NVIDIA OVERTAKES APPLE:ಎನ್ವಿಡಿಯಾ ಆಪಲ್ ಹಿಂದಿಕ್ಕಿ ಮುಂದೆ ಸಾಗುತ್ತಿದೆ. ಎನ್ವಿಡಿಯಾದ ಷೇರು ಮಾರುಕಟ್ಟೆ ಮೌಲ್ಯವು $3.53 ಟ್ರಿಲಿಯನ್‌ಗೆ ತಲುಪಿದೆ. ಇದು ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ತಂತ್ರಜ್ಞಾನ ಕಂಪನಿಗಳನ್ನು ಮೀರಿಸಿದೆ. ಆಪಲ್ ಷೇರು ಪ್ರಸ್ತುತ $3.52 ಟ್ರಿಲಿಯನ್ ಮತ್ತು ಮೈಕ್ರೋಸಾಫ್ಟ್ನ ಮಾರುಕಟ್ಟೆ ಪಾಲು $3.20 ಟ್ರಿಲಿಯನ್ ಆಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಮೂರು ಕಂಪನಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಜೂನ್‌ನಲ್ಲಿಯೂ ಎನ್ವಿಡಿಯಾ ಕೆಲವು ದಿನಗಳವರೆಗೆ ತನ್ನ ಫೇಮ್ ಕ್ರಿಯೆಟ್ ಮಾಡಿತ್ತು. ಈಗ ಮತ್ತೊಮ್ಮೆ ಎನ್ವಿಡಿಯಾ ಆಪಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳನ್ನು ಹಿಂದಿಕ್ಕಿದೆ.
ಹೆಚ್ಚುತ್ತಿದೆ AI ಚಿಪ್‌ಗಳ ಬೇಡಿಕೆ:LSEG ಡೇಟಾ ಪ್ರಕಾರ, ಹೊಸ ಸೂಪರ್‌ಕಂಪ್ಯೂಟಿಂಗ್ AI ಚಿಪ್‌ಗಳಿಗೆ ಹೆಚ್ಚಿನ ಬೇಡಿಕೆಯಿಂದಾಗಿ ಕಂಪನಿಯ ಷೇರುಗಳು ಬಲವಾದ ಏರಿಕೆಯನ್ನು ಕಾಣುತ್ತಿವೆ. ಇದು ಅದರ ಮೌಲ್ಯಮಾಪನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎನ್ವಿಡಿಯಾದ ಷೇರುಗಳು ಈ ತಿಂಗಳು ಅಕ್ಟೋಬರ್‌ನಲ್ಲಿ ಶೇಕಡ 18ರಷ್ಟು ಅಧಿಕ ಗಳಿಸಿವೆ. ಕೆಲವು ದಿನಗಳ ಹಿಂದೆ, ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ಕೂಡ ನಿಧಿಯನ್ನು ಘೋಷಿಸಿತು. ಇದು ಕಂಪನಿಯ ಮೌಲ್ಯಮಾಪನದ ಮೇಲೂ ಪರಿಣಾಮ ಬೀರಿತು. ಎನ್ವಿಡಿಯಾ GPT 4 ಅನ್ನು ಟ್ರೈನಿಂಗ್ ಮಾಡಲು ಚಿಪ್ ಅನ್ನು ನಿರ್ಮಿಸುತ್ತಿದೆ. ಇದು OpenAI ನ ಅತ್ಯಂತ ಸುಧಾರಿತ ಅಡಿಪಾಯ ಮಾದರಿ ಆಗಿದೆ.