ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರು: ರಸ್ತೆಯಲ್ಲಿ ತಾಯಿ ಜೊತೆಗೆ ಮರಿಯಾನೆ ಸಂಚಾರ- ವಿಡಿಯೋ - ಕಾಡಾನೆ

By ETV Bharat Karnataka Team

Published : Mar 1, 2024, 7:40 AM IST

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮತ್ತೆ ಆರಂಭವಾಗಿದೆ. ಕಳೆದ ಕೆಲ ದಿನಗಳಿಂದ ತೋಟಗಳಿಗೆ ನುಗ್ಗಿ ದಾಳಿ ಮಾಡುತ್ತಿದ್ದ ಕಾಡಾನೆಗಳು ಈಗ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿವೆ. ಹೊನ್ನಾಳು ಗ್ರಾಮದ ಸಮೀಪ ರಸ್ತೆಯಲ್ಲಿ ಕಾಡಾನೆ ಹಾಗೂ ಮರಿ ಪ್ರತ್ಯಕ್ಷವಾಗಿ ವಾಹನ ಸವಾರರಿಗೆ ಭಯದ ವಾತಾವರಣ ನಿರ್ಮಾಣ ಮಾಡಿದೆ.

ತಾಯಿ ಹಾಗೂ ಮರಿ ಆನೆ ಕೆಲ ದೂರದವರೆಗೆ ರಸ್ತೆಯಲ್ಲಿ ತೆರಳಿ, ಬಳಿಕ ಕಾಡಿನೊಳಗೆ ಹೋಗಿವೆ. ಅಕ್ಕಪಕ್ಕದ ತೋಟದಲ್ಲಿಯೂ ಬೀಡು ಬಿಟ್ಟಿರುವ ಹತ್ತಾರು ಕಾಡಾನೆಗಳ ಶಬ್ದ ಕೇಳಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ವಾಹನದ ಬೆಳಕಿಗೆ ರಸ್ತೆಗೆ ಮತ್ತೊಂದು ಕಾಡಾನೆ ಬಂದಿದೆ. ಆಗ ತೋಟಗಳಲ್ಲಿ ಕಾಡಾನೆಗಳ ಆರ್ಭಟ ಕೇಳಿದ್ದರಿಂದ ವಾಹನ ಚಾಲಕ ಹಿಂದಕ್ಕೆ ಹೋಗುವ ಪ್ರಯತ್ನ ಮಾಡಿದ್ದಾನೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ. 

ಈ ಭಾಗದಲ್ಲಿ ಪದೇ ಪದೆ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ರಸ್ತೆ ತೋಟ ಎನ್ನದೆ, ಎಲ್ಲೆಂದರಲ್ಲಿ ದಾಳಿ ಮಾಡುತ್ತಿವೆ. ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂದು ರೈತರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮುಂದುವರಿದ ಕಾಡಾನೆ ಕಾಟ: ಒಂಟಿ ಸಲಗದ ವಿಡಿಯೋ

ABOUT THE AUTHOR

...view details