ಹೈದರಾಬಾದ್: ಕೃತಕ ಬುದ್ಧಿಮತ್ತೆ ಎಂಬುದು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಕ್ಷೇತ್ರವಾಗಿದ್ದು, ಇದು ಕಂಪ್ಯೂಟರ್ ಸಾಫ್ಟ್ವೇರ್ ಮೂಲಕ ಮಾನವನ ಬುದ್ದಿವಂತಿಕೆಯನ್ನು ಅನುಕರಿಸುವ ತಂತ್ರವಾಗಿದೆ. ಎಐ ಮೂಲಕ ವೇಗವಾಗಿ ಡೇಟಾ ಪ್ರಕ್ರಿಯೆಗೊಳಿಸಬಹುದು. ಇದರಿಂದ ಮಾನವನ ಬುದ್ಧಿವಂತಿಕಗೆ ಅಗತ್ಯವಾಗಿರುವ ಕಾರ್ಯವನ್ನು ನಿರ್ವಹಿಸಬಹುದಾಗಿದೆ. ಇದು ಅನಿರೀಕ್ಷಿತ ಸಾಮರ್ಥ್ಯ ಮತ್ತು ಸವಾಲಿನ ಬಾಗಿಲನ್ನು ತೆರೆಯುತ್ತದೆ. ಇದು ಉತ್ಪಾದಕತೆ ವೃದ್ಧಿಸಿ, ಆರೋಗ್ಯ ಸೇವೆ ಸುಧಾರಣೆ ಮತ್ತು ಶಿಕ್ಷಣ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಕಾಡುವ ಪ್ರಮುಖ ನೈತಿಕ ಪ್ರಶ್ನೆ ಎಂದರೆ ಖಾಸಗಿತನ, ಮಾನವ ಹಕ್ಕು ಮತ್ತು ಉದ್ಯೋಗ ನಷ್ಟದ ಸಮಸ್ಯೆಗಳು ಎದುರಾಗುವಿಕೆ.
DALLE ಮೂಲಕ ಪಠ್ಯದ ವಿವರಣೆ ಆಧಾರದ ಮೇಲೆ ಎಐ ಸಮುದ್ರ ತೀರದ ಚಿತ್ರವನ್ನು ರಚಿಸಲಾಗಿದೆ. ಇದರ ಸಂಪೂರ್ಣ ಚಿತ್ರ ಅಂತಿಮವಾಗುವವರೆಗೆ ನನ್ನ ಮಗ ರಾಹುಲ್ ಅದರೊಂದಿಗೆ ಸಂವಹನ ನಡೆಸುತ್ತೇಲೆ ಇದ್ದ, ಈ ಸಮುದ್ರತೀರ ನೋಡಿದಾಕ್ಷಣ ಎಲ್ಲೋ ನೋಡಿದ ಪರಿಚಯವಾಯಿತು. ಇದು ದಕ್ಷಿಣ ಕೇರಳದ ಕೊಲ್ಲಂನ ತಂಗಸ್ಸೆರಿ ಸಮುದ್ರ ತೀರ. ನನ್ನ ಆರಂಭದ ವಿಜ್ಞಾನ ವೃತ್ತಿಯಲ್ಲಿ ಕೇರಳದ ಕರಾವಳಿ ತೀರವನ್ನು ಸುತ್ತಿದ್ದೆ. ಈ ಮೂಲಕ ಅದರ ಲ್ಯಾಂಡ್ಮಾರ್ಕ್ಗಳು ನನಗೆ ಪರಿಚಯವಿತ್ತು.
ವೆಬ್ಸೈಟ್ DALLE ನೈಜ ಚಿತ್ರ ಮತ್ತು ಕಲೆಗಳನ್ನು ನೈಸರ್ಗಿಕ ಭಾಷೆಯ ವಿವರಣೆ ಮೂಲಕ ನೀಡುತ್ತದೆ. ಇದರ ಫಲಿತಾಂಶವೂ ನನ್ನಲ್ಲಿ ಅಚ್ಚರಿ ಮೂಡಿಸುವ ಜೊತೆಗೆ ನಮ್ಮ ಜೀವನದಲ್ಲಿ ಎಐ ಮೂಲಕ ಎಷ್ಟು ಅಭೂತಪೂರ್ವವಾಗಿ ವಿಕಸನಗೊಳ್ಳುತ್ತಿದೆ ಎಂಬುದನ್ನು ಚಿಂತಿಸುವಂತೆ ಮಾಡಿತು.
