ETV Bharat / bharat

ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ? - BUDGET 2025 EXPECTATIONS

2025-26ನೇ ಸಾಲಿನ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಬಡವರಿಗೆ ಸಿಗಲಿದೆಯಾ ವರದಾನಗಳು - ಮೋದಿಯವರ ಭರವಸೆಗಳು ಈಡೇರುತ್ತವಾ?

budget-2025-expectations-what-india-wants-from-fm-nirmala-sitharaman-on-february-1s-from-fm-nirmala-sitharaman-on-february-1
ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ? (ETV Bharat)
author img

By ETV Bharat Karnataka Team

Published : Feb 1, 2025, 7:39 AM IST

Budget 2025 Expectations : ಅಭಿವೃದ್ಧಿ ಹೊಂದಿದ ಭಾರತ ಗುರಿಯಾಗಿಟ್ಟುಕೊಂಡು ಮೋದಿ ಸರ್ಕಾರವು ಬಡತನ ನಿರ್ಮೂಲನೆ, ಆಹಾರ ಭದ್ರತೆ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಸಲದ ಬಜೆಟ್‌ನಲ್ಲಿ ಹೊಸ ಯೋಜನೆಗಳು ಘೋಷಣೆ ಆಗುತ್ತವಾ ಎಂಬ ಕುತೂಹಲ ಇದೆ. ಆದರೆ, ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ದಿನವೇ ಪ್ರಧಾನಿ ಮೋದಿ ಅವರ ಹೇಳಿಕೆಗಳು ಬಡವರು ಮತ್ತು ಮಧ್ಯಮ ವರ್ಗ ಸೇರಿದಂತೆ ಕೆಲವು ವರ್ಗಗಳಲ್ಲಿ ಭರವಸೆ ಮೂಡಿಸಿದೆ. ಕಡಿಮೆಯಾದ ಬೆಳವಣಿಗೆ ದರದಿಂದಾಗಿ ಆದಾಯ ತೆರಿಗೆಯಲ್ಲಿ ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆಗಳಿವೆ.

ಬಡವರ ಕನಸು ನನಸಾಗಬಹುದೇ?

  • ದೇಶದ ಬಡ ಕುಟುಂಬಗಳಿಗೆ ಆರೋಗ್ಯ ವಿಮೆಯನ್ನು ಒದಗಿಸುವ ಉದ್ದೇಶದಿಂದ 2018 ರಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಿಂದ 50 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ದೆಹಲಿ ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. 70 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೂ ಇದನ್ನು ವಿಸ್ತರಿಸಲಾಗಿದೆ. ಹಾಗಾಗಿ ಬಜೆಟ್‌ನಲ್ಲಿ ಅನುದಾನ ಹೆಚ್ಚಳವಾಗುವ ಸಾಧ್ಯತೆ ಇದೆ.
  • ಸೌರಶಕ್ತಿಯನ್ನು ಉತ್ತೇಜಿಸುವ ಕೇಂದ್ರವು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ತಂದಿದೆ. ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆಗಾಗಿ ಈ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ಗರಿಷ್ಠ 3 ಕಿಲೋವ್ಯಾಟ್ ವಿದ್ಯುತ್​ ಉತ್ಪಾದನೆಗಾಗಿ ಪ್ರತಿ ಮನೆಗೆ 78,000 ರೂ. ನೀಡುವ ಗುರಿ ಹೊಂದಲಾಗಿದೆ. 2026-27ರ ವೇಳೆಗೆ ಒಂದು ಕೋಟಿ ಮನೆಗಳಿಗೆ ಈ ಯೋಜನೆ ಅಡಿ ಸೋಲಾರ್​ ಹಾಕುವ ಗುರಿ ಹೊಂದಿದ್ದು, 1.45 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಈ ಯೋಜನೆ ಸಬ್ಸಿಡಿಗಾಗಿ ಬಜೆಟ್‌ನಲ್ಲಿ ಹಂಚಿಕೆ ಹೆಚ್ಚಿಸುವ ಸಾಧ್ಯತೆಯಿದೆ.
  • ಗ್ರಾಮೀಣ ಬಡವರ ಸ್ವಂತ ಮನೆ ಕನಸು ನನಸು ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ 3 ಕೋಟಿ ಮನೆಗಳ ನಿರ್ಮಾಣ ಕೈಗೆತ್ತಿಕೊಂಡಿರುವ ಕೇಂದ್ರ ಎರಡನೇ ಹಂತದಲ್ಲಿ ಎಲ್ಲರಿಗೂ ವಸತಿ ಎಂಬ ಹೆಸರಿನಲ್ಲಿ ನೆರವು ನೀಡಲಿದೆ. 2029ರ ವೇಳೆಗೆ ನಗರ ಪ್ರದೇಶದ ಒಂದು ಕೋಟಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದಕ್ಕಾಗಿ 2.30 ಲಕ್ಷ ಕೋಟಿ ವ್ಯಯಿಸಲಾಗುವುದು.
  • ಅಸುರಕ್ಷಿತ ಸಾಲಗಳನ್ನು ಒದಗಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಏಪ್ರಿಲ್ 8, 2015 ರಂದು ಪ್ರಾರಂಭಿಸಲಾಗಿದೆ. ತರುಣ್ ಅಡಿಯಲ್ಲಿ 10 ಲಕ್ಷದ ಸಾಲದ ಮಿತಿ 20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಬಾರಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದು ಕುತೂಹಲ ಮೂಡಿಸಿದೆ.
  • ಕೋವಿಡ್ ಸಮಯದಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲು ಗರೀಬ್ ಕಲ್ಯಾಣ್ ಯೋಜನೆಯನ್ನು ಮಾರ್ಚ್ 2020 ರಲ್ಲಿ ಪರಿಚಯಿಸಲಾಯಿತು. ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಮತ್ತು ಗೋಧಿ ನೀಡಲಾಗುತ್ತದೆ. ಕೇಂದ್ರವು ಈ ಯೋಜನೆಯನ್ನು 2028 ರವರೆಗೆ ವಿಸ್ತರಿಸಿದ್ದು, ಈ ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಡುವ ಸಾಧ್ಯತೆಯಿದೆ.
  • ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು 2018 ರಲ್ಲಿ ಪರಿಚಯಿಸಲಾದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೂಲಕ, ವರ್ಷಕ್ಕೆ ಮೂರು ಕಂತುಗಳಲ್ಲಿ ರೂ.6,000 ನೀಡಲಾಗುತ್ತಿದೆ. ಈ ಬಾರಿ ಈ ಆರ್ಥಿಕ ನೆರವು ಹೆಚ್ಚಿಸುವ ಸಾಧ್ಯತೆ ಇದೆ.

