ಶೆಟ್ಟಿ, ನವೀನ್ ಡಿ ಸೋಜ ಉಪಸ್ಥಿತರಿದ್ದರು.

ಇದನ್ನೂ ಓದಿ:ಕೆಲವೊಂದು ಕಡೆ ಇವಿಎಂ ಹ್ಯಾಕ್ ಆಗಿರಬಹುದು: ಸಚಿವ ಜಿ.ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.