Yearender 2024: ಪ್ರಸ್ತುತ, ಸ್ಮಾರ್ಟ್‌ಫೋನ್‌ಗಳ ಹಾವಳಿ ಫುಲ್ ಜೋರಾಗಿದೆ. ಕಿರಿಯರು, ಹಿರಿಯರು ಎಂಬ ಭೇದವಿಲ್ಲದೇ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಅದರಲ್ಲಿಯೂ ಯುವಜನತೆ ಬೆಲೆ ಲೆಕ್ಕಿಸದೇ ಪ್ರೀಮಿಯಂ ಫೋನ್ಗಳತ್ತ ವಾಲುತ್ತಿದ್ದಾರೆ. ಇದರೊಂದಿಗೆ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಕಾಲಕಾಲಕ್ಕೆ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ವರ್ಷ ಬಹುತೇಕ ಎಲ್ಲಾ ಬ್ರಾಂಡ್‌ಗಳ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿವೆ.
ನೀವು ಕೂಡ ಹೊಸ ವರ್ಷದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ವಿಭಾಗದಲ್ಲಿ ನೀವು ಹತ್ತಾರು ಆಯ್ಕೆಗಳನ್ನು ಕಾಣಬಹುದು. 2024 ರಲ್ಲಿ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿದ ಕೆಲವು ಅತ್ಯುತ್ತಮ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಕುರಿತು ಒಂದು ನೋಟ ಇಲ್ಲಿದೆ.
Samsung Galaxy S24 Ultra:
- ಬಿಡುಗಡೆ ದಿನಾಂಕ: 17 ಜನವರಿ 2024
- ಬೆಲೆ: 121,999 ರೂ.
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆ ಹೊಂದಿದೆ.
ವೈಶಿಷ್ಟ್ಯಗಳು:
- Galaxy S24 ಅಲ್ಟ್ರಾ Galaxy S23 ಅಲ್ಟ್ರಾದ 6.8-ಇಂಚಿನ ಡಿಸ್ಪ್ಲೇ ಹೊಂದಿದೆ. ಆದರೆ, ಸ್ಕ್ರೀನ್ ಈಗ ಫ್ಲಾಟ್ ಆಗಿದೆ. ಸ್ವಲ್ಪ ಕರ್ವ್ಡ್ ಎಡ್ಜ್ಗಳನ್ನು ಹೊಂದಿದೆ.
- ಹೊಸ ಟೈಟಾನಿಯಂ ವಿನ್ಯಾಸ, Galaxy S24 ಅಲ್ಟ್ರಾಗೆ ಪ್ರತ್ಯೇಕವಾಗಿದೆ.
- ಫ್ರಂಟ್ನಲ್ಲಿ ಹೊಸ ಗೊರಿಲ್ಲಾ ಗ್ಲಾಸ್ ಆರ್ಮರ್ ಹೊಂದಿದೆ. ಇದು ಅತ್ಯಂತ ಕಠಿಣವಾದ ಗೊರಿಲ್ಲಾ ಗ್ಲಾಸ್ ಆಗಿದೆ.
- Qualcomm Snapdragon 8 Gen 3 ಚಿಪ್‌ಸೆಟ್ ಹೊಂದಿದೆ.
- 10X ಪೆರಿಸ್ಕೋಪ್ ಬದಲಿಗೆ ಹೊಸ 5X ಟೆಲಿಫೋಟೋ, 100X ಸ್ಪೇಸ್ ಜೂಮ್ ಒಳಗೊಂಡಿದೆ.
- 4K@120fps ವಿಡಿಯೋ ರೆಕಾರ್ಡಿಂಗ್.
- 2,600 ನಿಟ್ಸ್ ಬ್ರೈಟ್ನೆಸ್ ಡಿಸ್ಪ್ಲೇ
- ಎಐ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳು Galaxy S24 Ultra ನಲ್ಲಿ ಲೈವ್ ಟ್ರಾನ್ಸ್‌ಲೇಟ್, ಸರ್ಕಲ್ ಟು ಸರ್ಚ್ ಸೇರಿದಂತೆ ಅನೇಕ ಹೊಸ ವಿಷಯಗಳನ್ನು ಕಾಣಬಹುದಾಗಿದೆ.
- ಏಳು ವರ್ಷಗಳ ಪ್ರಮುಖ OS ಅಪ್ಡೇಟ್ ಮತ್ತು ಭದ್ರತಾ ಸೌಲಭ್ಯಗಳು ಹೊಂದಿವೆ.