ಮೋದಿಯವರ ಹೇಳಿಕೆಗಳು ಕಾರ್ಯರೂಪಕ್ಕೆ ಬರಲಿವೆಯಾ?

ಪ್ರಧಾನಿ ಮೋದಿಯವರ ಇತ್ತೀಚಿನ ಹೇಳಿಕೆಗಳು ಆಯಾ ವಲಯಗಳಲ್ಲಿ ಹೊಸ ಭರವಸೆ ಮೂಡಿಸಿವೆ. ಈ ಬಾರಿಯ ಬಜೆಟ್‌ನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಹಾಗೂ ಮಹಿಳೆಯರು ಹೆಚ್ಚು ಗಮನ ಹರಿಸುವ ನಿರೀಕ್ಷೆ ಇದೆ. ಬಡವರು ಮತ್ತು ಮಧ್ಯಮ ವರ್ಗದವರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಪ್ರಧಾನಿ ಪ್ರಸ್ತಾಪಿಸುವ ಮೂಲಕ ಸೂಚನೆ ನೀಡಿದ್ದಾರೆ ಎಂದು ನಂಬಲಾಗಿದೆ. ಅಂತರ್ಗತ ಅಭಿವೃದ್ಧಿ ಹೂಡಿಕೆಗಳು ಮತ್ತು ಆವಿಷ್ಕಾರಗಳು ಗುರಿ ಎಂದು ಪ್ರಧಾನಿ ಮೋದಿ ಹೇಳಿದ ನಂತರ, ಜನಪ್ರಿಯ ಯೋಜನೆಗಳಿಗೆ ದೊಡ್ಡ ಉತ್ತೇಜನ ನೀಡುವ ಅಭಿಯಾನ ಪ್ರಾರಂಭವಾಯಿತು. ಪ್ರತಿ ವರ್ಷವೂ ವೇತನದಾರರು ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಗಾಗಿ ಕಾಯುತ್ತಿದ್ದಾರೆ. ಬೆಳವಣಿಗೆ ನಿಧಾನವಾಗುವುದರಿಂದ ಈ ಬಾರಿ ಬದಲಾವಣೆಗಳಿರಬಹುದು ಎಂದು ವಿಶ್ಲೇಷಣೆ ಸೂಚಿಸುತ್ತದೆ.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪರಿಹಾರ ಸಿಗುವುದೇ?

