Ola S1 Pro Sona Edition: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನ ಸೀಮಿತ ಆವೃತ್ತಿ ಬಿಡುಗಡೆ ಮಾಡಿದೆ. ಈ ಸೀಮಿತ ಆವೃತ್ತಿಯ ರೂಪಾಂತರಕ್ಕೆ 'ಸೋನಾ' ಎಂದು ನಾಮಕರಣ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹಲವು ಭಾಗಗಳನ್ನು 24 ಕ್ಯಾರೆಟ್ ಚಿನ್ನದ ಅಂಶಗಳಿಂದ ಮಾಡಲಾಗಿದೆ. ಓಲಾ ಎಸ್1 ಪ್ರೊ ಸೋನಾದ ಸೀಮಿತ ಯುನಿಟ್ಗಳನ್ನು ಎಷ್ಟು ಉತ್ಪಾದಿಸಲಾಗುತ್ತದೆ ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ. ಇನ್ನು ಈ ಹೊಸ ಸೋನಾ ಎಡಿಷನ್ಗೆ ಓಲಾ ಕಂಪನಿ ಸ್ಪರ್ಧೆಯೊಂದನ್ನು ಕೂಡಾ ನಡೆಸುತ್ತಿದೆ.
ಸ್ಕ್ರಾಚ್ ಮತ್ತು ವಿನ್ ಸ್ಪರ್ಧೆಯ ಮೂಲಕ ಸ್ಕೂಟರ್ ಗೆಲ್ಲುವ ಅವಕಾಶ: ಹೌದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು, ಭಾಗವಹಿಸುವವರು Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಇನ್ಸ್ಟಾಗ್ರಾಮ್ ರೀಲ್ ಪೋಸ್ಟ್ ಮಾಡಬೇಕು ಅಥವಾ Ola ಸ್ಟೋರ್‌ನ ಹೊರಗೆ ಫೋಟೋ ಅಥವಾ ಸೆಲ್ಫಿ ಕ್ಲಿಕ್ ಮಾಡಬೇಕು. ಬಳಿಕ ನೀವು ತೆಗೆದುಕೊಂಡ ಫೋಟೋಗಳಾಗಲಿ ಅಥವಾ ವಿಡಿಯೋಗಳಾಗಲಿ #OlaSonaContest ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ Ola Electric ಟ್ಯಾಗ್ ಮಾಡಬೇಕು. ಇದರ ನಂತರ ಭಾಗವಹಿಸುವವರು ಸ್ಕ್ರಾಚ್ ಮತ್ತು ವಿನ್ ಸ್ಪರ್ಧೆಯ ಮೂಲಕ ಸೀಮಿತ ಆವೃತ್ತಿಯ ಸ್ಕೂಟರ್ ವೊಂದನ್ನು ಗೆಲ್ಲಬಹುದು. ಈ ಸ್ಪರ್ಧೆಯು ಡಿಸೆಂಬರ್ 25 ರಂದು ಅಂದ್ರೆ ಇಂದಿನಿಂದ ಓಲಾ ಸ್ಟೋರ್‌ಗಳಲ್ಲಿ ನಡೆಯಲಿದೆ.
Ola S1 Pro Sona ಅನ್ನು ಸ್ಪೇಷಲ್ ಕಲರ್ನಲ್ಲಿ ಪರಿಚಯಿಸಲಾಗಿದೆ. ಇದು ಪರ್ಲ್ ವೈಟ್ ಮತ್ತು ಗೋಲ್ಡ್ ಮಿಶ್ರಣವಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹಿಂಭಾಗದ ಫುಟ್‌ಪೆಗ್, ಗ್ರಾಬ್ ರೈಲ್, ಬ್ರೇಕ್ ಲಿವರ್ ಮತ್ತು ಮಿರರ್ ಸ್ಟಾಕ್‌ನಂತಹ ಅನೇಕ ಯುನಿಟ್ಗಳನ್ನು 24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ.
ಏನೇನೆಲ್ಲ ವಿಶೇಷತೆಗಳಿವೆ ಗೊತ್ತಾ?: ಈ ಸ್ಕೂಟರ್‌ನ ಸೀಟನ್ನು ಡಾರ್ಕ್ ಬೀಜ್ ಬಣ್ಣದ ನಪ್ಪಾ ಲೆದರ್‌ನಿಂದ ಅಲಂಕರಿಸಲಾಗಿದ್ದು, ಅದರ ಮೇಲೆ ಚಿನ್ನದ ಹೊಲಿಗೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಓಲಾ ಅಪ್ಲಿಕೇಶನ್‌ಗಾಗಿ ಗೋಲ್ಡ್ ಥೀಮ್ ಯೂಜರ್ ಇಂಟರ್ಫೇಸ್, ಎಡಿಷನ್ ಸ್ಪೆಸಿಫಿಕ್ 'ಸೋನಾ' ಮೋಡ್ ಮತ್ತು ಕಸ್ಟಮೈಸ್ ಮಾಡಿದ MoveOS ಡ್ಯಾಶ್‌ಬೋರ್ಡ್‌ನೊಂದಿಗೆ MoveOS ನ ಸ್ವಲ್ಪ ಮಾರ್ಪಡಿಸಿದ ಆವೃತ್ತಿಯನ್ನು ಸ್ಕೂಟರ್ ಒಳಗೊಂಡಿದೆ.
ಓಲಾ ಎಲೆಕ್ಟ್ರಿಕ್ ತನ್ನ 4000ನೇ ಮಳಿಗೆಯನ್ನು ಇಂದು ತೆರೆಯಲಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಸೇವೆ ಮತ್ತು ಉತ್ಪನ್ನದ ಗುಣಮಟ್ಟ-ಸಂಬಂಧಿತ ಸಮಸ್ಯೆಗಳ ಪರಿಶೀಲನೆಗೆ ಒಳಗಾದ ನಂತರ CCPA ಯಿಂದ ಸ್ವೀಕರಿಸಿದ 10,664 ದೂರುಗಳಲ್ಲಿ 99.1 ಪ್ರತಿಶತವನ್ನು ಗ್ರಾಹಕರ ಸಂಪೂರ್ಣ ತೃಪ್ತಿಗೆ ಪರಿಹರಿಸಲಾಗಿದೆ ಎಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ಇತ್ತೀಚೆಗೆ ಹೇಳಿದ್ದಾರೆ. ಡಿಸೆಂಬರ್ 2024 ರ ವೇಳೆಗೆ ತನ್ನ ಸೇವಾ ಜಾಲವನ್ನು 1,000 ಕೇಂದ್ರಗಳಿಗೆ ದ್ವಿಗುಣಗೊಳಿಸುವುದಾಗಿ ಕಂಪನಿಯು ಈ ವರ್ಷದ ಆರಂಭದಲ್ಲಿ ಹೇಳಿತ್ತು.
ಓದಿ: ಆ ದೇಶದಲ್ಲಿ ಮೊಬೈಲ್ ಆಮದುಗಳ ಮೇಲೆ ಬಿದ್ದ ಕೆಟ್ಟ ಪರಿಣಾಮ: ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು!