ETV Bharat / state

ಏರೋ ಇಂಡಿಯಾ-2025: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮನ, ಎಚ್​ಎಎಲ್​ಗೆ ಭೇಟಿ - AERO INDIA 2025

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ (ani)
author img

By ANI

Published : Feb 9, 2025, 6:05 PM IST

ನವದೆಹಲಿ: ಫೆಬ್ರವರಿ 10 ರಿಂದ ಫೆಬ್ರವರಿ 14 ರವರೆಗೆ ನಡೆಯಲಿರುವ ಏರೋ ಇಂಡಿಯಾ 2025 ರಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಇಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದರು.

ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಂಗ್, ಎಚ್ಎಎಲ್​ನ ಅತ್ಯಾಧುನಿಕ ಲಘು ಯುದ್ಧ ವಿಮಾನ (ಎಲ್​ಸಿಎ) ಎಂಕೆ 1 ಎ ಉತ್ಪಾದನಾ ಸೌಲಭ್ಯಕ್ಕೆ ಭೇಟಿ ನೀಡಿದರು. ತೇಜಸ್ ಎಂಕೆ 1 ಎ ಎಲ್​ಸಿಎ ಎಂಕೆ 1 ನ ಸುಧಾರಿತ ಆವೃತ್ತಿಯಾಗಿದ್ದು, ಇದರ ಯುದ್ಧ ದಕ್ಷತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

"ಏರೋ ಇಂಡಿಯಾ 2025 ನಲ್ಲಿ ಭಾಗವಹಿಸಲು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದೇನೆ. ನಂತರ ಎಚ್ ಎಎಲ್ ನ ಅತ್ಯಾಧುನಿಕ LCAMK1A ಉತ್ಪಾದನಾ ಸೌಲಭ್ಯಕ್ಕೆ ಭೇಟಿ ನೀಡಿದ್ದೇನೆ. ಎಂಕೆ 1 ಎ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ ಎಲ್​ಸಿಎ ಎಂಕೆ 1 ನ ಸುಧಾರಿತ ಆವೃತ್ತಿಯಾಗಿದೆ" ಎಂದು ರಕ್ಷಣಾ ಸಚಿವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಎಲ್​ಸಿಎ ಬಹು-ಪಾತ್ರದ ವಿಮಾನವಾಗಿದ್ದು, ಆಕ್ರಮಣಕಾರಿ ವಾಯು ಬೆಂಬಲ, ನಿಕಟ ಯುದ್ಧ ಮತ್ತು ನೆಲದ ದಾಳಿಗಳನ್ನು ಸುಲಭವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ತೇಜಸ್ ಎಂಕೆ 1 ಎ ರಾಷ್ಟ್ರದ ಹೆಮ್ಮೆಯಾಗಿದ್ದು, ಇದು ಮುಂಬರುವ ಅನೇಕ ದಶಕಗಳವರೆಗೆ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಸಿಂಗ್ ಹೇಳಿದರು.

ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಮೊದಲ ಮೂರು ದಿನಗಳು ವ್ಯಾಪಾರ ಸಂದರ್ಶಕರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿರುವ ಏಷ್ಯಾದ ಉನ್ನತ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ.

ಇದನ್ನೂ ಓದಿ : ಏರೋ ಇಂಡಿಯಾ-2025 ನಾಳೆಯಿಂದ; ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ವೇದಿಕೆ ಸಜ್ಜು - AERO INDIA 2025

ETV Bharat Logo

Copyright © 2025 Ushodaya Enterprises Pvt. Ltd., All Rights Reserved.