ETV Bharat / technology

ಮೆಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾ ಪ್ರಭಾವ: ಲಕ್ಷ - ಲಕ್ಷ ಕೋಟಿ ದಾಟಿದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮೌಲ್ಯ! - ECONOMIC SURVEY

Economic Survey: ಕಳೆದ 10 ವರ್ಷಗಳಲ್ಲಿ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಹಲವು ಪಟ್ಟು ಹೆಚ್ಚಾಗಿದ್ದು, 2023-24ರ ಸಾಲಿನಲ್ಲಿ 9.52 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿವೆ.

BUDGET SESSION 2025  ELECTRONICS INDUSTRY  Make in India and Digital India  global market
ಮೆಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾ ಪ್ರಭಾವ (Photo Credit: ANI)
author img

By ETV Bharat Tech Team

Published : Jan 31, 2025, 6:51 PM IST

Economic Survey: ಕಳೆದ 10 ವರ್ಷಗಳಲ್ಲಿ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಹಲವು ಪಟ್ಟು ಹೆಚ್ಚಾಗಿದೆ. ಈ ವರ್ಷದ ಎಂದರೆ 2023-24ನೇ ಹಣಕಾಸು ವರ್ಷದಲ್ಲಿ ರೂ. 9.52 ಲಕ್ಷ ಕೋಟಿಗೆ ತಲುಪಿದೆ. ಆದರೂ ಉದ್ಯಮವು ಪ್ರಾಥಮಿಕವಾಗಿ ಜೋಡಣೆಯ ಮೇಲೆ ಕೇಂದ್ರೀಕರಿಸಿರುವುದರಿಂದ ಡಿಸೈನ್​ ಮತ್ತು ಕಾಂಪೊನೆನ್ಟ್​​ ತಯಾರಿಕೆಯಲ್ಲಿ ಸೀಮಿತ ಪ್ರಗತಿ ಕಂಡು ಬಂದಿದೆ. ಇದನ್ನು 2024-25ರ ಎಕನಾಮಿಕ್​ ಸರ್ವೇಯಲ್ಲಿ ಉಲ್ಲೇಖಿಸಲಾಗಿದೆ.

ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ 2024-25ರ ಆರ್ಥಿಕ ವರ್ಷದ ಎಕನಾಮಿಕ್​ ಸರ್ವೇ ಪ್ರಕಾರ, ಜಾಗತಿಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಭಾರತದ ಪಾಲು ನಾಲ್ಕು ಪ್ರತಿಶತದಷ್ಟಿದೆ. ಆದರೆ, ಅದರ ಗಮನವು ಮುಖ್ಯವಾಗಿ ಅಸೆಂಬ್ಲಿಂಗ್​ ಚಟುವಟಿಕೆ ಮೇಲಿದೆ. ಉತ್ತಮ ಮೂಲಸೌಕರ್ಯ, ವ್ಯವಹಾರ ಮಾಡುವ ಸುಲಭತೆ ಮತ್ತು ವಿವಿಧ ಪ್ರೋತ್ಸಾಹಕಗಳ ಜೊತೆಗೆ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮಗಳು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಿವೆ ಮತ್ತು ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿವೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ. ಆದಾಗ್ಯೂ, ವಿನ್ಯಾಸ ಮತ್ತು ಕಾಂಪೊನೆನ್ಟ್​ ತಯಾರಿಕೆಯಲ್ಲಿ ಸೀಮಿತ ಪ್ರಗತಿ ಕಂಡುಬಂದಿದೆ.