ಈ ಬಾರಿಯ ಕೇಂದ್ರ ಬಜೆಟ್ ಮೇಲೆ ವಸತಿ ಕ್ಷೇತ್ರ ಮತ್ತು ನಗರ ವಲಯದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದರೆ ಲಕ್ಷಾಂತರ ಜನರ ಉದ್ಯೋಗ ಸೇರಿದಂತೆ ವ್ಯವಸ್ಥೆಗೆ ದೊಡ್ಡ ಪ್ರಮಾಣದ ಹಣ ಹರಿಯುತ್ತದೆ. ವಸತಿ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮವಾಗಿ ಗುರುತಿಸಲು ಬೇಡಿಕೆಗಳು ಬಂದಿವೆ.

ಸಿಗುತ್ತಾ ಜಿಎಸ್‌ಟಿ ವಿನಾಯಿತಿ?: ಜಿಎಸ್‌ಟಿಯಿಂದಾಗಿ ದೊಡ್ಡ ನಗರಗಳ ಗ್ರಾಹಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯಾರಾದರೂ 50 ಲಕ್ಷಕ್ಕೆ ಫ್ಲಾಟ್ ಖರೀದಿಸಿದರೆ, ಅವರು 9 ಲಕ್ಷದವರೆಗೆ ಜಿಎಸ್ಟಿ ಪಾವತಿಸಬೇಕಾಗುತ್ತದೆ. ಹಾಗಾಗಿ ಜಿಎಸ್‌ಟಿ ಹೊರಗಿಟ್ಟರೆ ಅವರಿಗೆ ದೊಡ್ಡ ರಿಲೀಫ್ ಸಿಗಲಿದೆ.

ಇಲ್ಲಿಯವರೆಗೆ ಗೃಹ ಸಾಲದ ಮೇಲೆ ರೂ.2 ಲಕ್ಷದವರೆಗೆ ಬಡ್ಡಿ ಸಹಾಯಧನ ನೀಡಲಾಗುತ್ತಿದೆ. ಆದರೆ, ಅದು ಹಳೆಯ ತೆರಿಗೆ ಪದ್ಧತಿಯಲ್ಲಿದೆ. ಪ್ರಸ್ತುತ ಶೇ.70 ರಿಂದ 75ರಷ್ಟು ತೆರಿಗೆದಾರರು ಹೊಸ ತೆರಿಗೆ ವ್ಯವಸ್ಥೆಗೆ ಬದಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆಯಲ್ಲಿಯೂ ಬಡ್ಡಿ ಸಹಾಯಧನ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಇದೇ ವೇಳೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಮತ್ತೆ ಪುಟಿದೇಳುವ ಸಾಧ್ಯತೆ ಇದೆ. ಗೃಹ ಸಾಲದ ಬಡ್ಡಿ ಕಡಿತವು ಖರೀದಿದಾರರಿಗೆ ಸಹಾಯ ಮಾಡುತ್ತದೆ.

ಅಲ್ಲದೆ, ಗೃಹ ಸಾಲದ ಬಡ್ಡಿ ಪಾವತಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ರೂ.2 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಬೇಕು ಮತ್ತು ಮಧ್ಯಮ ವರ್ಗದವರ ಸ್ವಂತ ಮನೆ ಕನಸು ನನಸಾಗಿಸಲು ಉತ್ತೇಜನ ನೀಡಬೇಕು' ಎಂದು ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಿರಂಜನ್ ಹಿರಾನಂದಾನಿ ಒತ್ತಾಯಿಸಿದ್ದಾರೆ. ಅವರು ಸ್ಮಾರ್ಟ್ ಸಿಟಿ ಮಿಷನ್ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ವಿಸ್ತರಿಸಲು ಬಯಸುತ್ತಾರೆ.

