ETV Bharat / state

ಜೆಪಿ ನಡ್ಡಾ ಕರೆ ಮಾಡಿದ್ದರು, ಅವರಿಗೆ ಎಲ್ಲ ಮಾಹಿತಿ ನೀಡಿದ್ದೇನೆ : ಬಿ ಶ್ರೀರಾಮುಲು - B SRIRAMULU

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾ ಅವರ ಕರೆ ಬಳಿಕ ಮಾಜಿ ಸಚಿವ ಬಿ ಶ್ರೀರಾಮುಲು ಶಾಂತವಾಗಿದ್ದಾರೆ.

b-sriramulu
ಬಿ ಶ್ರೀರಾಮುಲು (ETV Bharat)
author img

By ETV Bharat Karnataka Team

Published : Jan 24, 2025, 3:26 PM IST

ಬಳ್ಳಾರಿ : ನಿನ್ನೆ ಜೆಪಿ ನಡ್ಡಾ ಅವರು ದೂರವಾಣಿ ಮೂಲಕ ಮಾತಾಡಿದ್ರು. ಅವರಿಗೆ ಸಭೆಯಲ್ಲಿ ಏನು ನಡೆಯಿತು ಎಂಬುದರ ಮಾಹಿತಿಯನ್ನೂ ವಿವರಿಸಿದ್ದೇನೆ. ಕೋರ್ ಕಮಿಟಿಯಲ್ಲಿ ರಾಧಾಮೋಹನ್ ಅಗರವಾಲ್ ನಡೆದುಕೊಂಡ ಬಗ್ಗೆಯೂ ಹೇಳಿದ್ದೇನೆ. ರಾಮುಲು ನಿನ್ನ ಪರವಾಗಿ ನಾನಿದ್ದೀನಿ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರೋದಿದ್ರೆ ಬನ್ನಿ ಎಂದು ಹೇಳಿದ್ರು. ನಾನು ಬರ್ತೀನಿ ಎಂದು ಹೇಳಿದ್ದೀನಿ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರು ತಿಳಿಸಿದ್ದಾರೆ.

ಅಸಮಾಧಾನದ ಕುರಿತು ಬಳ್ಳಾರಿಯ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ, ದೆಹಲಿಗೆ ಯಾವಾಗಲಾದರೂ ಬನ್ನಿ. ಮೋದಿ, ಅಮಿತ್ ಶಾ ಅವರಿಗೆ ಸುದ್ದಿ ಮುಟ್ಟಿಸಿದ್ದೇವೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದಿದ್ದಾರೆ ಎಂದರು.

ಜೋಶಿಯವರೂ ಕಾಲ್ ಮಾಡಿ, ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ರು. ಅಷ್ಟೊತ್ತಿಗೆ ನಡ್ಡಾ ಕಾಲ್ ಮಾಡಿದ್ರು.
ನಿಮಗೆ ನೋವಾಗಿದೆ ಅನ್ನೋದು ಗೊತ್ತಾಗಿದೆ. ಅಗರ್​ವಾಲ್​ ಸಹಿತ ತಮ್ಮ ಮಾತು ಹಿಂದಕ್ಕೆ ತಗೊಳ್ಳೋದಾಗಿ ಹೇಳಿದ್ದಾರೆ.
ನೀವು ಪಾರ್ಟಿ ಬಿಡುವ ಬಗ್ಗೆ ಯೋಚನೆ ಮಾಡಬೇಡಿ ಎಂದು ಜೋಶಿ ಹೇಳಿದ್ರು ಎಂದು ತಿಳಿಸಿದರು.

ವಿಜಯೇಂದ್ರ ನಿನ್ನೆ ನನ್ ಜೊತೆ ಮಾತಾಡಿದ್ರು. ನಿಮಗೆ ಈ ರೀತಿ ಆಗಿರೋದು ನೋವಾಗಿದೆ ಎಂದರು. ಆರ್. ಅಶೋಕ್, ಬೊಮ್ಮಾಯಿ, ಸದಾನಂದ ಗೌಡ್ರು ಮಾತನಾಡಿದ್ದಾರೆ. ಎಲ್ಲರಿಗೂ ನನ್ನ ಮೇಲೆ ವಿಶ್ವಾಸ ಇದೆ. ನನ್ನ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಬಿಜೆಪಿಗೆ ಸಾಧ್ಯ ಆದಷ್ಟು ಅಳಿಲು ಸೇವೆ ಸಲ್ಲಿಸಿದ್ದೀನಿ. ಹೀಗಾಗಿ ಅದನ್ನ ಗುರುತಿಸಿ ಮಾತನಾಡ್ತಿದ್ದಾರೆ ಎಂದರು.

ಇದನ್ನೂ ಓದಿ : ಸುದ್ದಿಗೋಷ್ಠಿ ನಡುವೆ ಶ್ರೀರಾಮುಲುಗೆ ಜೆ.ಪಿ.ನಡ್ಡಾ ಕರೆ: ದೆಹಲಿಗೆ ಬುಲಾವ್ - J P NADDA TALKS WITH B SRIRAMULU

ETV Bharat Logo

Copyright © 2025 Ushodaya Enterprises Pvt. Ltd., All Rights Reserved.