Samsung Galaxy Z Fold 6:
- ಬಿಡುಗಡೆ ದಿನಾಂಕ: ಜುಲೈ 24, 2024
- ಬೆಲೆ: ರೂ. 1,44,999
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆ ಹೊಂದಿದೆ.
ವೈಶಿಷ್ಟ್ಯಗಳು:
- ಸೀರಿಸ್ ಸಿಗ್ನೇಚರ್ ವೈಶಿಷ್ಟ್ಯ, ಓಪನ್ ಮಾಡಿದಾಗ ದೊಡ್ಡ ಟ್ಯಾಬ್ಲೆಟ್ ತರಹದ ಅನುಭವ ಮತ್ತು ಕ್ಲೋಸ್ ಮಾಡಿದಾಗ ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಫಾರ್ಮ್ ಫ್ಯಾಕ್ಟರ್ ಅನುಭವ ನೀಡುತ್ತದೆ.
- Galaxy Z Fold 6 IP48 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಹೊಂದಿರುವ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ.
- ಈ ಫೋನ್ ಹಲವು ಎಐ ವೈಶಿಷ್ಟ್ಯಗಳನ್ನು ಹೊಂದಿದೆ.
- ಫೋನ್ 7.6 ಫ್ಲೆಕ್ಸಿಬಲ್ AMOLED ಸ್ಕ್ರೀನ್ ಹೊಂದಿದೆ.
- ದೊಡ್ಡ ಡಿಸ್ಪ್ಲೇಯನ್ನು ಸೆಕೆಂಡರಿ ಡಿಸ್ಪ್ಲೇ ಆಗಿ ಬಳಸಬಹುದು. ಕೆಲವರು ಚಿತ್ರೀಕರಣ ಮಾಡುವಾಗ ಇದು ಸಹಾಯಕವಾಗಿದೆ ಎಂದು ಹೇಳುತ್ತಾರೆ.
- ಫೋನ್ ತೆಳುವಾಗಿ ಮತ್ತು ಹಗುರವಾಗಿದ್ದು, 239 ಗ್ರಾಂ ತೂಕ ಮತ್ತು 5.6 ಮಿಮೀ ದಪ್ಪ ಹೊಂದಿದೆ.
Xiaomi 14 Ultra :
- ಬಿಡುಗಡೆ ದಿನಾಂಕ: 22ನೇ ಫೆಬ್ರವರಿ 2024
- ಬೆಲೆ: ರೂ. 99,998.
- ಪ್ರೊಸೆಸರ್: 4nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಫ್ಲ್ಯಾಗ್‌ಶಿಪ್ ಪ್ರೊಸೆಸರ್, ಇತರ ಚಿಪ್‌ಸೆಟ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಬಾಳಿಕೆ ಮತ್ತು ಕಾರ್ಯಕ್ಷಮತೆಯಲ್ಲಿ ಉತ್ತಮ ದಕ್ಷತೆಯನ್ನು ಪ್ರದರ್ಶಿಸುತ್ತದೆ.
ವೈಶಿಷ್ಟ್ಯಗಳು:
- ಫೋನ್ 120 Hz ರಿಫ್ರೆಶ್ ರೇಟ್ 6.73-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 3200x1440 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
- ಇದು 16GB RAM ಹೊಂದಿದೆ. Xiaomi 14 ಅಲ್ಟ್ರಾ ಆಂಡ್ರಾಯ್ಡ್ 14 ಪ್ರೊಸೆಸರ್ ಹೊಂದಿದೆ. 5300mAh ಬ್ಯಾಟರಿಯಿಂದ ಚಾಲಿತವಾಗಿದೆ.
- Xiaomi 14 ಅಲ್ಟ್ರಾ ವೈರ್‌ಲೆಸ್ ಚಾರ್ಜಿಂಗ್ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
- Xiaomi 14 ಅಲ್ಟ್ರಾ ಸ್ಮಾರ್ಟ್‌ಫೋನ್ ದೊಡ್ಡ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್‌ನಲ್ಲಿ ಶಕ್ತಿಯುತ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನ್‌ನಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 50MP ಟೆಲಿಫೋಟೋ ಲೆನ್ಸ್, 50MP ಪೆರಿಸ್ಕೋಪ್ ಲೆನ್ಸ್ ಮತ್ತು 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಸಹ ಹೊಂದಿದೆ.