ಆಗುತ್ತಾ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ?: ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಸರಕಾರ ಇನ್ನಷ್ಟು ಹೆಚ್ಚಿಸಲಿದೆ ಎಂದು ವೇತನದಾರರು/ಉದ್ಯೋಗಿ ಗುಂಪುಗಳು ಆಶಾಭಾವನೆಯಲ್ಲಿದ್ದಾರೆ . ಕಡಿಮೆ ಆದಾಯದ ಗುಂಪುಗಳಿಗೆ ತೆರಿಗೆ ವಿನಾಯಿತಿ ಮಿತಿಯು ಸಾಧ್ಯವಾದಷ್ಟು ಹೆಚ್ಚಿರಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಆದಾಗ್ಯೂ, ಹಣದುಬ್ಬರದ ಪರಿಸ್ಥಿತಿಗಳಿಗೆ ಅನುಗುಣವಾಗಿ ತೆರಿಗೆ ಕಾನೂನುಗಳು ಉದಾರೀಕರಣಗೊಳ್ಳುವ ನಿರೀಕ್ಷೆಯಿದೆ. ತೆರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸುವ ಭಾಗವಾಗಿ, ತೆರಿಗೆ ಸ್ಲ್ಯಾಬ್‌ಗಳನ್ನು 6 ರಿಂದ 3 ಸ್ಲ್ಯಾಬ್‌ಗಳಿಗೆ ಇಳಿಸುವ ಸಾಧ್ಯತೆಯಿದೆ. ಸದ್ಯ ಗರಿಷ್ಠ ತೆರಿಗೆ ದರ ಶೇ.30ರಷ್ಟಿದ್ದು, ಶೇ.25ಕ್ಕೆ ಇಳಿಕೆಯಾಗಲಿದೆ ಎಂಬ ವರದಿಗಳಿವೆ. ಪ್ರಸ್ತುತ, ಸೆಕ್ಷನ್ 87A ಅಡಿ ತೆರಿಗೆ ರಿಯಾಯಿತಿಯು ರೂ.7 ಲಕ್ಷ ಆದಾಯದವರೆಗೆ ಅನ್ವಯಿಸುತ್ತದೆ, ಆದರೆ ಅದನ್ನು ರೂ.10 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಹೀಗಾದರೆ ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ. ಅವರಿಗೆ ಪರಿಹಾರ ನೀಡಲು ಸೆಕ್ಷನ್ 80ಸಿ ತೆರಿಗೆ ವಿನಾಯಿತಿ ಮಿತಿಯನ್ನು ರೂ.2.50 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.

TDS ಮತ್ತು TCS ಮಾನದಂಡಗಳ ಸರಳೀಕರಣ: ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಮತ್ತು ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್) ಭಾರತೀಯ ತೆರಿಗೆ ವ್ಯವಸ್ಥೆಯ ಮೂಲ ಪರಿಕಲ್ಪನೆಗಳಾಗಿವೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಟಿಡಿಎಸ್ ಮತ್ತು ಟಿಸಿಎಸ್ ನಿಯಮಗಳ ಸರಳೀಕರಣ ವಿಷಯದ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ. ಈ ಸುಧಾರಣೆಗಳ ಮುಖ್ಯ ಉದ್ದೇಶವೆಂದರೆ ಆಯಾ ನಿಯಮಗಳ ನಡುವಿನ ಸಾಮ್ಯತೆ ತೊಡೆದುಹಾಕುವುದು, ಅವುಗಳನ್ನು ಸ್ಪಷ್ಟಪಡಿಸುವುದು ಮತ್ತು ಸಾಮಾನ್ಯ ಜನರಿಗೆ ಪ್ರವೇಶಿಸುವಂತೆ ಮಾಡುವುದು. ಟಿಡಿಎಸ್ ನಿಯಮಗಳಲ್ಲಿ ಪುನರಾವರ್ತಿತ ತಿದ್ದುಪಡಿಗಳಿಂದಾಗಿ ಈ ಹಿಂದೆ ಹಲವಾರು ಕಾನೂನು ವಿವಾದಗಳು ಉದ್ಭವಿಸಿವೆ. ಇದರಿಂದ ತೆರಿಗೆ ಪಾವತಿದಾರರು ಗೊಂದಲಕ್ಕೆ ಸಿಲುಕಿದ್ದಾರೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ರೂ.50,000ದಿಂದ ರೂ.75,000ಕ್ಕೆ ಹೆಚ್ಚಿಸಲಾಗಿದೆ. ಈಗ ಅದನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬುದು ಕೆಲಸಗಾರರ ಆಗ್ರಹವಾಗಿದೆ.

ಇದನ್ನು ಓದಿ:ಗುಡ್​ ನ್ಯೂಸ್: 2025ರಲ್ಲಿ ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ: ಆರ್ಥಿಕ ಸಮೀಕ್ಷೆ ವರದಿ

ಬಜೆಟ್​ ಮಂಡನೆಗೆ ಕ್ಷಣಗಣನೆ: ಆರ್ಥಿಕ ಬೆಳವಣಿಗೆಗೆ ಏನೆಲ್ಲ ಕ್ರಮ ಕೈಗೊಳ್ತಾರೆ ಸೀತಾರಾಮನ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.