ಟಾಲ್‌ಸ್ಟಾಯ್ ಮತ್ತು ದೋಸ್ಟೋವ್ಸ್ಕಿಯಂತಹ ಕಲಾವಿದರ ಪ್ರತಿಭೆ ಮೇಲೆ ಈ ಎಐಗಳು ಅತಿಕ್ರಮಣ ಮಾಡುತ್ತಿವೆಯೇ ಎನ್ನಿಸುತ್ತದೆ. ಮಾನವ ಮತ್ತು ಎಐ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಎಐ ಕೇವಲ ಸಂಕುಚಿತ ಬುದ್ಧಿವಂತಿಕೆ ಹೊಂದಿದೆ. ಸಾಮಾನ್ಯ ಬುದ್ಧಿವಂತಿಕೆ ಹೊಂದಿರುವ ಮಾನವರು ಎಐ ಗಿಂತ ವೇಗವಾಗಿ ಹೊಸ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಕಲಿಯಬಹುದಾಗಿದೆ
ಎರಡನೇಯದಾಗಿ ಈ ಎಐಗಳು ಭಾವನಾತ್ಮಕ ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಪರಸ್ಪರ ಪ್ರತಿಕ್ರಿಯಿಸುವ ಸಾಮರ್ಥ್ಯ ಕೊರತೆ ಹೊಂದಿದೆ. ಇವು ಕೃತಕ ಬುದ್ಧಿವಂತೆ ಸೃಷ್ಟಿಗೆ ಮತ್ತು ನೈಜತೆಗೆ ಅಗತ್ಯವಾಗಿದೆ. ಎಐ ಅಭಿವೃದ್ಧಿಪಡಿಸಿದ ಸಮುದ್ರತೀರದ ಚಿತ್ರವನ್ನು ಕ್ರಿಯಾತ್ಮಕ ಕೆಲಸ ಎಂದು ಹೇಳಲು ಸಾಧ್ಯವಿಲ್ಲ. ಇದನ್ನು ನಮ್ಮ ಅಣತಿಯ ಸಮರ್ಪಣೆ ಮೇರೆಗೆ ಅಭಿವೃದ್ಧಿ ಮಾಡಲಾಗಿದೆ.
ಆದಾಗ್ಯೂ ಎಐನ ಮಿಮಿಕ್ ಸಾಮರ್ಥ್ಯಗಳಿಂದ ಚಲನಚಿತ್ರ ಸ್ಕ್ರಿಪ್ಟ್‌ಗಳು ಮತ್ತು ನಟನೆಯಂತಹ ಸೃಜನಶೀಲ ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸಬಹುದು. ಓಪನ್ ಎಐ ಚಾಟ್ಜಿಪಿಟಿಯನ್ನು ಬಿಡುಗಡೆ ಮಾಡಿದಾಗ ಇದು ಅನೇಕ ಬಗೆಯ ಸಂಪೂರ್ಣ ಪ್ರಬಂಧಗಳನ್ನು ಅಭಿವೃದ್ಧಿ ಮಾಡಿತು. ಅಲ್ಲದೇ ಎಐಗಳು ಯಾವುದೇ ಪರಿಹಾರ ನೀಡದೇ ನಟರು ಮತ್ತು ಬರಹಗಾರರು, ಹಾಲಿವುಡ್ ಸ್ಟುಡಿಯೋಗಳು ಮತ್ತು ಸ್ಟ್ರೀಮಿಂಗ್ ಸೇವೆಗಳ ನೀಡಿದ ಹಿನ್ನೆಲೆ ಟೀಕೆಗೆ ಒಳಪಡಿತ್ತು. ಈ ತಾಣಗಳು ನಟರ ಒಂದೇ ರೀತಿಯ ವಸ್ತುಗಳ ಅಸ್ತಿತ್ವದಲ್ಲಿರುವ ಅಂಶಗಳ ಆಧಾರದ ಮೇಲೆ ನಟರ ಹೋಲಿಕೆಗಳ ಡಿಜಿಟಲ್ ಪ್ರತಿಕೃತಿಗಳನ್ನು ರಚಿಸಿತು.