- Xiaomi 14 Ultra HyperOS ಅನ್ನು ಆಂಡ್ರಾಯ್ಡ್ 14 ಅನ್ನು ಆಧರಿಸಿದೆ ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಫೋನ್ AI ಫೇಸ್ ಅನ್‌ಲಾಕ್‌ನೊಂದಿಗೆ ಬರುತ್ತದೆ.
Realme GT 7 Pro:
- ಬಿಡುಗಡೆ ದಿನಾಂಕ: ನವೆಂಬರ್ 04, 2024
- ಬೆಲೆ: ₹ 59,998.
- ಪ್ರೊಸೆಸರ್: 3nm ಆಧಾರಿತ ಚಿಪ್‌ಸೆಟ್, ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಪ್ರೊಸೆಸರ್‌ನಿಂದ ರನ್ ಆಗುತ್ತದೆ.
ವೈಶಿಷ್ಟ್ಯಗಳು:
- ಇತ್ತೀಚಿನ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಒಳಗೊಂಡಿರುವ ಸಾಧನವು ದೇಶದಲ್ಲಿ ಮೊದಲನೆಯದು, ಕ್ವಾಲ್‌ಕಾಮ್‌ನ ಸುಧಾರಿತ 3nm TSMC ಪ್ರಕ್ರಿಯೆಯನ್ನು ಬಳಸಿದ ಮೊದಲನೆಯದು, ಪ್ರಭಾವಶಾಲಿ 2+6 ಓರಿಯನ್ ಆರ್ಕಿಟೆಕ್ಚರ್ ಒಳಗೊಂಡಿದೆ.
- Realme GT 7 Pro ಪವರ್ಫುಲ್ ಪ್ರೊಸೆಸರ್ ಅನ್ನು ಹೊಂದಿದೆ. 5,800 mAh ಬ್ಯಾಟರಿ ಪವರ್ ಮತ್ತು ಮೆಟಲ್ ಮತ್ತು ಗ್ಲಾಸ್ನಿಂದ ಮಾಡಲಾದ IP69-ರೇಟೆಡ್ ಡಿಸೈನ್ ಹೊಂದಿದೆ. ಫ್ರಂಟ್ ಮತ್ತು ರಿಯರ್ ಸೇರಿದಂತೆ ಎರಡೂ ಬದಿ ಗ್ಲಾಸ್ ಪೆನೆಲ್ಗಳನ್ನು ಹೊಂದಿದೆ. ಅಷ್ಟೇ ಅಲ್ಲ ಎಲ್ಲಾ ನಾಲ್ಕು ಬದಿಗಳಲ್ಲಿ 3D-ಕರ್ವ್ಡ್ ಎಡ್ಜ್ಗಳನ್ನು ಹೊಂದಿವೆ.
- ಇದು ಆಸಕ್ತಿದಾಯಕ ಕ್ಯಾಮೆರಾ ಸೆಟಪ್ ಅನ್ನು ಸಹ ಹೊಂದಿದೆ. ಇದು SONY IMX906 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, SONY IMX882 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು SONY IMX355 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ ಇದು 16-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
- Realme GT 7 Pro ನಾವು ಕಂಡಿರುವ ಫೋನ್‌ನಲ್ಲಿನ ಅತ್ಯಂತ ಪವರ್ ಫುಲ್ ಬ್ಯಾಟರಿ ಪ್ಯಾಕ್‌ಗಳಿಂದ ಚಾಲಿತವಾಗಿದೆ.
iQOO 13:
- ಬೆಲೆ: ₹ 54,999
- ಬಿಡುಗಡೆ ದಿನಾಂಕ: 3ನೇ ಡಿಸೆಂಬರ್ 2024
- ಪ್ರೊಸೆಸರ್: ಇದು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ
ವೈಶಿಷ್ಟ್ಯಗಳು:
- iQOO 13 ಹೊಸ ಮಾನದಂಡವನ್ನು ಹೊಂದಿಸಿದೆ. ಇದು ವಿಶ್ವದ ಮೊದಲ Q10 2K 144Hz ಅಲ್ಟ್ರಾ ಐಕೇರ್ ಡಿಸ್ಪ್ಲೇ ಹೊಂದಿದೆ.
- ರಿಯರ್ iQOO 13 ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ, 50ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಮತ್ತು 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ.
- ಸ್ನಾಪ್‌ಡ್ರಾಗನ್ ಚಿಪ್‌ಸೆಟ್ 2 + 6 ಆಲ್-ಬಿಗ್-ಕೋರ್ ಆರ್ಕಿಟೆಕ್ಚರ್‌ನೊಂದಿಗೆ ಬರುತ್ತದೆ ಮತ್ತು 3nm ಫ್ಯಾಬ್ರಿಕೇಶನ್ ಪ್ರಕ್ರಿಯೆಯನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ.
