Electronics Schemes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಜೆಟ್ ಅನ್ನು ಮಂಡಿಸಿದರು. ಆರು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಘೋಷಿಸಿದರು ಮತ್ತು ಪ್ರಮುಖ ತಂತ್ರಜ್ಞಾನ ಯೋಜನೆಗಳಿಗೆ ಹಂಚಿಕೆಯನ್ನು ಪರಿಷ್ಕರಿಸಿದರು. ಸರ್ಕಾರವು ಮೊಬೈಲ್ ಫೋನ್‌ಗಳು, ಐಟಿ ಹಾರ್ಡ್‌ವೇರ್, ಸೆಮಿಕಂಡಕ್ಟರ್ ಯೋಜನೆ ಮತ್ತು ಇಂಡಿಯಾಎಐ ಮಿಷನ್‌ಗಳಿಗೆ ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕಗಳ ಹಂಚಿಕೆಯನ್ನು ಸುಮಾರು 84 ಪ್ರತಿಶತದಷ್ಟು ಹೆಚ್ಚಿಸಿ ಮುಂದಿನ ಹಣಕಾಸು ವರ್ಷಕ್ಕೆ 18,000 ಕೋಟಿ ರೂ.ಗಳನ್ನು ಘೋಷಿಸಿದರು.
ಪ್ರಮುಖ ತಂತ್ರಜ್ಞಾನ ಯೋಜನೆಗಳಿಗೆ ಹೆಚ್ಚಿದ ಹಂಚಿಕೆ : 8885 ಕೋಟಿ ರೂ.ಗಳ ಮೊತ್ತದ ಅತಿದೊಡ್ಡ ಹಂಚಿಕೆಯನ್ನು ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಗೆ ಮೀಸಲಿಡಲಾಗಿದೆ. ಇದು ಪ್ರಾಥಮಿಕವಾಗಿ ಮೊಬೈಲ್ ಫೋನ್ ಉತ್ಪಾದನೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಯೋಜನೆಯ ಫಲಾನುಭವಿಗಳಲ್ಲಿ ಫಾಕ್ಸ್‌ಕಾನ್, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಡಿಕ್ಸನ್ ಟೆಕ್ನಾಲಜೀಸ್‌ನಂತಹ ಆಪಲ್ ಮಾರಾಟಗಾರರು ಮತ್ತು ಲಾವಾ ಇಂಟರ್‌ನ್ಯಾಷನಲ್, ಸ್ಯಾಮ್‌ಸಂಗ್ ಮತ್ತು ಇತರ ಕಂಪನಿಗಳು ಸೇರಿವೆ.
ಸೆಮಿಕಂಡಕ್ಟರ್ ಯೋಜನೆಗಳಿಗೆ ಹಂಚಿಕೆಯು ದ್ವಿಗುಣಗೊಂಡಿದೆ. 2025-26 ಹಣಕಾಸು ವರ್ಷದಲ್ಲಿ ರೂ. 2,499.96 ಕೋಟಿಗಳನ್ನು ತಲುಪಿದೆ. ಇದು ಪ್ರಸ್ತುತ ಹಣಕಾಸು ವರ್ಷದಲ್ಲಿ ರೂ. 1,200 ಕೋಟಿ ಹಂಚಿಕೆಯಾಗಿತ್ತು. ವಿವಿಧ ಸೆಮಿಕಂಡಕ್ಟರ್ ಯೋಜನೆಗಳಿಗೆ ಸರ್ಕಾರವು ಒಟ್ಟು ರೂ. 1.52 ಲಕ್ಷ ಕೋಟಿ ಹೂಡಿಕೆ ಬದ್ಧತೆಯನ್ನು ಪಡೆದುಕೊಂಡಿದೆ. ಕೇಂದ್ರ ಬಜೆಟ್ ಸಂಯುಕ್ತ ಸೆಮಿಕಂಡಕ್ಟರ್‌ಗಳು, ಸೆನ್ಸಾರ್ಗಳು, ಚಿಪ್ ಅಸೆಂಬಲಿ, ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಹಂಚಿಕೆಯನ್ನು ಶೇಕಡಾ 56 ರಷ್ಟು ಹೆಚ್ಚಿಸಿದೆ. ಇದನ್ನು ಪ್ರಸ್ತುತ ಹಣಕಾಸು ವರ್ಷಕ್ಕೆ ರೂ. 2,500 ಕೋಟಿಗಳ ಪರಿಷ್ಕೃತ ಹಂಚಿಕೆಯಿಂದ ರೂ. 3,900 ಕೋಟಿಗೆ ಹೆಚ್ಚಿಸಿದೆ.
ಇಂಡಿಯಾಎಐ ಮಿಷನ್‌ಗೆ ಹಣಕಾಸು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಹನ್ನೊಂದು ಪಟ್ಟು ಹೆಚ್ಚು ಅಂದರೆ 2 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಮಿಷನ್ ಅಡಿಯಲ್ಲಿ ದೇಶೀಯ ಲಾರ್ಜ್ ಲಾಂಗ್ವೇಜ್ ಮಾಡೆಲ್ (ಎಲ್ಎಲ್ಎಮ್) ನಿರ್ಮಿಸಲು ಮತ್ತು ಆರು ತಿಂಗಳೊಳಗೆ ಕೈಗೆಟುಕುವ ವೆಚ್ಚದಲ್ಲಿ ಬಿಡುಗಡೆ ಮಾಡಲು ದೇಶ ಯೋಜಿಸುತ್ತಿದೆ. ಇನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಹಣಕಾಸು ಸರಿಸುಮಾರು ಶೇ. 48 ರಷ್ಟು ಹೆಚ್ಚಾಗಿದ್ದು, 2025-26 ರ ಹಣಕಾಸು ವರ್ಷಕ್ಕೆ 26,026.25 ಕೋಟಿ ರೂ.ಗಳನ್ನು ತಲುಪಿದೆ. ಇದು ಪ್ರಸಕ್ತ ಹಣಕಾಸು ವರ್ಷದ ಹಂಚಿಕೆಯಾದ 17,566.31 ಕೋಟಿ ರೂ.ಗಳಿಗಿಂತ ಗಮನಾರ್ಹ ಏರಿಕೆಯಾಗಿದೆ.
ಓದಿ: ಬಜೆಟ್ನಲ್ಲಿ ಮಹತ್ವದ ನಿರ್ಧಾರ; ಕಡಿಮೆಯಾಗಲಿದೆ ಇವಿ ವೆಹಿಕಲ್ಸ್, ಮೊಬೈಲ್ಗಳ ಬೆಲೆ!