JIO iActivate Service: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಶ್ರೇಣಿಯ ಸೇವೆಗಳನ್ನು ಪ್ರಾರಂಭಿಸಿದೆ. ನೀವು SIM ಆ್ಯಕ್ಟಿವೇಷನ್ಗಾಗಿ Jio ಕಾರ್ಯನಿರ್ವಾಹಕರ ಬಳಿಗೆ ಹೋಗುವ ಅಗತ್ಯವಿಲ್ಲ. ಇದಕ್ಕಾಗಿ Jio iActivate ಸೇವೆ ಪ್ರಾರಂಭಿಸಿದೆ. ಇದರೊಂದಿಗೆ, ಜಿಯೋ ಸಿಮ್ ಕಾರ್ಡ್ ಅನ್ನು ಎಲ್ಲಿಯೇ ಆದರೂ, ಯಾವುದೇ ಸಮಯದಲ್ಲೂ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. iActivate ಸೇವೆಗಳೊಂದಿಗೆ ಸಿಮ್ ಸಕ್ರಿಯಗೊಳಿಸುವ ಪ್ರಕ್ರಿಯೆ ಹೀಗಿದೆ.
iActivate ಸೇವೆಗಳನ್ನು ಹೀಗೆ ಬಳಸಿ:
- ರಿಲಯನ್ಸ್ ಜಿಯೋ ಈಗಾಗಲೇ ಸಿಮ್ ಕಾರ್ಡ್‌ಗಳ ಉಚಿತ ಹೋಮ್ ಡೆಲಿವರಿ ಪ್ರಾರಂಭಿಸಿದೆ.
- ಹೊಸದಾಗಿ ಪರಿಚಯಿಸಲಾದ iActivateನೊಂದಿಗೆ, ನಿಮ್ಮ ಸಿಮ್ ಅನ್ನು ನೀವು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಸಕ್ರಿಯಗೊಳಿಸಬಹುದು.
- ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಹಾಯದಿಂದ ಸಿಮ್ ಕಾರ್ಡ್ ಸಕ್ರಿಯಗೊಳಿಸಬಹುದು.
- ಇದಕ್ಕಾಗಿ ಮೊದಲು ನೀವು My Jio Application ಇನ್ಸ್ಟಾಲ್ ಮಾಡಿಕೊಳ್ಳಬೇಕು.
- ಅಪ್ಲಿಕೇಶನ್ ತೆರೆದ ಬಳಿಕ iActivate ಬ್ಯಾನರ್ ಕಾಣಿಸಿಕೊಳ್ಳುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಹೆಸರು, ಫೋನ್ ಸಂಖ್ಯೆ, ಪಿನ್ ಕೋಡ್ ನಮೂದಿಸಿ OTP ಜನರೇಟ್ ಮಾಡಬೇಕು.
- OTP ನಮೂದಿಸಿದ ನಂತರ eSIM ಮತ್ತು Physical SIM ಎಂಬೆರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
- ನಿಮಗೆ ಬೇಕಾದ ಆಯ್ಕೆಯನ್ನು ಆರಿಸಿ ಮತ್ತು ಗೋ ಫಾರ್ ಜಿಯೋ ಐಆಕ್ಟಿವೇಟ್ ಮೇಲೆ ಕ್ಲಿಕ್ ಮಾಡಿ.
- KYC ಅನ್ನು ಆಧಾರ್ OTPಅಥವಾ ಡಿಜಿಲಾಕರ್ ಸಹಾಯದಿಂದ ಪೂರ್ಣಗೊಳಿಸಬೇಕು. ಹೀಗೆ ಮನೆಗೆ ಬಂದ ಸಿಮ್ ಮೊಬೈಲ್ ಸಹಾಯದಿಂದ ಲೈವ್ ಫೋಟೋ/ವಿಡಿಯೋ ತೆಗೆದು ದಾಖಲೆಗಳನ್ನು ಲೈವ್ ಅಪ್ ಲೋಡ್ ಮಾಡಬೇಕು.
- ಈ ರೀತಿಯಾಗಿ ನೀವು ಈ iActivate ಸೇವೆಗಳನ್ನು ಬಳಸಿಕೊಂಡು SIM ಕಾರ್ಡ್ ಅನ್ನು ಮನೆಯಲ್ಲೇ ಕುಳಿತು ಸಕ್ರಿಯಗೊಳಿಸಬಹುದು ಅಥವಾ ವಿತರಣಾ ಏಜೆಂಟ್‌ಗಳ ಸಹಾಯದಿಂದ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.