ಮುಂಬೈ : ಮೆಟಾ ಬುಧವಾರ ಭಾರತದಲ್ಲಿ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ಗಳಲ್ಲಿ ವ್ಯವಹಾರಿಕ ಸಂಸ್ಥೆಗಳಿಗಾಗಿ ವೆರಿಫೈಡ್ ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಪರಿಚಯಿಸಿದೆ. ವೆರಿಫೈಡ್ ಸಬ್ಸ್ಕ್ರಿಪ್ಷನ್ ಯೋಜನೆಯು ವ್ಯವಹಾರಿಕ ಸಂಸ್ಥೆಗಳಿಗೆ ವೆರಿಫೈಡ್ ಬ್ಯಾಡ್ಜ್, ಹೆಚ್ಚುವರಿ ಅಕೌಂಟ್ ಸಪೋರ್ಟ್, ಪ್ರೊಫೈಲ್ನ ನಕಲು ಆಗುವುದರಿಂದ ರಕ್ಷಣೆ ಮತ್ತು ಅನ್ವೇಷಣೆ ಮತ್ತು ಸಂಪರ್ಕವನ್ನು ಬೆಂಬಲಿಸಲು ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.
ಈ ಯೋಜನೆಯು ತಿಂಗಳಿಗೆ ಒಂದು ಅಪ್ಲಿಕೇಶನ್ಗೆ 639 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ 21,000 ರೂ.ಗಳವರೆಗೆ ಇದರ ಚಂದಾದಾರಿಕೆ ದರವಿದೆ. ಈ ಯೋಜನೆಯು ತಿಂಗಳಿಗೆ ಎರಡು ಅಪ್ಲಿಕೇಶನ್ಗಳಿಗೆ ಆರಂಭಿಕ ರಿಯಾಯಿತಿ ದರವಾಗಿದೆ ಎಂದು ಕಂಪನಿ ತಿಳಿಸಿದೆ.
ವ್ಯವಹಾರಿಕ ಸಂಸ್ಥೆಗಳು ತಮ್ಮ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡಲು ಸಾಧ್ಯವಾಗುವಂತೆ ನಾಲ್ಕು ಚಂದಾದಾರಿಕೆ ಯೋಜನೆಗಳನ್ನು ಮೆಟಾ ವೆರಿಫೈಡ್ ಜಾರಿಗೊಳಿಸಿದೆ.
ಭಾರತದಲ್ಲಿ ಚಂದಾದಾರಿಕೆ ಯೋಜನೆಗಳು ಪ್ರಸ್ತುತ ಸಮಯದಲ್ಲಿ ಫೇಸ್ ಬುಕ್, ಇನ್ಸ್ಟಾಗ್ರಾಮ್ ಅಥವಾ ವಾಟ್ಸ್ಆ್ಯಪ್ನಲ್ಲಿ ಬಿಸಿನೆಸ್ ಅಕೌಂಟ್ ಎಂದು ದಾಖಲಿಸಿಕೊಂಡ ಅಕೌಂಟ್ಗಳಿಗೆ ಮಾತ್ರ ಐಒಎಸ್ ಅಥವಾ ಆಂಡ್ರಾಯ್ಡ್ ಮೂಲಕ ಮಾತ್ರ ಖರೀದಿಗೆ ಲಭ್ಯವಿವೆ. ವ್ಯವಹಾರಿಕ ಸಂಸ್ಥೆಗಳು ಮೆಟಾ ವೆರಿಫೈಡ್ ಅನ್ನು ಫೇಸ್ಬುಕ್ಗಾಇ ಅಥವಾ ಇನ್ಸ್ಟಾಗ್ರಾಮ್ಗಾಗಿ ಅಥವಾ ವಾಟ್ಸ್ಆ್ಯಪ್ಗಾಗಿ ಪ್ರತ್ಯೇಕವಾಗಿ ಖರೀದಿಸಬಹುದು ಅಥವಾ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಜೋಡಿಯಾಗಿ ಬಂಡಲ್ ಆಫರ್ನಲ್ಲಿಯೂ ಖರೀದಿಸಬಹುದು ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ಗಾಗಿ ಈಗ ವಿಸ್ತರಿಸಲಾದ ಮೆಟಾ ವೆರಿಫೈಡ್ ವ್ಯವಹಾರ ಕೊಡುಗೆಯು ಸಾಮಾನ್ಯವಾಗಿ "ಬ್ಲೂ ಟಿಕ್" ಎಂದು ಕರೆಯಲ್ಪಡುವ ವೆರಿಫೈಡ್ ಬ್ಯಾಡ್ಜ್ ಅನ್ನು ಒಳಗೊಂಡಿರುತ್ತದೆ ಎಂದು ಮೆಟಾ ಹೇಳಿದೆ. ಎಲ್ಲಾ ಯೋಜನೆಗಳು ಮೇಲೆ ತಿಳಿಸಿದ ವೈಶಿಷ್ಟ್ಯಗಳನ್ನು ನೀಡುವ ಟೂಲ್ ಕಿಟ್ ಅನ್ನು ಒಳಗೊಂಡಿರುತ್ತವೆ ಮತ್ತು ಪ್ರತಿ ಯೋಜನೆಯು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ.
ಮೆಟಾ ಈಗ ತನ್ನ ಎಲ್ಲಾ ಅಪ್ಲಿಕೇಶನ್ಗಳಲ್ಲಿ ಒಟ್ಟಾರೆಯಾಗಿ ಸರಾಸರಿ 3.24 ಬಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು (ಡಿಎಪಿ) ಹೊಂದಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 7 ರಷ್ಟು ಹೆಚ್ಚಾಗಿದೆ. ಇನ್ಸ್ಟಾಗ್ರಾಮ್ ಥ್ರೆಡ್ಸ್ ಫೆಬ್ರವರಿಯಲ್ಲಿ 130 ಮಿಲಿಯನ್ ನಿಂದ 150 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪಿದೆ. ಮೆಟಾ ಈಗ 69,329 ಉದ್ಯೋಗಿಗಳನ್ನು ಹೊಂದಿದೆ (ಮಾರ್ಚ್ 31 ರ ಹೊತ್ತಿಗೆ). ಇದು ವರ್ಷದಿಂದ ವರ್ಷಕ್ಕೆ ಶೇಕಡಾ 10 ರಷ್ಟು ಕಡಿಮೆಯಾಗಿದೆ. ಮೆಟಾದ ಒಟ್ಟು ಆದಾಯವು ಮೊದಲ ತ್ರೈಮಾಸಿಕದಲ್ಲಿ 36.5 ಬಿಲಿಯನ್ ಡಾಲರ್ ಆಗಿದೆ.
ಇದನ್ನೂ ಓದಿ : ಗೂಗಲ್ ನೇತೃತ್ವದಲ್ಲಿ 92 ಕೋಟಿ ರೂ. ಫಂಡಿಂಗ್ ಸಂಗ್ರಹಿಸಿದ ದೇಶೀಯ ಆ್ಯಪ್ 'ನಮ್ಮ ಯಾತ್ರಿ' - Namma Yatri