Tesla Cybertruck Explosion: ಟೆಸ್ಲಾ ಸೈಬರ್‌ಟ್ರಕ್ ಮೇಲೆ ಇತ್ತೀಚೆಗೆ ದೊಡ್ಡ ದಾಳಿ ನಡೆದಿರುವುದು ಗೊತ್ತಿರುವ ಸಂಗತಿ. ಲಾಸ್ ವೇಗಾಸ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್‌ನ ಹೊರಗೆ ಈ ದಾಳಿ ನಡೆದಿತ್ತು. ಮಾಧ್ಯಮ ವರದಿ ಪ್ರಕಾರ, ಅವಘಡದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ ಮತ್ತು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಲಾಸ್ ವೇಗಾಸ್ ಪೊಲೀಸರು, AI ಜೊತೆಗೆ ಚಾಟ್‌ಜಿಪಿಟಿಯನ್ನು ಬಳಸಿ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಲೋನ್ ಮಸ್ಕ್ ಹೇಳಿದ್ದೇನು?: ಸೈಬರ್‌ಟ್ರಕ್ ಮೇಲಿನ ದಾಳಿಯ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಪ್ರತಿಕ್ರಿಯಿಸಿ, ಸ್ಫೋಟಕ ವಸ್ತು ಮತ್ತು ಗ್ಯಾಸ್ ಕ್ಯಾನಿಸ್ಟರ್‌ಗಳು ವಾಹನದಲ್ಲಿ ಸಿಕ್ಕಿವೆ. ಇದರಿಂದಾಗಿ ಸ್ಫೋಟ ಸಂಭವಿಸಿದೆ. ಸೈಬರ್‌ಟ್ರಕ್‌ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಎಲೋನ್ ಮಸ್ಕ್ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಟೆಸ್ಲಾ ಚಾರ್ಜಿಂಗ್ ಸ್ಟೇಷನ್‌ನಿಂದ ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ವಿಡಿಯೋ ತುಣುಕುಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.