ETV Bharat / bharat

ಡಾಲರ್‌-ರೂಪಾಯಿ ಪರಿವರ್ತನೆ ಹೆಸರಲ್ಲಿ ₹5 ಲಕ್ಷ ವಂಚನೆ; ಮೂವರು ಪೊಲೀಸರು ಸೇರಿ 9 ಮಂದಿ ಅರೆಸ್ಟ್‌ - DOLLARS TO RUPEES EXCHANGE CHEATING

ಉತ್ತರಾಖಂಡದ ಡೆಹ್ರಾಡೂನ್​ನಲ್ಲಿ ಕಡಿಮೆ ಬೆಲೆಗೆ ಅಮೆರಿಕನ್​ ಡಾಲರ್ ನೀಡುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ ಭಾರೀ ಹಣ ದೋಚಿ ಪರಾರಿಯಾಗಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಪೊಲೀಸರು ಎಂಬುದು ಗಮನಾರ್ಹ.

ROBBERY CASE
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : Feb 3, 2025, 7:21 PM IST

Updated : Feb 3, 2025, 7:28 PM IST

ಡೆಹ್ರಾಡೂನ್(ಉತ್ತರಾಖಂಡ): ಕಡಿಮೆ ಬೆಲೆಗೆ ಅಮೆರಿಕದ ಡಾಲರ್‌ಗಳನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿ ಕೊಡುವುದಾಗಿ ಹೇಳಿ 5 ಲಕ್ಷ ರೂಪಾಯಿ ಎಗರಿಸಿ ಓಡಿಹೋಗಿದ್ದ ಮೂವರು ಪೊಲೀಸರು ಸೇರಿದಂತೆ ಒಟ್ಟು 9 ಆರೋಪಿಗಳನ್ನು ಡೆಹ್ರಾಡೂನ್ ಪೊಲೀಸರು ಸೆರೆ ಹಿಡಿದಿದ್ದಾರೆ.

ಈ ಮೂವರ ಪೈಕಿ ಇಕ್ರಾರ್ (43) ಎಂಬಾತ ಪ್ರಸ್ತುತ ಪ್ರೇಮ್‌ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಉಳಿದಂತೆ ಅಬ್ದುಲ್ ರೆಹಮಾನ್ (34) ಮತ್ತು ಸಲಾಮ್ (32) ಪ್ರೇಮ್‌ನಗರ ಪ್ರದೇಶದ ಜಜ್ರಾದಲ್ಲಿರುವ ಇಂಡಿಯಾ ರಿಸರ್ವ್ ಬೆಟಾಲಿಯನ್ (ಐಆರ್‌ಬಿ)ನ ಸಿಬ್ಬಂದಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಮನಗರದಲ್ಲೇ ಈ ಘಟನೆ ನಡೆದಿದೆ. ಅಗ್ಗದ ದರದಲ್ಲಿ ರೂಪಾಯಿಗೆ ಡಾಲರ್ ಅನ್ನು ಪರಿವರ್ತಿಸಿ ಕೊಡುವುದಾಗಿ ಭರವಸೆ ನೀಡಿ ವ್ಯಕ್ತಿಯೊಬ್ಬನನ್ನು ತಮ್ಮ ಬಲೆಗೆ ಬೀಳಿಸಿಕೊಂಡ ಆರೋಪಿಗಳು, ಆತ ತಮ್ಮ ಸಂಪರ್ಕಕ್ಕೆ ಬರುತ್ತಿದ್ದಂತೆ ಬೆದರಿಸಿ ಆತ ತಂದಿದ್ದ ಹಣ ಕಸಿದು ಕಾಲ್ಕಿತ್ತಿದ್ದರು.

