ETV Bharat / state

ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸುಗ್ರೀವಾಜ್ಞೆ ತಂದಿದ್ದು, ಕಾನೂನು ಹೋರಾಟ ಮಾಡುತ್ತೇವೆ: ಸಂಸದ ಯದುವೀರ್‌ ಒಡೆಯರ್‌ - MP YADUVEER WADIYAR

ಸುಪ್ರೀಂ ಕೋರ್ಟ್ ಟಿಡಿಆರ್ ಕೊಟ್ಟು ರಸ್ತೆ ಮಾಡಿ ಎಂದು ಆದೇಶ ನೀಡಿದ್ದು, ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತೇವೆ ಎಂದು ಸಂಸದ ಯದುವೀರ್​ ಒಡೆಯರ್​ ತಿಳಿಸಿದರು.

MP Yaduveer Wadiyar
ಸಂಸದ ಯದುವೀರ್‌ ಒಡೆಯರ್‌ (ETV Bharat)
author img

By ETV Bharat Karnataka Team

Published : Jan 30, 2025, 7:14 PM IST

Updated : Jan 30, 2025, 7:28 PM IST

ಮೈಸೂರು: "ಬೆಂಗಳೂರು ಅರಮನೆ ಆಸ್ತಿ ವಿಚಾರಲ್ಲಿ ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ ಎಂದು ಮಾಹಿತಿ‌ ಬಂದಿದೆ. ನಾವು ಕೂಡ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ" ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, "ಸುಪ್ರೀಂ ಕೋರ್ಟ್ "ಟಿಡಿಆರ್" ಕೊಟ್ಟು ರಸ್ತೆ ಮಾಡಿ ಎಂದು ಆದೇಶ ನೀಡಿದೆ. ಅದನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ. ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತೇವೆ" ಎಂದರು.

ಸಂಸದ ಯದುವೀರ್‌ ಒಡೆಯರ್‌ (ETV Bharat)

ಸಮಸ್ಯೆಗಳಿಗೆ ಒಳಗೆ ಪರಿಹಾರವಿದೆ: ಎಲ್ಲಾ ವಿಚಾರಗಳನ್ನು ಒಳಗಡೆ ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಪಕ್ಷದ ದೃಷ್ಟಿಯಿಂದ ಹೊರಗಡೆ ಎಲ್ಲರು ಒಟ್ಟಗೆ ಧ್ವನಿ‌ ಎತ್ತಬೇಕು. ರಾಜ್ಯಾ‍ಧ್ಯಕ್ಷರು ಈಗಾಗಲೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ. ರಾಜ್ಯಾ‍ಧ್ಯಕ್ಷರ ಬದಲಾವಣೆ ಬಗ್ಗೆ ಕೇಂದ್ರ ಹೈಕಮಾಂಡ್​​ ನಿರ್ಧಾರ ಮಾಡುತ್ತದೆ. ಎಲ್ಲವನ್ನೂ ಹೈಕಮಾಂಡ್‌ ಗಮನಿಸಿದೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಏನೇ ಸಮಸ್ಯೆಗಳಿದ್ದರೂ ಕುಳಿತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು. ಹಾಲಿ ರಾಜ್ಯಾ‍ಧ್ಯಕ್ಷರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಮತ್ತು ಪಕ್ಷದ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿದೆ ಎಂದು ಪ್ರತಿಕ್ರಿಯಿಸಿದರು.

ಇನ್ನೂ ಕಠಿಣ ಕ್ರಮವಹಿಸಿ: ಮೈಕ್ರೋ ಫೈನಾನ್ಸ್​ನವರು ಮರುಪಾವತಿಗಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಸಮಯದಲ್ಲಿ ಸರ್ಕಾರ ಸ್ನೇಹಿತನಂತೆ ವರ್ತಿಸಬೇಕಿದೆ. ಈ ವಿಚಾರದಲ್ಲಿ ಸರ್ಕಾರ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ. ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿದೆ. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದ ಕಾರಣ ಅವಘಡ ಸಂಭವಿಸಿದೆ ಎಂದು ತಿಳಿಸಿದರು.