BUDGET SESSION 2025  ELECTRONICS INDUSTRY  Make in India and Digital India  global market
ಮೆಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾ ಪ್ರಭಾವ (Photo Credit: ANI)

ಸರ್ವೇ ಪ್ರಕಾರ, 2014-15ನೇ ಹಣಕಾಸು ವರ್ಷದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ದೇಶಿಯ ಉತ್ಪಾದನೆಯು 1.90 ಲಕ್ಷ ಕೋಟಿ ರೂ.ಗಳಾಗಿದ್ದು, 2023-24ನೇ ಹಣಕಾಸು ವರ್ಷದಲ್ಲಿ ಶೇ. 17.5 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ 9.52 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ಮೊಬೈಲ್ ಫೋನ್‌ಗಳ ತಯಾರಿಕೆಯಲ್ಲಿ ದಾಖಲಾಗಿರುವ ಗಮನಾರ್ಹ ಬೆಳವಣಿಗೆಯಿಂದಾಗಿ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಿದೆ ಮತ್ತು ಒಟ್ಟು ಸ್ಮಾರ್ಟ್‌ಫೋನ್ ಅವಶ್ಯಕತೆಗಳಲ್ಲಿ ಶೇ 99 ರಷ್ಟು ದೇಶೀಯ ಉತ್ಪಾದನೆಯ ಮೂಲಕ ಪೂರೈಸಲಾಗುತ್ತಿದೆ.

ಕಳೆದ ಹಣಕಾಸು ವರ್ಷದಲ್ಲಿ ದೇಶವು ಸುಮಾರು 33 ಕೋಟಿ ಮೊಬೈಲ್ ಫೋನ್ ಯೂನಿಟ್‌ಗಳನ್ನು ಉತ್ಪಾದಿಸಿದ್ದು, ಶೇ. 75ಕ್ಕೂ ಹೆಚ್ಚು ಮಾದರಿಗಳು 5G ಸಾಮರ್ಥ್ಯಗಳನ್ನು ಹೊಂದಿವೆ. ಬೃಹತ್ ದೇಶೀಯ ಮಾರುಕಟ್ಟೆ, ಕೌಶಲ್ಯಪೂರ್ಣ ಪ್ರತಿಭೆಗಳ ಲಭ್ಯತೆ ಮತ್ತು ಕಡಿಮೆ ವೆಚ್ಚದ ಕಾರ್ಮಿಕರು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎಕನಾಮಿಕ್​ ಸರ್ವೇ ಹೇಳುತ್ತದೆ.

ಇದಲ್ಲದೇ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆಗಳು ದೇಶಿಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಹೆಚ್ಚಿಸಿವೆ ಮತ್ತು ಅದರ ಪ್ರಭಾವವು ವಿಶೇಷವಾಗಿ ಮೊಬೈಲ್ ಫೋನ್ ವಿಭಾಗದಲ್ಲಿ ಕಂಡುಬಂದಿದೆ. ಎಕನಾಮಿಕ್​ ಸರ್ವೇ ಪ್ರಕಾರ, "2022-23ರ ಆರ್ಥಿಕ ವರ್ಷದಲ್ಲಿ, ಮೌಲ್ಯದ ದೃಷ್ಟಿಯಿಂದ ಕೇವಲ ನಾಲ್ಕು ಪ್ರತಿಶತದಷ್ಟು ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ, 2014-15ರಲ್ಲಿ ಈ ಅಂಕಿ ಅಂಶವು ಶೇಕಡಾ 78 ರಷ್ಟಿತ್ತು ಎಂದು ಉಲ್ಲೇಖಿಸಿದೆ. ಅದೇ ರೀತಿ ಮೊಬೈಲ್ ಫೋನ್‌ಗಳ ರಫ್ತು ಕೂಡ 2022-23 ರಲ್ಲಿ 88,726 ಕೋಟಿ ರೂ.ಗೆ ಏರಿಕೆಯಾಗಿದೆ, ಆದರೆ 2015-16 ರಲ್ಲಿ ಅದರ ಮೌಲ್ಯ ಶೂನ್ಯವಾಗಿತ್ತು.

ಓದಿ: ಡಿಜಿಟಲ್​ ವಂಚನೆ, ಸೈಬರ್​ ಅಪರಾಧ, ಡೀಪ್​ಫೇಕ್​ಗಳು ಗಂಭೀರ ಸವಾಲುಗಳಾಗಿವೆ: ರಾಷ್ಟ್ರಪತಿ ಕಳವಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.