Top Affordable Cars in India: ಪ್ರತಿಯೊಬ್ಬರೂ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಕಾರು ಪಡೆಯಲು ಬಯಸುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ನಿಮಗಾಗಿ ಇಂತಹ ಹಲವು ಆಯ್ಕೆಗಳು ಲಭ್ಯವಿವೆ. ಆದರೆ, ನಿಮಗೆ ಯಾವುದು ಉತ್ತಮ ಆಯ್ಕೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲಿ ನಾವು ನಿಮಗೆ ಅಂತಹ ಕಾರುಗಳ ಬಗ್ಗೆ ಹೇಳಲಿದ್ದೇವೆ. ಅವುಗಳ ಬೆಲೆ ಕೇವಲ 5 ಲಕ್ಷ ರೂ. ಆಗಿದೆ. ದೇಶದ ಅತ್ಯಂತ ಅಗ್ಗದ ಕಾರುಗಳ ಒಂದು ಲುಕ್ ನಿಮಗಾಗಿ ಇಲ್ಲಿದೆ..
Maruti Suzuki Alto K10: ಮಾರುತಿ ಸುಜುಕಿ ಆಲ್ಟೊ ಕೆ10 ಖರೀದಿದಾರರಿಗೆ ಒಂದು ಉತ್ತಮ ಕಾರ್ ಆಗಿದೆ. ದೇಶದಲ್ಲಿ ಇದು ಹೆಚ್ಚು ಮಾರಾಟವಾಗುವ ಕಾರಾಗಿದೆ. ಕಂಪನಿಯ ಆಲ್ಟೊ ಕೆ10 1-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 67PS ಪವರ್ ಮತ್ತು 89Nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ ಫೈವ್-ಸ್ಪೀಡ್ AMT ಟ್ರಾನ್ಸ್ಮಿಷನ್ ಆಯ್ಕೆ ಹೊಂದಿದೆ. ಇದರೊಂದಿಗೆ ಆಲ್ಟೊ ಕೆ10 ಸಿಎನ್‌ಜಿ ಆವೃತ್ತಿಯಲ್ಲಿಯೂ ಲಭ್ಯವಿದೆ. ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಈ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂ. ಆಗಿದೆ.
Maruti Suzuki Celerio: ಮಾರುತಿ ಸುಜುಕಿ ಸೆಲೆರಿಯೊ ಸಹ ಅಗ್ಗದ ಕಾರುಗಳಲ್ಲಿ ಉತ್ತಮ ಆಯ್ಕೆಯಾಗಿದೆ. ಸೆಲೆರಿಯೊ 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಗರಿಷ್ಠ 67bhp ಪವರ್ ಮತ್ತು 89nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸೆಲೆರಿಯೊ ಆರಂಭಿಕ ಬೆಲೆ 5 ಲಕ್ಷ 36 ಸಾವಿರ ರೂ. ಆಗಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 4 ರೂಪಾಂತರಗಳಲ್ಲಿ ಲಭ್ಯವಿದೆ.
Tata Tiago: ಟಾಟಾ ಟಿಯಾಗೊ ಸಹ ನಿಮ್ಮ ಬಜೆಟ್ ವಿಭಾಗದಲ್ಲಿ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಟಾಟಾ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಗರಿಷ್ಠ 86bhp ಪವರ್ ಮತ್ತು 113nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟಿಯಾಗೊನಲ್ಲಿ ನೀವು CNG ಪವರ್‌ಟ್ರೇನ್ ಆಯ್ಕೆಯನ್ನು ಸಹ ಪಡೆಯುತ್ತೀರಿ. ಭಾರತೀಯ ಮಾರುಕಟ್ಟೆಯಲ್ಲಿ ನೀವು ಟಾಟಾ ಟಿಯಾಗೊವನ್ನು ರೂ.4 ಲಕ್ಷದ 99 ಸಾವಿರದ ಆರಂಭಿಕ ಬೆಲೆಯಲ್ಲಿ ಪಡೆಯುತ್ತೀರಿ.
Maruti Suzuki S-Presso: ನಿಮ್ಮ ಬಜೆಟ್‌ಗೆ ಸರಿಹೊಂದುವ ಕಾರು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಹ ಒಂದು. ಈ ಕಾರು ಕಂಪನಿಯ ಕೈಗೆಟುಕುವ ಕಾರು ಆಗಿದ್ದು, ಇದರ ಎಕ್ಸ್ ಶೋ ರೂಂ ಬೆಲೆ 4.26 ಲಕ್ಷದಿಂದ ಪ್ರಾರಂಭವಾಗುತ್ತದೆ. ಆಲ್ಟೊ ಕೆ10 ಎಂಜಿನ್ ಎಸ್-ಪ್ರೆಸ್ಸೊದಲ್ಲಿ ಲಭ್ಯವಿದೆ. ಈ ಕಾರಿನ ಮೂಲ ರೂಪಾಂತರವು 5 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬರುತ್ತದೆ. S Presso 1-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 68PS ಪವರ್ ಮತ್ತು 90Nm ಟಾರ್ಕ್ ಉತ್ಪಾದಿಸುತ್ತದೆ.
ಓದಿ: Watch... ಬಾಹ್ಯಾಕಾಶದಲ್ಲೇ ಕ್ರಿಸ್ಮಸ್ ಖುಷಿ: ಸುನಿತಾ ವಿಲಿಯಮ್ಸ್ ಫುಲ್ ಬಿಂದಾಸ್ ಹಬ್ಬದ ಆಚರಣೆ