Skoda Kylaq Booking: ಇತ್ತೀಚೆಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸ್ಕೋಡಾ ಕೈಲಾಕ್ಗೆ ಜನರು ಮನ ಸೋತಿದ್ದಾರೆ. ದೇಶದ್ಯಾದಂತ ಸ್ಕೋಡಾ ಕೈಲಾಕ್‌ನ ಬುಕಿಂಗ್ ಡಿಸೆಂಬರ್ 2 ರಿಂದ ಪ್ರಾರಂಭಿಸಲಾಯಿತು. ಕಾರು ಬುಕಿಂಗ್ ಪ್ರಕ್ರಿಯೆ ಆರಂಭಗೊಂಡು ಕೇವಲ ಹತ್ತು ದಿನಗಳು ಮಾತ್ರ ಕಳೆದಿವೆ. ಆದರೆ ಈ ವಾಹನ ತಯಾರಕರು ಸುಮಾರು 10 ಸಾವಿರ ಯುನಿಟ್‌ಗಳ ಬುಕಿಂಗ್‌ಗಳನ್ನು ಸ್ವೀಕರಿಸಿದ್ದಾರೆ. ಈ ಹೊಸ ಸಬ್ - ಕಾಂಪ್ಯಾಕ್ಟ್ SUV ಗೆ ಇಷ್ಟೊಂದು ಬೇಡಿಕೆ ಬರಲು ಕಾರಣ ಈ ಕಾರಿನ ಬೆಲೆ ಆಗಿರಬಹುದು ಅಥವಾ ಪವರ್ ಮತ್ತು ವೈಶಿಷ್ಟ್ಯಗಳ ಆಗಿರಬಹುದಾಗಿದೆ.
ಸ್ಕೋಡಾ ಕೈಲಾಕ್ ಬೆಲೆ: 7.89 ಲಕ್ಷದ ಆರಂಭಿಕ ಬೆಲೆಯೊಂದಿಗೆ ಸ್ಕೋಡಾ ಕೈಲಾಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ವಾಹನದ ಉನ್ನತ ಶ್ರೇಣಿಯ ರೂಪಾಂತರದ ಬೆಲೆ 14.40 ಲಕ್ಷ ರೂ. ಆಗಿದೆ. ವಾಹನದ ವಿತರಣೆಯು ಜನವರಿ 27, 2025 ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸ್ಕೋಡಾ ಕೈಲಾಕ್ ಬೆಲೆ ಶ್ರೇಣಿಯಲ್ಲಿ, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ಮಹೀಂದ್ರಾ XUV 3XO ನಂತಹ ಕಾರುಗಳು ಸಹ ಲಭ್ಯವಿದೆ. ಮಾರುತಿ ಸುಜುಕಿ ಬ್ರೆಝಾ ಎಕ್ಸ್ ಶೋ ರೂಂ ಬೆಲೆ ರೂ 8.34 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಟಾ ನೆಕ್ಸಾನ್ ಬೆಲೆ 7.99 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಮಹೀಂದ್ರಾ XUV 3XO ನ ಎಕ್ಸ್ ಶೋ ರೂಂ ಬೆಲೆಯು 7.79 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 15.49 ಲಕ್ಷದವರೆಗೆ ಇದೆ.