ETV Bharat / state

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ ಮುಕ್ತಾಯ - 253 ಪ್ರಭೇದ ಪತ್ತೆ - BIRD CENSUS

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ ಮುಕ್ತಾಯವಾಗಿದ್ದು, 253 ಪ್ರಭೇದ ಪತ್ತೆಯಾಗಿವೆ.

Bird-census
ಪಕ್ಷಿ ಗಣತಿಯಲ್ಲಿರುವ ಪಕ್ಷಿ ತಜ್ಞರು (ETV Bharat)
author img

By ETV Bharat Karnataka Team

Published : Feb 2, 2025, 10:01 PM IST

ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪಕ್ಷಿಗಳ ಸಂತತಿ ಹೆಚ್ಚಾಗಿರುವ ಹಿನ್ನೆಲೆ ಅವುಗಳ ನಿಖರ ಮಾಹಿತಿಗಾಗಿ ಮೊದಲ ಬಾರಿಗೆ ನಡೆದ ಎರಡು ದಿನಗಳ ಪಕ್ಷಿ ಗಣತಿ ಭಾನುವಾರ ಸಂಜೆ ಅಂತ್ಯಗೊಂಡಿದೆ.

ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಸೇರಿದಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 7 ಅರಣ್ಯ ವಲಯಗಳ ಒಟ್ಟು 949.469 ಚದರ್​ ಕಿಲೋ ಮೀಟರ್​ ನಷ್ಟು ಅರಣ್ಯ ಪ್ರದೇಶದಲ್ಲಿ ನಡೆದ ಪಕ್ಷಿ ಗಣತಿಯಲ್ಲಿ 500ಕ್ಕೂ ಅಧಿಕ ಮಂದಿ ಪಕ್ಷಿ ವೀಕ್ಷಕರು ಹಾಗೂ ಪಕ್ಷಿ ತಜ್ಞರು ಭಾಗಿಯಾಗಿದ್ದರು.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ (Karnataka Forest Department)

ಪಕ್ಷಿ ಗಣತಿ ಕಾರ್ಯ ಪೂರ್ಣಗೊಂಡಿದ್ದು, 253 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ. ರಣಹದ್ದುಗಳು, ಮರಕುಟಿಕ, ನೀಲಗಿರಿ ಪಾರಿವಾಳಗಳು ಕಂಡುಬಂದಿವೆ.

Bird-census
ಪಕ್ಷಿ ಗಣತಿಯ ವೇಳೆ ಕ್ಯಾಮರಾದಿಂದ ಫೋಟೋ ತೆಗೆಯುತ್ತಿರುವುದು (ETV Bharat)

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅರೆಹರಿದ್ವರ್ಣ, ಶುಷ್ಕ ಅರಣ್ಯ, ಒಣಶುಷ್ಕ ಅರಣ್ಯ, ಕುರುಚಲು ಕಾಡುಗಳನ್ನು ಕಾಣಬಹುದಾಗಿದೆ.

Bird-census
ಪಕ್ಷಿ ಗಣತಿಯಲ್ಲಿ ಭಾಗವಹಿಸಿದ ಸ್ವಯಂ ಸೇವಕರು (ETV Bharat)

ತೇಗ, ಬೀಟೆ, ಹೊನ್ನೆ, ಶ್ರೀಗಂಧ, ಕಾಡು ಬೇವು, ಅಲಪ್ಪಿ, ಎತ್ತಿಗೆ, ದಿಂಡಿಗ ಸೇರಿದಂತೆ ಇನ್ನೂ ಮುಂತಾದ ಬೆಲೆ ಬಾಳುವ ಮರ ಮುಟ್ಟುಗಳನ್ನು ಹೇರಳವಾಗಿ ಇಲ್ಲಿ ನೋಡಬಹುದು. ಪ್ರಮುಖವಾಗಿ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕಾಡು ಹಂದಿ, ಕರಡಿ, ನರಿ, ಸೀಳು ನಾಯಿ ಇತ್ಯಾದಿ ವನ್ಯಜೀವಿಗಳು ಸಹ ಇಲ್ಲಿವೆ. ಈ ವೈವಿಧ್ಯಮಯ ಅರಣ್ಯ ಪ್ರದೇಶದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಮೊದಲ ಬಾರಿಗೆ ಇಲ್ಲಿ ಪಕ್ಷಿ ಗಣತಿ ನಡೆದಿದೆ‌ ವರದಿಯಾಗಿದೆ.

Bird-census
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ (ETV Bharat)

'ಎರಡು ದಿನಗಳ‌ ಕಾಲ 500ಕ್ಕೂ ಅಧಿಕ ಸ್ವಯಂ ಸೇವಕರು ದಟ್ಟಾರಣ್ಯಗಳಲ್ಲಿ ಅಲೆದಾಡಿ ಪಕ್ಷಿಗಳನ್ನು ನಿಖರವಾಗಿ ಗುರುತಿಸಿ ದಾಖಲಿಸಿದ್ದಾರೆ' ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

Bird-census
ಪಕ್ಷಿ ಗಣತಿಯಲ್ಲಿರುವ ಪಕ್ಷಿ ತಜ್ಞರು (ETV Bharat)

ಇದನ್ನೂ ಓದಿ : ಅಪರೂಪದ ರಡ್ಡಿ ಶೆಲ್ಡಕ್, ಬಾರ್ ಹೆಡೆಡ್​ ಗೂಸ್ ಪಕ್ಷಿಗಳ ಸಂರಕ್ಷಣೆಗೆ ಪಣ ತೊಟ್ಟ ಸ್ವಯಂಸೇವಾ ಗುಂಪು: ಇವುಗಳ ಮಹತ್ವವೇನು ಗೊತ್ತಾ? - BIRD CONSERVATION IN LADAKH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.