ಇತ್ತೀಚಿನ ದಿನಗಳಲ್ಲಿ ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಲು ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸಲು ಸ್ವಂತದ್ದೊಂದು ಕಾರು ಇದ್ದರೆ ಬೆಸ್ಟ್ ಅಂತಾ ಯೋಚಿಸವವರೇ ಹೆಚ್ಚು. ಮತ್ತು ಅದು ಇಂದಿನ ಅಗತ್ಯ ಕೂಡಾ ಹೌದು. ಅದರಲ್ಲೂ 7 ಆಸನಗಳ ಕಾರ್ ಆಗಿದ್ದರೆ ಇನ್ನೂ ಬೆಸ್ಟ್ ಎಂಬ ಯೋಚನೆ ಹಲವರದ್ದು. ಏಕೆಂದರೆ ಕುಟುಂಬ ಸಮೇತ ಆರಾಮಾಗಿ ಸಂಚರಿಸಬಹುದು ಎಂಬ ಕಾರಣಕ್ಕೆ 7 ಸೀಟರ್ ಕಾರು ಇದ್ದರೆ ಬೆಸ್ಟ್ ಅನ್ನೋದು ಬಹುತೇಕರ ಅನಿಸಿಕೆ. ಹಾಗಿದ್ದರೆ, 7 ಸೀಟರ್ ಸಾಮರ್ಥ್ಯದ ಕೆಲವು ಕಾರುಗಳು ಕೆಲವೇ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಅದರಲ್ಲಿ ಟಾಪ್-5 ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.
1. MG Gloster Facelift - ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್: ಇನ್ನು ಕೆಲವೇ ತಿಂಗಳುಗಳಲ್ಲಿ 7 ಸೀಟುಗಳ ಸಾಮರ್ಥ್ಯದ ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಮಾದರಿಯ ಕಾರು ಮಾರುಕಟ್ಟೆಗೆ ಬರಲಿದೆ. ಕಂಪನಿಯು ಈ ಕಾರನ್ನು ಬಿಡುಗಡೆ ಮಾಡಲು ಭಾರಿ ತಯಾರಿ ಮಾಡಿಕೊಂಡಿದೆ. ಎಂಜಿನ್ ಹೊರತುಪಡಿಸಿ, ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್‌ನಲ್ಲಿ ಇನ್ನೂ ಹಲವು ಬದಲಾವಣೆಗಳಿರಬಹುದು ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ಈ ಕಾರು ಮಾರುಕಟ್ಟೆಯಲ್ಲಿ ಅಗ್ರ SUV ಆಗಿರುವ ಟೊಯೊಟಾ ಫಾರ್ಚುನರ್‌ಗೆ ಕಠಿಣ ಸ್ಪರ್ಧೆ ನೀಡುವ ನಿರೀಕ್ಷೆಯಿದೆ. ಎಂಜಿ ಗ್ಲೋಸ್ಟರ್ ಫೇಸ್‌ಲಿಫ್ಟ್ ಮಾದರಿಯ ಒಳ ಮತ್ತು ಹೊರಭಾಗವನ್ನು ಅಪ್‌ಗ್ರೇಡ್ ಮಾಡಬಹುದು ಎಂದು ತೋರುತ್ತದೆ.
2. New Kia Carnival -ಹೊಸ ಕಿಯಾ ಕಾರ್ನಿವಲ್: ಇನ್ನು ಕೆಲವೇ ತಿಂಗಳುಗಳಲ್ಲಿ ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್ ಮಾದರಿಯ ಕಾರು ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಹಿಂದಿನ ಮಾದರಿಗಿಂತ ಭಿನ್ನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೊಸ ಕಿಯಾ ಕಾರ್ನಿವಲ್ ಮಾದರಿಯ ಕಾರಿನಲ್ಲಿ ಕ್ಯಾಬಿನ್ ಅನ್ನು ಉನ್ನತ ಗುಣಮಟ್ಟದೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಮಾದರಿಯ ಕಾರು 2.2 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆಯಂತೆ. ಈ ಮಾದರಿಯ ಕಾರು 7 ಸೀಟರ್ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಸಮಾಚಾರ ಸಿಕ್ಕಿದೆ.
3. ನಿಸ್ಸಾನ್ ಎಕ್ಸ್-ಟ್ರಯಲ್ - Nissan X-Trail:ನಿಸ್ಸಾನ್ ಎಕ್ಸ್-ಟ್ರಯಲ್ ಮಾದರಿಯ ಕಾರು ಎರಡು ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯಂತೆ. ಈ ಕಾರು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನಿರೀಕ್ಷೆಯಿದೆ. ಈ ಮಾದರಿಯ ಕಾರು ಈಗ ಸೀಮಿತ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ. ಈ ಕಾರು 7 ಸೀಟುಗಳ ಸಾಮರ್ಥ್ಯದೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಮೂಲಗಳಿಂದ ತಿಳಿದು ಬಂದಿದೆ.