ಮಹಾರಾಣಿ ಕಾಲೇಜು ಕಟ್ಟಡ ಕುಸಿತ ವಿಚಾರವಾಗಿ ಮಾತನಾಡಿ, "ನಗರದ ಪಾರಂಪರಿಕ ಕಟ್ಟಡಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡಿ ಉಳಿಸಿಕೊಳ್ಳಬೇಕು. ಕಳೆದ 100 ವರ್ಷಗಳಿಂದ ಅಲ್ಲಿ ಯಾವುದೇ ನಿರ್ವಹಣೆ ಮಾಡಿರಲಿಲ್ಲ. ಪ್ರತಿ ಪಾರಂಪರಿಕ ಕಟ್ಟಡಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಬೇಕು. ನಗರದ ಲ್ಯಾನ್ಸ್‌ ಡೌನ್‌ ಬಿಲ್ಡಿಂಗ್ ಮತ್ತು ದೇವರಾಜ ಮಾರುಕಟ್ಟೆಯ ಕಟ್ಟಡಗಳಿಗೆ ಈಗಾಗಲೇ ನಿರ್ವಹಣೆ ಕಾರ್ಯ ಪ್ರಾರಂಭ ಮಾಡಬೇಕು, ಅವುಗಳನ್ನು ಉಳಿಸಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳನ್ನು ಕೆಡವಿ ಮತ್ತೆ ಕಟ್ಟುವುದಕ್ಕೆ ನಮ್ಮ ವಿರೋಧವಿದೆ. ಎಲ್ಲ ಕಟ್ಟಡಗಳ ನಿರ್ವಹಣೆ ಮಾಡಿದರೆ ಸಾಕು. ಈ ವಿಚಾರದಲ್ಲಿ ಸರ್ಕಾರ ಬೇಗ ನಿರ್ಧಾರ ಮಾಡಬೇಕು" ಎಂದು ಹೇಳಿದರು.

ಕೇಂದ್ರ ಬಜೆಟ್ ಮೇಲೆ ನಿರೀಕ್ಷೆಗಳು: "ನಮ್ಮ ಮೈಸೂರಿಗೆ ಈ ಬಜೆಟ್​ನಲ್ಲಿ ಸಾಕಷ್ಟು ವಿಚಾರಗಳಿಗೆ ಮನವಿ ಮಾಡಿಕೊಂಡಿದ್ದೇನೆ. ಆದರೆ ಈಗಾಗಲೇ ಆಗಿರುವ ಕೆಲಸಗಳೇ ಬಾಕಿ ಇದೆ. ರೈಲ್ವೆ ನಿಲ್ದಾಣದ 2ನೇ ಎಂಟ್ರಿ ಪಾಯಿಂಟ್ ಅಭಿವೃದ್ಧಿ, ಮೈಸೂರು ಕುಶಾಲನಗರ ಹೈವೇ, ಮಣಿಪಾಲ್ ಆಸ್ಪತ್ರೆಯ ಫ್ಲೈ ಓವರ್, ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್‌ ಹೈವೇಯಲ್ಲಿ ಅನೇಕ ಕೆಲಸಗಳು ಆಗಬೇಕಿದೆ.

ಕೊಡಗಿನ ಚಿಕ್ಕ ಚಿಕ್ಕ ಹಾಡಿಗಳಿಗೆ ರಸ್ತೆ, ಇದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೈಸೂರಿನಲ್ಲಿರುವ ಹಳೆಯ ಡಿಸಿ ಕಚೇರಿಯನ್ನು ಮ್ಯೂಸಿಯಂ ಮಾಡಬೇಕು. ಮೈಸೂರಿನಲ್ಲಿ ಆಧುನಿಕ ಯೋಗ ಪ್ರಾರಂಭವಾದ ಕಾರಣ ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ನಗರದ ಎಲ್ಐಸಿ ಸರ್ಕಲ್​ನಲ್ಲಿ ಅರ್ಜುನ ಆನೆಯ ಪ್ರತಿಮೆ ಆಗಬೇಕು. ಅದಕ್ಕೆ ಎಂಸಿಸಿಯಲ್ಲಿ ಕೂಡಾ ಮನವಿ ಮಾಡಿಕೊಂಡಿದ್ದೇನೆ‌. ಈ ಎಲ್ಲಾ ಕೆಲಸಗಳು ಮೈಸೂರಿಗೆ ಆಗಬೇಕಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ: ಸಂಸದ ಯದುವೀರ್‌ ಒಡೆಯರ್‌

Last Updated : Jan 30, 2025, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.