ಕಾರು ಗ್ಯಾರೇಜ್ಗೆ ಬೆಂಕಿ: ಎರಡು ಕಾರು, ಅಪಾರ ಟೈರ್ಗಳು ಸುಟ್ಟು ಕರಕಲು; ತಪ್ಪಿದ ಭಾರಿ ದುರಂತ - Fire Accident in Car Garage - FIRE ACCIDENT IN CAR GARAGE
Published : May 31, 2024, 3:14 PM IST
ಚಿಕ್ಕೋಡಿ: ಶಾರ್ಟ್ ಸರ್ಕ್ಯೂಟ್ನಿಂದ ಕಾರು ಗ್ಯಾರೇಜ್ನಲ್ಲಿ ಭಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿ ಎರಡು ಕಾರುಗಳ ಜೊತೆಗೆ ಅಪಾರ ಪ್ರಮಾಣದ ಟೈರ್ಗಳು ಸುಟ್ಟು ಕರಕಲಾಗಿರುವ ಘಟನೆ ಇಂದು ಬೆಳಗ್ಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸಂಭವಿಸಿದೆ.
ಗ್ಯಾರೇಜ್ಗೆ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲಿದ್ದ ಅಂಗಡಿಗಳಿಗೆ ಆವರಿಸುವ ಮುನ್ನವೇ, ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಾಗವಾಡ ಚಿಕ್ಕೋಡಿ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಅಕ್ಕಪಕ್ಕದ ಅಂಗಡಿಗಳಿಗೆ ಯಾವುದೇ ಹಾನಿ, ಜೊತೆಗೆ ಯಾವುದೇ ಪ್ರಾಣಹಾನಿ ಕೂಡ ಸಂಭವಿಸಿಲ್ಲ.
ಖಂಡೋಬ ಮಾಳಿ ಅವರಿಗೆ ಸೇರಿದ ಗ್ಯಾರೇಜ್ ಇದಾಗಿದ್ದು, ಬೆಳಗಾವಿ ವಿಜಯಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿದೆ. ಹಲವು ವರ್ಷಗಳಿಂದ ಕಾರು ರಿಪೇರಿ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದ್ದು, ಇಂದು ಬೆಳಗ್ಗೆ ಏಕಾಏಕಿ ಈ ಘಟನೆ ಸಂಭವಿಸಿದೆ. ಬೆಂಕಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೆಂಕಿಯಿಂದ ಕೆಲ ಕಾಲ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಆನೇಕಲ್: ಬೆಂಕಿ ತಗುಲಿ ಹೊತ್ತಿ ಉರಿದ ಕಾರ್ಖಾನೆ, ಅಪಾರ ನಷ್ಟ - FIRE IN FACTORY