- IP68 + IP69 ಡಸ್ಟ್ ಮತ್ತು ವಾಟರ್ ರೆಸಿಸ್ಟೆಂಟ್ಸ್.
- ಫೋನ್ Android 15 ಅನ್ನು ಆಧರಿಸಿದ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
- AI ಕಮ್ಯುನಿಕೇಶನ್ ಮತ್ತು 3D ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್‌ನೊಂದಿಗೆ AI ವೈಶಿಷ್ಟ್ಯಗಳನ್ನು ಫೋನ್ ಹೊಂದಿದೆ.
iphone 16 Pro Max:
- ಬಿಡುಗಡೆ ದಿನಾಂಕ: 20 ಸೆಪ್ಟೆಂಬರ್, 2024
- ಬೆಲೆ: 1,59,900 ರೂ.
- ಪ್ರೊಸೆಸರ್: A19 ಬಯೋನಿಕ್ ಚಿಪ್‌ನಿಂದ ನಡೆಸಲ್ಪಡುತ್ತಿದೆ.
ವೈಶಿಷ್ಟ್ಯಗಳು:
- 6.7-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ.
- 48MP ಮೇನ್ ಸೆನ್ಸಾರ್, 12MP ಟೆಲಿಫೋಟೋ ಲೆನ್ಸ್ ಮತ್ತು ಅಸಾಧಾರಣ ಫೋಟೋಗ್ರಾಫಿ ಮತ್ತು 8K ವಿಡಿಯೋ ರೆಕಾರ್ಡಿಂಗ್‌ಗಾಗಿ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಸುಧಾರಿತ ಟ್ರಿಪಲ್-ಕ್ಯಾಮೆರಾ ಸಿಸ್ಟಮ್ ಹೊಂದಿದೆ.
- ಮ್ಯಾಗ್‌ಸೇಫ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಹೊಂದಿದೆ.
- ಏರೋಸ್ಪೇಸ್-ಗ್ರೇಡ್ ಟೈಟಾನಿಯಂ ಫ್ರೇಮ್ ಹೊಂದಿದೆ.
- ವಿಜೆಟ್‌ಗಳು, ಎಐ ಚಾಲಿತ ಫೋಟೋ ಎಡಿಟಿಂಗ್ ಮತ್ತು ಸುಧಾರಿತ ಗೌಪ್ಯತೆ ವೈಶಿಷ್ಟ್ಯಗಳನ್ನು ಒಳಗೊಂಡಿರುವ iOS 18 ನೊಂದಿಗೆ ಪೂರ್ವ ಲೋಡ್ ಮಾಡಲಾಗಿದೆ.
- USB-C ಚಾರ್ಜಿಂಗ್ ಪೋರ್ಟ್, 5G ಹೊಂದಾಣಿಕೆ ಮತ್ತು Wi-Fi 7 ಒಳಗೊಂಡಿದೆ.
Motorola Edge 50 Ultra:
- ಬಿಡುಗಡೆ ದಿನಾಂಕ: 18 ಜೂನ್ 2024
- ಬೆಲೆ: ₹49,999
- ಪ್ರೊಸೆಸರ್: Qualcomm SM8635 Snapdragon 8s Gen 3 ನಿಂದ ರನ್ ಆಗುತ್ತದೆ.
ವೈಶಿಷ್ಟ್ಯಗಳು:
- Android 15 ಅಪ್ಲಿಕೇಶನ್ ಆರ್ಕೈವಿಂಗ್ ಮತ್ತು ಖಾಸಗಿ ಸ್ಥಳದಂತಹ ಪ್ರಮುಖ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.
- ಸಾಧನವು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸಿ IP68 ರೇಟಿಂಗ್ ಹೊಂದಿದೆ.
- ಡಿಸ್‌ಪ್ಲೇಯು 6.7-ಇಂಚಿನ pOLED ಪ್ಯಾನೆಲ್ ಆಗಿದ್ದು, ಅದು 2712x1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಅದ್ಭುತ ವೀಕ್ಷಣೆಯ ಅನುಭವವನ್ನು ನೀಡುತ್ತದೆ.
- ಇದು 1.5 K ರೆಸಲ್ಯೂಶನ್ ಅನ್ನು ಹೊಂದಿದೆ. 144 Hz ರಿಫ್ರೆಶ್ ದರ ಮತ್ತು 2,500 nits ನ ಬ್ರೈಟ್ನೆಸ್ ಹೊಂದಿದೆ.
