ಕರ್ನಾಟಕ

karnataka

ETV Bharat / videos

ಕೋಲಾರದಲ್ಲಿ ಕಾಂಗ್ರೆಸ್​ ಬೃಹತ್​ ಸಮಾವೇಶ: ರಾಹುಲ್​ ಗಾಂಧಿ ಭಾಗಿ - RAHUL GANDHI - RAHUL GANDHI

By ETV Bharat Karnataka Team

Published : Apr 17, 2024, 4:38 PM IST

Updated : Apr 17, 2024, 6:00 PM IST

ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಂದು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಪರ ಪ್ರಚಾರಕ್ಕೆ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ಏರ್ಪೋಟ್​ಗೆ ಬಂದಿಳಿದ ಅವರು ರೋಡ್‌ಶೋ ಮೂಲಕ ಮಂಡ್ಯ ವಿಶ್ವವಿದ್ಯಾಲಯ ಗ್ರೌಂಡ್‌‌ಗೆ ತೆರಳಿ ಕಾಂಗ್ರೆಸ್​ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್​ ಚಂದ್ರು) ಪರ ಮತಯಾಚಿಸಿದರು. ಇದೀಗ ಮಂಡ್ಯದಿಂದ ನೇರವಾಗಿ ಕೋಲಾರಕ್ಕೆ ಭೇಟಿ ನೀಡಿದ್ದು, ಚೊಕ್ಕಂಡಹಳ್ಳಿ ಗೇಟ್​ನಲ್ಲಿ ನಡೆಯುತ್ತಿರುವ ಬೃಹತ್​ ಸಾರ್ವಜನಿಕ ಸಮಾವೇಶದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.    ಕೇರಳದ ವಯನಾಡ್​ನಿಂದ ಲೋಕಸಭೆ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಂಗಳವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಕ್ಷೇತ್ರದ ಹಲವೆಡೆ ರೋಡ್​ ಶೋ ನಡೆಸಿದ ಕೈ ನಾಯಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಭಾರತದ ಸಂವಿಧಾನವನ್ನು ನಾಶಪಡಿಸಲು ಮತ್ತು ಬದಲಾಯಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದರು. 
Last Updated : Apr 17, 2024, 6:00 PM IST

ABOUT THE AUTHOR

...view details