ಕೇವಲ 4 ಡಾಲರ್ ನೋಟುಗಳು ಮಾತ್ರ ಅಸಲಿ: ಮೋಸ ಹೋದ ರಿಷಿಕೇಶದ ವ್ಯಾಪಾರಸ್ಥ ಯಶ್ಪಾಲ್ ಸಿಂಗ್ ಅಸ್ವಾಲ್ ಎಂಬವರು ಪ್ರೇಮ್‌ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಅದರಂತೆ, ಪ್ರಕರಣದ ಮಾಸ್ಟರ್‌ಮೈಂಡ್‌ಗಳಾದ ಹಸೀನ್ ಮತ್ತು ಪ್ರೇಮ್ ಪ್ರಕಾಶ್ ಎಂಬವರನ್ನು ಆರಂಭದಲ್ಲಿ ರೂರ್ಕಿಯಿಂದ ಬಂಧಿಸಿದರೆ, ಉಳಿದ ಆರೋಪಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಂಧಿಸಲಾಗಿದೆ. ಎರಡು ಬಂಡಲ್ ನಕಲಿ ಡಾಲರ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೇವಲ ನಾಲ್ಕು ಡಾಲರ್ ನೋಟುಗಳು ಮಾತ್ರ ಅಸಲಿಯಾಗಿದ್ದು, ಉಳಿದವು ನಕಲಿಯಾಗಿದ್ದವು. ಸ್ಕ್ಯಾನಿಂಗ್ ಮೂಲಕ ನಕಲಿ ಡಾಲರ್‌ಗಳನ್ನು ತಯಾರಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್‌ಎಸ್‌ಪಿ ಅಜಯ್ ಸಿಂಗ್ ಮಾಹಿತಿ ನೀಡಿದರು.

8 ಲಕ್ಷ ರೂಪಾಯಿಗೆ ಒಪ್ಪಂದ: "ಆಕಸ್ಮಿಕವಾಗಿ ಪರಿಚಿತನಾದ ಚಮೋಲಿಯ ಕುಂದನ್ ನೇಗಿ ಎಂಬವನ ಮಾತು ನಂಬಿ ಡಾಲರ್‌ಗಳನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಲು ತಿಳಿಸಿದ್ದೆ. ಅದರಂತೆ ಉತ್ತರಕಾಶಿ ಜಿಲ್ಲೆಯ ಮೋರಿಯ ವ್ಯಕ್ತಿಯೊಬ್ಬ ತನ್ನ 20,000 ಡಾಲರ್‌ಗಳನ್ನು ರೂಪಾಯಿಗಳಾಗಿ ಪರಿವರ್ತಿಸಲು ಒಪ್ಪಿಕೊಂಡಿರುವುದಾಗಿ ನೇಗಿ ನನ್ನ ಬಳಿ ಹೇಳಿದ್ದ. 20,000 ಡಾಲರ್‌ಗಳನ್ನು ಭಾರತೀಯ ಕರೆನ್ಸಿಯಲ್ಲಿ ಸುಮಾರು 8 ಲಕ್ಷ ರೂ.ಗೆ ವಿನಿಮಯ ಮಾಡಿಕೊಳ್ಳಲು ಒಪ್ಪಂದವಾಗಿತ್ತು. ನೇಗಿ ಸೂಚನೆಯಂತೆ ಜ.31ರಂದು ಡಾಲರ್‌ ಖರೀದಿಸಲು ಜಜ್ರಾದ ಬಾಲಾಜಿ ದೇವಸ್ಥಾನದ ಬಳಿ 7.5 ಲಕ್ಷ ರೂ.ಗಳ ಸಹಿತ ತೆರಳಿದ್ದೆ. ನೇಗಿ ಜೊತೆಗೆ ರಾಜೇಶ್ ರಾವತ್, ರಾಜೇಶ್ ಚೌಹಾಣ್, ರಾಜ್‌ಕುಮಾರ್ ಚೌಹಾಣ್ ಮತ್ತು ಹಸೀನ್ ಅಲಿಯಾಸ್ ಅಣ್ಣಾ ಎಂಬ ನಾಲ್ವರನ್ನು ಭೇಟಿಯಾದೆ. ಎಲ್ಲರೂ ಮಾತುಕತೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಬ್ಬರು ಪೊಲೀಸರೆಂದು ಹೇಳಿಕೊಂಡು ಬಂದರು. ಅವರಲ್ಲಿ ಒಬ್ಬರು ಸಮವಸ್ತ್ರದಲ್ಲಿದ್ದರೆ, ಇನ್ನೊಬ್ಬರು ಸಾಮಾನ್ಯ ಉಡುಪಿನಲ್ಲಿದ್ದರು. ಈ ವೇಳೆ ದಿಢೀರ್ ಬೆದರಿಸಿ ನನಗೆ ಥಳಿಸಿ ಹಣದ ಚೀಲ ಕಸಿದುಕೊಂಡು, 2.5 ಲಕ್ಷ ರೂ. ಮಾತ್ರ ಹಿಂದಿರುಗಿಸಿ ಪರಾರಿಯಾದರು ಎಂದು ಯಶ್ಪಾಲ್ ಸಿಂಗ್ ಅಸ್ವಾಲ್ ದೂರು ನೀಡಿದ್ದರು.

