ETV Bharat / bharat

ಏಕರೂಪದ ಧಾರ್ಮಿಕ ದೇಣಿಗೆ ಕಾಯ್ದೆ ಜಾರಿಗೆ ವಿಎಚ್​ಪಿ ಒತ್ತಾಯ - UNIFORM LAW FOR RELIGIOUS DONATIONS

ಏಕರೂಪದ ಧಾರ್ಮಿಕ ದೇಣಿಗೆ ಕಾನೂನು ಜಾರಿಗೆ ವಿಎಚ್​ಪಿ ಒತ್ತಾಯಿಸಿದೆ.

ಏಕರೂಪದ ಧಾರ್ಮಿಕ ದೇಣಿಗೆ ಕಾಯ್ದೆಗೆ ವಿಎಚ್​ಪಿ ಒತ್ತಾಯ
ಏಕರೂಪದ ಧಾರ್ಮಿಕ ದೇಣಿಗೆ ಕಾಯ್ದೆಗೆ ವಿಎಚ್​ಪಿ ಒತ್ತಾಯ (ians)
author img

By PTI

Published : Feb 9, 2025, 6:49 PM IST

ಮಹಾಕುಂಭ ನಗರ: ಧಾರ್ಮಿಕ ದೇಣಿಗೆಗಳನ್ನು ನೀಡುವ ವಿಷಯದಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ ಏಕರೂಪದ ಕಾನೂನನ್ನು ಜಾರಿಗೆ ತರುವಂತೆ ವಿಶ್ವ ಹಿಂದೂ ಪರಿಷತ್ ನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭಾನುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ (ವಿಎಚ್​ಪಿ) ನ ಮೂರು ದಿನಗಳ ಸಭೆಯ ನಂತರ ಮಾತನಾಡಿದ ಕುಮಾರ್, ಧಾರ್ಮಿಕ ದೇಣಿಗೆಗಳಿಗೆ ಪ್ರತ್ಯೇಕ ಕಾನೂನುಗಳ ಅಸ್ತಿತ್ವವನ್ನು ಪ್ರಶ್ನಿಸಿದರು.

"ಮುಸ್ಲಿಮರು ಅಲ್ಲಾಹುವಿಗೆ ಭೂಮಿಯನ್ನು ದಾನ ಮಾಡಿದಾಗ, ಅದು ವಕ್ಫ್ ಆಸ್ತಿಯಾಗುತ್ತದೆ. ಆದರೆ ಹಿಂದೂಗಳು ದೇವಾಲಯಗಳಿಗೆ, ಕ್ರಿಶ್ಚಿಯನ್ನರು ಚರ್ಚುಗಳಿಗೆ ಅಥವಾ ಸಿಖ್ಖರು ಗುರುದ್ವಾರಗಳಿಗೆ ದೇಣಿಗೆ ನೀಡಿದಾಗ ಅದೆಲ್ಲಿ ಹೋಗುತ್ತದೆ? ವಿಭಿನ್ನ ಧರ್ಮಗಳಿಗೆ ವಿಭಿನ್ನ ಕಾನೂನುಗಳು ಏಕೆ?" ಎಂದು ಅವರು ಪ್ರಶ್ನಿಸಿದರು.

1954 ರ ವಕ್ಫ್ ಕಾಯ್ದೆಯನ್ನು ಉಲ್ಲೇಖಿಸಿದ ಅವರು, ಇಬ್ಬರು ಕಾಂಗ್ರೆಸ್ ರಾಜ್ಯಸಭಾ ಸದಸ್ಯರು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಇರುವ ಬಗ್ಗೆ ಆಗಿನ ಕಾನೂನು ಸಚಿವರನ್ನು ಪ್ರಶ್ನಿಸಿದ್ದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

"ಎಲ್ಲರಿಗೂ ಸಾಮಾನ್ಯ ಕಾನೂನು ಜಾರಿಗೊಳಿಸುವ ಬಗ್ಗೆ ಪರಿಗಣಿಸುವುದಾಗಿ ಆಗ ಸಚಿವರು ಹೇಳಿದ್ದರು. ಈಗ ಸರ್ಕಾರವು ಅಂತಹ ಕಾನೂನನ್ನು ಜಾರಿಗೆ ತರುವ ಸಮಯ ಬಂದಿದೆ" ಎಂದು ಕುಮಾರ್ ಹೇಳಿದರು.

ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳನ್ನು ಮರಳಿ ಪಡೆಯುವ ವಿಷಯದ ಬಗ್ಗೆ ಮಾತನಾಡಿದ ವಿಎಚ್​ಪಿ ಮುಖಂಡ ಅಲೋಕ್ ಕುಮಾರ್, "ಈ ದೇವಾಲಯಗಳನ್ನು ಮರಳಿ ಪಡೆಯಲು ನಾವು ಎಲ್ಲಾ ರೀತಿಯ ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾವು ಹಿಂದೂ ಸಮುದಾಯಕ್ಕೆ ಭರವಸೆ ನೀಡಿದ್ದೇವೆ" ಎಂದು ಹೇಳಿದರು.

ಹಿಂದೂ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ವಿಷಯದ ಬಗ್ಗೆಯೂ ವಿಎಚ್​ಪಿ ಸಭೆಯಲ್ಲಿ ಚರ್ಚಿಸಲಾಯಿತು.

ವಿವಿಧ ರಾಜ್ಯಗಳಲ್ಲಿನ ದೇವಾಲಯಗಳು 208 ವರ್ಷಗಳಿಂದಲೂ ಸರ್ಕಾರದ ನಿಯಂತ್ರಣದಲ್ಲಿವೆ. ದೇವಾಲಯದ ಆದಾಯದ ಶೇಕಡಾ 12 ರಷ್ಟನ್ನು ಆಡಳಿತಾತ್ಮಕ ವೆಚ್ಚಗಳಾಗಿ ಸರ್ಕಾರದ ಬೊಕ್ಕಸಕ್ಕೆ ಜಮಾ ಮಾಡಬೇಕೆಂದು ಕಾನೂನುಗಳು ಕಡ್ಡಾಯಗೊಳಿಸಿವೆ ಎಂದು ಕುಮಾರ್ ಹೇಳಿದರು. ದೇವಾಲಯದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಲು ಆಂಧ್ರಪ್ರದೇಶದ ವಿಜಯವಾಡದಲ್ಲಿ 2.5 ಲಕ್ಷ ಜನರು ಭಾಗವಹಿಸಿದ್ದ ಸಭೆಯನ್ನು ಉಲ್ಲೇಖಿಸಿದ ಅವರು, ಮುಂಬರುವ ತಿಂಗಳುಗಳಲ್ಲಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಇದೇ ರೀತಿಯ ದೊಡ್ಡ ಪ್ರಮಾಣದ ಸಭೆಗಳನ್ನು ನಡೆಸುವುದಾಗಿ ಪ್ರಕಟಿಸಿದರು.

"ನಾವು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಶಾಸಕರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸಲಿದ್ದೇವೆ" ಎಂದು ಅವರು ತಿಳಿಸಿದರು. ಪರಿಶಿಷ್ಟ ಜಾತಿಗಳು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯದೊಂದಿಗೆ ದೇವಾಲಯದ ಆಡಳಿತವು ಭಕ್ತರ ಕೈಯಲ್ಲಿರಬೇಕು ಎಂದು ಕುಮಾರ್ ಆಗ್ರಹಿಸಿದರು.

ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದರೆ, ಆರೋಗ್ಯ, ಧಾರ್ಮಿಕ ಶಿಕ್ಷಣ ಮತ್ತು ದೇವಾಲಯಗಳ ನಿರ್ವಹಣೆಯಂತಹ ಹಿಂದೂಗಳ ಕಲ್ಯಾಣಕ್ಕಾಗಿ ಹೆಚ್ಚುವರಿ 1 ಲಕ್ಷ ಕೋಟಿ ರೂ.ಗಳ ಆದಾಯವನ್ನು ಸೃಷ್ಟಿಸಬಹುದು ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ : ಆರ್​ಎಸ್​ಎಸ್​ ಮೌನ ಪ್ರಚಾರದಿಂದ ಗೆದ್ದಿತಾ ಬಿಜೆಪಿ? ದೆಹಲಿಯಲ್ಲಿ ಸಂಘ-ಕಾರ್ಯಕರ್ತರು ನಡೆಸಿದ ಸಭೆಗಳೆಷ್ಟು? - DELHI ELECTIONS 2025

ETV Bharat Logo

Copyright © 2025 Ushodaya Enterprises Pvt. Ltd., All Rights Reserved.