- ಚಿಪ್‌ಸೆಟ್ ಸುಮಾರು 15 ಲಕ್ಷದ AnTuTu ಬೆಂಚ್‌ಮಾರ್ಕ್ ಸ್ಕೋರ್‌ನೊಂದಿಗೆ ಅತ್ಯಂತ ಶಕ್ತಿಶಾಲಿಯಾಗಿದೆ.
- ಈ Motorola ಸಾಧನವು ಅದರ Moto AI ಅಡಿ ಮ್ಯಾಜಿಕ್ ಕ್ಯಾನ್ವಾಸ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಟೆಕ್ಸ್ಟ್ ಪ್ರಾಂಪ್ಟ್‌ಗಳಿಂದ ಚಿತ್ರಗಳನ್ನು ರಚಿಸಲು ಅನುಮತಿಸುತ್ತದೆ. ಮತ್ತೊಂದು ವೈಶಿಷ್ಟ್ಯವೆಂದರೆ ಸ್ಟೈಲ್ ಸಿಂಕ್, ಇದು ವಾಲ್‌ಪೇಪರ್‌ಗಳನ್ನು ರಚಿಸಲು ನಿಮ್ಮ ಸುತ್ತಮುತ್ತಲಿನ ವಿನ್ಯಾಸ ಮತ್ತು ಮಾದರಿಗಳನ್ನು ಬಳಸಲು ನಿಮಗೆ ಅನುಮತಿಸುತ್ತದೆ.
- ಸಾಧನವು 50 MP ಮುಖ್ಯ ಕ್ಯಾಮೆರಾ, 50 M ಅಲ್ಟ್ರಾ-ವೈಡ್/ಮ್ಯಾಕ್ರೋ ಲೆನ್ಸ್, ರಿಯರ್ ಪ್ಯಾನೆಲ್‌ನಲ್ಲಿ 64 MP OIS-ಬೆಂಬಲಿತ ಟೆಲಿಫೋಟೋ ಲೆನ್ಸ್ ಮತ್ತು 50 MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ.
Google Pixel 9 Pro:
- ಬಿಡುಗಡೆ ದಿನಾಂಕ: 17ನೇ ಅಕ್ಟೋಬರ್, 2024
- ಬೆಲೆ: RS. 1,09,900 (ಮೂಲ ರೂಪಾಂತರಕ್ಕಾಗಿ)
- ಪ್ರೊಸೆಸರ್: ಇದು ಸುಗಮ ಕಾರ್ಯಕ್ಷಮತೆಗಾಗಿ ಶಕ್ತಿಯುತವಾದ ಪ್ರೊಸೆಸರ್ ಗೂಗಲ್ ಟೆನ್ಸರ್ ಜಿ 2 ಚಿಪ್ ಅನ್ನು ಹೊಂದಿದೆ.
ವೈಶಿಷ್ಟ್ಯಗಳು:
- ಈ ಪ್ರಮುಖ ಸ್ಮಾರ್ಟ್‌ಫೋನ್ ಅತ್ಯಂತ ಶಕ್ತಿಶಾಲಿ ಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
- Pixel 9 Pro 6.3-ಇಂಚಿನ Super Actua LTPO OLED ಡಿಸ್ಪ್ಲೇಯನ್ನು ಹೊಂದಿದೆ. ಇದು 1280 x 2856 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಅಡಾಪ್ಟಿವ್ 1-120Hz ರಿಫ್ರೆಶ್ ರೇಟ್ ನೀಡುತ್ತದೆ.
- ಇದು 16GB LPDDR5X RAM ಮತ್ತು 256GB, 512GB, ಅಥವಾ 1TB ಯ ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ಇದು ಸುಗಮ ಬಹುಕಾರ್ಯಕ ಮತ್ತು ಡೇಟಾಗೆ ಸಾಕಷ್ಟು ಸ್ಥಳಾವಕಾಶವನ್ನು ಖಾತ್ರಿಗೊಳಿಸುತ್ತದೆ.
- 4700mAh ಬ್ಯಾಟರಿಯೊಂದಿಗೆ ಸಜ್ಜುಗೊಂಡಿರುವ Pixel 9 Pro ವಿಶ್ವಾಸಾರ್ಹ ಬ್ಯಾಟರಿ ಅವಧಿಯನ್ನು ನೀಡುತ್ತದೆ.