ಈ ದೂರಿನ ಮೇರೆಗೆ ಪ್ರೇಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಎಸ್‌ಎಸ್‌ಪಿ ಅಜಯ್ ಸಿಂಗ್ ಹೇಳಿಕೆ: "ನಿನ್ನೆಯವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ರೂರ್ಕಿಯಿಂದ ಇಬ್ಬರು ಪ್ರಮುಖ ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಲಾಗಿದೆ. ಅವರಿಂದ ನಕಲಿ ಡಾಲರ್‌ಗಳ ಬಂಡಲ್‌ಗಳು ಪತ್ತೆಯಾಗಿದ್ದು, ಅವುಗಳನ್ನು ತೋರಿಸಿ ಜನರನ್ನು ವಂಚಿಸಿ ಹಣ ಪಡೆಯುತ್ತಿರುವ ಬಗ್ಗೆ ತನಿಖೆಯಿಂದ ಗೊತ್ತಾಗಿದೆ. ಸಂಬಂಧಿತ ವಿಭಾಗಗಳ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಿಸಲಾಗಿದೆ. 2 ಲಕ್ಷ 30 ಸಾವಿರ ರೂ. ಸೇರಿದಂತೆ 2 ಬಂಡಲ್‌ ಮತ್ತು 500 ನಕಲಿ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 100 ಡಾಲರ್ ನೋಟುಗಳಿದ್ದು, ಅದರಲ್ಲಿ 4 ಡಾಲರ್‌ಗಳು ಮಾತ್ರ ನಿಜವಾದವು. ಉಳಿದವು ನಕಲಿ ಡಾಲರ್‌ಗಳ ಬಂಡಲ್‌ಗಳು. ಆರೋಪಿಗಳು ನಕಲಿ ಡಾಲರ್‌ಗಳನ್ನು ತೋರಿಸಿ ಮೋಸ ಮಾಡುವ ಮೂಲಕ ತಮ್ಮ ಬಲೆಗೆ ಬೀಳುವಂತೆ ಮಾಡುತ್ತಿದ್ದರು. ಪ್ರಕರಣ ಸಂಬಂಧ 9 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರೇಮ್‌ನಗರ ಪೊಲೀಸ್ ಠಾಣಾ ಮಟ್ಟದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿತ್ತು" ಎಂದು ಎಸ್ಎಸ್‌ಪಿ ಅಜಯ್ ಸಿಂಗ್ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು: ಡಿಜಿಟಲ್ ಅರೆಸ್ಟ್ ಮಾಡಿ ವೃದ್ಧನಿಂದ ₹6.98 ಲಕ್ಷ ಪೀಕಿದ ನಕಲಿ ಸಿಬಿಐ ಅಧಿಕಾರಿಗಳು - DIGITAL ARREST CASE

Last Updated : Feb 3, 2025, 7:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.