UPI sets new record:ದೇಶದಲ್ಲಿ ತಿಂಗಳಿನಿಂದ ತಿಂಗಳಕ್ಕೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ವಹಿವಾಟು ಹೆಚ್ಚುತ್ತಲೇ ಇದೆ. ಅಕ್ಟೋಬರ್‌ನಲ್ಲಿ ದೇಶವು 23.5 ಲಕ್ಷ ಕೋಟಿ ಮೌಲ್ಯದ 16.58 ಬಿಲಿಯನ್ ವಹಿವಾಟುಗಳನ್ನು ಕಂಡಿದೆ. ಇದು ಏಪ್ರಿಲ್ 2016ರಲ್ಲಿ ಯುಪಿಐ ಕಾರ್ಯಾರಂಭ ಮಾಡಿದ ನಂತರದ ಗರಿಷ್ಠ ಸಂಖ್ಯೆಯಾಗಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಾಹಿತಿ ಪ್ರಕಾರ, ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇಕಡಾ 10 ರಷ್ಟು ಮತ್ತು ಮೌಲ್ಯದಲ್ಲಿ ಶೇಕಡಾ 14 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.
ಅಕ್ಟೋಬರ್‌ನಲ್ಲಿ ದೈನಂದಿನ ಯುಪಿಐ ವಹಿವಾಟುಗಳು ಪರಿಮಾಣದಲ್ಲಿ 535 ಮಿಲಿಯನ್ ಮತ್ತು ಮೌಲ್ಯದಲ್ಲಿ 75,801 ಕೋಟಿಗಳನ್ನು ದಾಟಿದೆ. ಅಕ್ಟೋಬರ್‌ನಲ್ಲಿ 467 ಮಿಲಿಯನ್ ತಕ್ಷಣದ ಪಾವತಿ ಸೇವೆ (IMPS) ವಹಿವಾಟುಗಳು ನಡೆದಿವೆ. ಸೆಪ್ಟೆಂಬರ್‌ನಲ್ಲಿ 430 ಮಿಲಿಯನ್ ವಹಿವಾಟು ನಡೆದಿದ್ದು, ಅಕ್ಟೋಬರ್ಗೆ ಹೋಲಿಸಿದರೆ ಇದು ಶೇಕಡಾ 9 ರಷ್ಟು ಹೆಚ್ಚಾಗಿದೆ. IMPS ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 5.65 ಲಕ್ಷ ಕೋಟಿ ರೂಪಾಯಿಗಳಿಗೆ ವಹಿವಾಟು ನಡೆಸಿವೆ. ಇದು ಅಕ್ಟೋಬರ್ಗೆ ಹೋಲಿಸಿದರೆ 6.29 ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದ್ದು, ಶೇಕಡಾ 11ರಷ್ಟು ಏರಿಕೆ ಕಂಡಿದೆ.
ಅಕ್ಟೋಬರ್‌ನಲ್ಲಿ ಫಾಸ್ಟ್‌ಟ್ಯಾಗ್ ವಹಿವಾಟುಗಳಲ್ಲಿ ಶೇಕಡಾ 8 ರಷ್ಟು ಏರಿಕೆ ಕಂಡಿದ್ದು, 6,115 ಕೋಟಿ ವಹಿವಾಟು ನಡೆಸಿದೆ. ಇದು ಸೆಪ್ಟೆಂಬರ್‌ನಲ್ಲಿ 5,620 ಕೋಟಿ ವಹಿವಾಟು ನಡೆಸಿತ್ತು.