- ಕಡಿಮೆ - ಬೆಳಕಿನ ಫೋಟೋಗಳನ್ನು ಸುಧಾರಿಸುವುದು, ವೃತ್ತಿಪರವಾಗಿ ಕಾಣುವ ಭಾವಚಿತ್ರಗಳನ್ನು ರಚಿಸುವುದು ಮತ್ತು ಫೋಟೋಗಳಿಂದ ಅನಗತ್ಯ ವಸ್ತುಗಳನ್ನು ತೆಗೆದು ಹಾಕುವಂತಹ ಕ್ಯಾಮೆರಾ ಸಾಮರ್ಥ್ಯಗಳನ್ನು ಹೆಚ್ಚಿಸಲು Google Pixel 9 AI ಅನ್ನು ಬಳಸಿಕೊಳ್ಳುತ್ತದೆ. ವಿಡಿಯೋ ರೆಕಾರ್ಡಿಂಗ್ ಮತ್ತು ಸುಧಾರಿತ ವಾಯ್ಸ್ ಅಸಿಸ್ಟ್ ಸಾಮರ್ಥ್ಯಗಳಂತಹ ವೈಶಿಷ್ಟ್ಯಗಳಿಗಾಗಿ ಇದು AI ಅನ್ನು ಸಹ ಬಳಸುತ್ತದೆ.
Google Pixel 9 Pro XL:
- ಬಿಡುಗಡೆ ದಿನಾಂಕ: 13ನೇ ಆಗಸ್ಟ್, 2024
- ಬೆಲೆ: RS. 1,24,999 (ಮೂಲ ರೂಪಾಂತರಕ್ಕಾಗಿ)
- ಪ್ರೊಸೆಸರ್: ಪವರ್ಫುಲ್ ಪ್ರೊಸೆಸರ್ Google Tensor G4 ಚಿಪ್‌ಸರ್ಟ್ ಅನ್ನು ಹೊಂದಿದೆ.
ವೈಶಿಷ್ಟ್ಯಗಳು:
- ಬೆರಗುಗೊಳಿಸುವ ಡಿಸ್ಪ್ಲೇ: 120Hz ರಿಫ್ರೆಶ್ ರೇಟ್ ಜೊತೆ 6.8-ಇಂಚಿನ OLED ಡಿಸ್ಪ್ಲೇ ಹೊಂದಿದೆ.
- ಈ ಸೆಟ್ ಪವರ್ಫುಲ್ ಕ್ಯಾಮೆರಾ ಸಿಸ್ಟಮ್ ಹೊಂದಿದೆ. 50MP ರಿಯರ್ ಕ್ಯಾಮೆರಾ, 48MP ಟೆಲಿಫೋಟೋ ಮತ್ತು 48MP ಅಲ್ಟ್ರಾವೈಡ್ ಕ್ಯಾಮೆರಾ ಅನ್ನು ಹೊಂದಿದೆ.
- Android 14: ಗೂಗಲ್ನ ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿ ಆಗಿದೆ.
Vivo x100 pro:
- ಪ್ರಾರಂಭ ದಿನಾಂಕ: ಜನವರಿ 4, 2024
- ಬೆಲೆ: ರೂ. 63,999/-
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 9300
ವೈಶಿಷ್ಟ್ಯಗಳು:
- 120Hz ರಿಫ್ರೆಶ್ ರೇಟ್ ಜೊತೆ 6.78-ಇಂಚಿನ AMOLED ಡಿಸ್ಪ್ಲೇ ಹೊಂದಿದೆ.
- 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಮೇನ್ ಸೆನ್ಸಾರ್, 50MP ಅಲ್ಟ್ರಾವೈಡ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.
- 120W ಫಾಸ್ಟ್ ಚಾರ್ಜಿಂಗ್
- ಪ್ರೀಮಿಯಂ ಡಿಸೈನ್
- Android 14: Vivo ಕಸ್ಟಮ್ ಸ್ಕಿನ್‌ನೊಂದಿಗೆ ಇತ್ತೀಚಿನ ಆಂಡ್ರಾಯ್ಡ್ ಆವೃತಿ ಇದಾಗಿದೆ.
ಓದಿ: ಕಳೆದು ಹೋಗುತ್ತಿರುವ ಈ ವರ್ಷದಲ್ಲಿ ಹೀಗಿದ್ದವು ಇಸ್ರೋದ ಮಹತ್ವದ ಕೆಲಸಗಳು: ಇಲ್ಲಿದೆ ಹರುಷದ ಹಿನ್ನೋಟ!