IPL Mega Auction Rishab Pant: ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ದಾಖಲೆ ಮೊತ್ತಕ್ಕೆ ಬಿಕರಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್ನಲ್ಲಿ ಆಟಗಾರನೊಬ್ಬ 27 ಕೋಟಿ ರೂಪಾಯಿಗೆ ಮಾರಾಟವಾಗಿದ್ದು ಇದೇ ಮೊದಲು. ಜಿದ್ದಾಜಿದ್ದಿನ ಹರಾಜಿನಲ್ಲಿ ಅಂತಿಮವಾಗಿ ಲಕ್ನೋ ತಂಡ ರಿಷಭ್ ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತು.
ಇದೇ ವೇದಿಕೆಯಲ್ಲಿ ಈ ಮೊದಲು ಶ್ರೇಯಸ್ ಅಯ್ಯರ್ 26.75 ಕೋಟಿಗೆ ಬಿಕರಿಯಾಗಿ ದಾಖಲೆ ಬರೆದಿದ್ದರು. ಇದೀಗ ಅವರ ದಾಖಲೆಯನ್ನು ರಿಷಭ್ ಮುರಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡಿದ್ದ ರಿಷಭ್ ಪಂತ್ ಅವರನ್ನು ಈ ಬಾರಿ ತಂಡದಿಂದ ಕೈ ಬಿಟ್ಟು ಹರಾಜಿಗೆ ಬಿಡಲಾಗಿತ್ತು. ಇದೀಗ ರಿಷಭ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದಾರೆ.
𝐓𝐇𝐄 𝐑𝐄𝐂𝐎𝐑𝐃 𝐈𝐒 𝐁𝐑𝐎𝐊𝐄𝐍 𝐀𝐆𝐀𝐈𝐍! 😮
— IndianPremierLeague (@IPL) November 24, 2024
WOWZAAA 💰
Rishabh Pant goes to @LucknowIPL for INR 27 Crore! 💥💥#TATAIPLAuction
ಪಂತ್ 2016 ರಿಂದ 2024ರ ವರೆಗೆ ಡೆಲ್ಲಿ ತಂಡ ಪ್ರನಿಧಿಸಿದ್ದರು. 2021ರಲ್ಲಿ ಇವರಿಗೆ ಕ್ಯಾಪಿಟಲ್ಸ್‌ನ ನಾಯಕತ್ವವನ್ನೂ ನೀಡಲಾಯಿತು. ಇದೇ ವೇಳೆ ಶ್ರೇಯಸ್ ಅಯ್ಯರ್ ಕೂಡ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದರು. ಈ ವೇಳೆ ಪಂತ್ ನೇತೃತ್ವದ ಡಿಸಿ ತಂಡ ಪ್ಲೇ ಆಫ್ ತಲುಪಿತ್ತು. ಆದರೆ ಡೆಲ್ಲಿ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಪಂತ್ 111 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 3284 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 18 ಅರ್ಧ ಶತಕಗಳು ಸೇರಿವೆ. ಪಂತ್ ಈ ಬಾರಿ ಡೆಲ್ಲಿ ತಂಡದೊಂದಿಗೆ ತಮ್ಮ 8 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ್ದರು. ಈ ಬಾರಿ ಲಕ್ನೋ ತಂಡದಲ್ಲಿ ರಿಷಭ್ ಯಾವ ಅಧ್ಯಾಯ ಬರೆಯಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಇಂದು ಒಟ್ಟು 84 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ (ನವೆಂಬರ್ 24 ಮತ್ತು 25) ನಡೆಯುವ ಈ ಹರಾಜಿನಲ್ಲಿ ಒಟ್ಟು 204 ಖಾಲಿ ಸ್ಲಾಟ್‌ಗಳನ್ನು ಭರ್ತಿ ಮಾಡಲಾಗುತ್ತದೆ.
Aa rahe hain, humari team me chaar chaand lagane, Rishabh bhaiya 🔥 pic.twitter.com/dXPRFRmLwn
— Lucknow Super Giants (@LucknowIPL) November 24, 2024
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗಾಗಿ ಒಟ್ಟು 1577 ಆಟಗಾರರು ನೋಂದಾಯಿಸಿಕೊಂಡಿದ್ದರು. ಆದರೆ 577 ಆಟಗಾರರ ಹೆಸರುಗಳು ಅಂತಿಮ ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರು ಸೇರಿದ್ದಾರೆ. ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಜೋಸ್ ಬಟ್ಲರ್, ಅರ್ಶ್‌ದೀಪ್ ಸಿಂಗ್, ಕಗಿಸೊ ರಬಾಡ ಮತ್ತು ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಯುಜ್ವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ರಂತಹ ದಿಗ್ಗಜ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಕಿಂಗ್ ಈಸ್ ಬ್ಯಾಕ್': 16 ತಿಂಗಳ ಬಳಿಕ ಶತಕ ಸಿಡಿಸಿ 8 ದಾಖಲೆ ಬರೆದ ಕೊಹ್ಲಿ!