ETV Bharat / state

ವೃತ್ತಿಯಲ್ಲಿ ಬೆಳ್ಳುಳ್ಳಿ ವ್ಯಾಪಾರ, ಪ್ರವೃತ್ತಿಯಲ್ಲಿ ಕಳ್ಳತನ; ಪೊಲೀಸರಿಗೆ ಸಿಕ್ಕಿಬಿದ್ದ ಅಂತರಜಿಲ್ಲಾ ಚಾಲಾಕಿ - GANGAVATI CRIME

ವೃತ್ತಿಯಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ ಚಾಲಾಕಿಯೋರ್ವ, ಪ್ರವೃತ್ತಿಯಲ್ಲಿ ಕುಖ್ಯಾತ ಕಳ್ಳನಾಗಿದ್ದ. ಅಂತರ ಜಿಲ್ಲಾ ಪೊಲೀಸರಿಗೆ ಬೇಕಾಗಿದ್ದ ಈತನನ್ನು ಗಂಗಾವತಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.

Police arrest accused
ಆರೋಪಿ ಬಂಧನ (ETV Bharat)
author img

By ETV Bharat Karnataka Team

Published : Feb 9, 2025, 9:17 PM IST

ಗಂಗಾವತಿ (ಕೊಪ್ಪಳ) : ವೃತ್ತಿಯಲ್ಲಿ ಬೆಳ್ಳುಳ್ಳಿ ವ್ಯಾಪಾರಿಯಾಗಿದ್ದ ವ್ಯಕ್ತಿ, ಪ್ರವೃತ್ತಿಯಲ್ಲಿ ಕುಖ್ಯಾತ ಕಳ್ಳನಾಗಿದ್ದ. ಅಂತರ ಜಿಲ್ಲಾ ಪೊಲೀಸರಿಗೆ ಬೇಕಾಗಿದ್ದ ಆರೋಪಿಯನ್ನು ಗಂಗಾವತಿ ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕನಕಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಭಜಂತ್ರಿ ಓಣಿಯ ನಿವಾಸಿ ಹನುಮೇಶ ಭಜಂತ್ರಿ ಬಸಪ್ಪ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಬೆಳ್ಳುಳ್ಳಿ ವ್ಯಾಪಾರ ಮಾಡಿಕೊಂಡಿದ್ದ. ಆದರೆ ಗಂಗಾವತಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು, ಬದಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮತ್ತು ಹಾವೇರಿ ಜಿಲ್ಲೆಯ ಸವಣೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಕೇಸ್​ ಸೇರಿ ಒಟ್ಟು ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಈ ವ್ಯಕ್ತಿ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಆರೋಪಿ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು, ಕನಕಗಿರಿಯಲ್ಲಿರುವುದನ್ನು ದೃಢಪಡಿಸಿಕೊಂಡು ದಾಳಿ ಮಾಡಿ ಬಂಧಿಸಿದ್ದಾರೆ. ಈತನಿಂದ 101 ಗ್ರಾಮ ತೂಕದ ಬಂಗಾರದ ಆಭರಣ, ಅಂದಾಜು ಮೌಲ್ಯ 8.79 ಲಕ್ಷ ಹಾಗೂ ನಗದು 30 ಸಾವಿರ ನಗದು ಸೇರಿದಂತೆ ಒಟ್ಟು 9.10 ಲಕ್ಷ ಮೌಲ್ಯದ ನಗ ನಾಣ್ಯ ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ;ಧಾರವಾಡ ವೈದ್ಯನ ಮನೆ ಕಳ್ಳತನ ಪ್ರಕರಣ; ಮೂವರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.