ಕರ್ನಾಟಕ

karnataka

ETV Bharat / videos

ಗೀತಾ ಶಿವರಾಜ್ ಕುಮಾರ್ ಪ್ರಚಾರದ ವೇಳೆ ನಟ ಶಿವಣ್ಣನಿಗೆ ಮೇಕೆ ಮರಿ ಉಡುಗೂರೆ - Baby goat gift to Shivarajkumar - BABY GOAT GIFT TO SHIVARAJKUMAR

By ETV Bharat Karnataka Team

Published : Apr 12, 2024, 10:25 AM IST

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ನಿನ್ನೆ ಬೆಳಗ್ಗೆಯಿಂದ ಸಂಜೆ ತನಕ ಪ್ರಚಾರ ನಡೆಸಿದ ಅವರು ಈ ಬಾರಿ ತಮಗೆ ಮತ ಹಾಕಿ ಎಂದು ಮನವಿ ಮಾಡಿದರು. ಈ ವೇಳೆ ಶಿಕಾರಿಪುರ ತಾಲೂಕು ಕಾಗಿನಲ್ಲಿ ಪ್ರಚಾರ ಸಭೆ ನಡೆಸುವಾಗ ನಟ ಶಿವರಾಜ್ ಕುಮಾರ್​ ಅವರಿಗೆ ಅಭಿಮಾನಿಗಳು ಕಂಬಳಿ ಹಾಗೂ ಮೇಕೆ ಮರಿಯನ್ನು ಉಡುಗೊರೆಯಾಗಿ ನೀಡಿದರು. ಅಭಿಮಾನಿಗಳ ಪ್ರಿತಿಯ ಗಿಪ್ಟ್​ನ್ನು ನಟ ಶಿವಣ್ಣ ಸಂತೋಷದಿಂದ ಸ್ವೀಕಾರ ಮಾಡಿದರು. ನಂತರ ತಮ್ಮ ಪತ್ನಿಗೆ ಮತ ನೀಡಿ‌ ಒಂದು ಅವಕಾಶ ನೀಡುವಂತೆ ವಿನಂತಿಸಿಕೊಂಡರು.

ಬಳಿಕ ಅಭಿಮಾನಿಗಳ ಕೋರಿಕೆಯ ಮೇರೆಗೆ ತಮ್ಮ ವಿವಿಧ ಚಿತ್ರದ ಗೀತೆಯ ಹಾಡುಗಳನ್ನು ಹಾಡಿದರು. ಮೈಲಾಪುರ ಮೈಲಾರಿ ಸಾಂಗ್​ ಹಾಡಿ ರಂಜಿಸಿದರು. ಈ ವೇಳೆ ಅಭ್ಯರ್ಥಿ ಗೀತಾ ಶಿವರಾಜ್​ ಕುಮಾರ್​​, ಆಯನೂರು ಮಂಜುನಾಥ್​​​, ಶಿಕಾರಿಪುರ ಬ್ಲಾಕ್​​ ಕಾಂಗ್ರೆಸ್​​ ಅಧ್ಯಕ್ಷರಾದ ನಾಗರಾಜ್​ ಗೌಡ, ದರ್ಶನ್​​ ಉಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

ಇದನ್ನೂ ಓದಿ : ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್​ಕುಮಾರ್ ಚುನಾವಣಾ ರ‍್ಯಾಲಿ

ABOUT THE AUTHOR

...view details