Vivo V50 To Launch In India: ಕೊನೆಗೂ ವಿವೋ ತನ್ನ ಮುಂಬರುವ ಹೊಸ ಸ್ಮಾರ್ಟ್‌ಫೋನ್ ಸ್ವದೇಶಿ ಮಾರುಕಟ್ಟೆಗೆ ಪರಿಚಯಿಸುವ ದಿನಾಂಕವನ್ನು ಪ್ರಕಟಿಸಿದೆ. ಹೌದು, ಕಂಪನಿ ವಿವೋ ವಿ50 ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಇದರ ಬಿಡುಗಡೆ ದಿನಾಂಕ ಮತ್ತು ಫೀಚರ್ಸ್ ಜೊತೆ ಇತರೆ ಮಾಹಿತಿ ಇಲ್ಲಿದೆ.
ಈ ವಿವೋ ಸ್ಮಾರ್ಟ್‌ಫೋನ್ ಕುರಿತು ಕಳೆದ ಕೆಲವು ದಿನಗಳಿಂದ ಹಲವು ವರದಿಗಳು ಹೊರಬರುತ್ತಲೇ ಇವೆ. ಇವುಗಳಲ್ಲಿ ಈ ಫೋನಿನ ಸ್ಪೆಸಿಫಿಕೇಶನ್ ಕುರಿತು ಹಲವು ರೀತಿಯ ಊಹಾಪೋಹಗಳು ಕೇಳಿಬರುತ್ತಿವೆ. ವಿವೋ ಕಂಪನಿಯ ಈ ಫೋನ್ ಕಳೆದ ವರ್ಷ ಬಿಡುಗಡೆ ಮಾಡಿದ ವಿವೋ ವಿ40 ಸ್ಮಾರ್ಟ್‌ಫೋನ್‌ನ ಮುಂದುವರಿದ ಭಾಗವಾಗಿದೆ.
The countdown begins! ⏳ The vivo V50, with stunning design and pro-level portrait photography, launches on February 17. Stay tuned!#vivoV50 #ZEISSPortraitSoPro pic.twitter.com/ha99ENmw8V
— vivo India (@Vivo_India) February 7, 2025
ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿರುವ ವಿವೋ ವಿ50 :
- ವಿವೋ ಕಂಪನಿಯು ಫೆಬ್ರವರಿ 17 ರಂದು ಭಾರತದಲ್ಲಿ V50 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ.
- ಈ ಸ್ಮಾರ್ಟ್‌ಫೋನ್ ಅದ್ಭುತ ಡಿಸೈನ್ದೊಂದಿಗೆ ಪ್ರೊ-ಲೆವೆಲ್ ಪೋರ್ಟ್ರೇಟ್ ಫೋಟೋಗ್ರಫಿ ಆಫರ್ ನೀಡುತ್ತದೆ ಎಂದು ವಿವೋ ಹೇಳಿದೆ.
- ಮಾರಾಟದ ಬಗ್ಗೆ ಹೇಳುವುದಾದರೆ ಈ ಫೋನ್ ಅನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದಾಗಿದೆ.
- ಇದರೊಂದಿಗೆ ಈ ವಿವೋ ಫೋನ್ ಫೆಬ್ರವರಿ 24 ರಿಂದ ರಿಟೇಲ್ ಶಾಪ್ಗಳಲ್ಲಿಯೂ ಮಾರಾಟ ಲಭ್ಯವಿರುತ್ತದೆ.
- ವಿವೋ ವಿ50 ಸ್ಮಾರ್ಟ್‌ಫೋನ್‌ನ ಪ್ರೊಸೆಸರ್ ಮತ್ತು ಕಾನ್ಫಿಗರೇಶನ್ ಇನ್ನೂ ಬಹಿರಂಗಗೊಂಡಿಲ್ಲ. ಈ ಎಲ್ಲಾ ವಿವರಗಳು ವಿ50 ಬಿಡುಗಡೆಯ ನಂತರ ಲಭ್ಯವಾಗಲಿವೆ.
ವಿವೋ ವಿ 50 ನ ಸಂಭಾವ್ಯ ಫೀಚರ್ಸ್ : ವಿವೋ ವಿ50 ಸ್ಮಾರ್ಟ್‌ಫೋನ್ ಬಗ್ಗೆ ಹೇಳಲಾಗುತ್ತಿದ್ದು, ಇದು ಕ್ವಾಡ್ ಕರ್ವ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಫೋನ್ ರೋಸ್ ರೆಡ್, ಟೈಟಾನಿಯಂ ಗ್ರೇ ಮತ್ತು ಸ್ಟಾರಿ ಬ್ಲೂ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ, ಈ ವಿವೋ ಫೋನ್‌ನ ವಿನ್ಯಾಸವು ಕಳೆದ ವರ್ಷ ಬಿಡುಗಡೆಯಾದ ವಿ40 ಮಾದರಿಯಲ್ಲಿರುತ್ತದೆ. ಇದರೊಂದಿಗೆ, ಈ ಫೋನ್ IP68 ಮತ್ತು 69 ರೇಟಿಂಗ್ ಸರ್ಟಿಫಿಕೇಶನ್ ಜೊತೆ ಬರಬಹುದು.
Get ready to rule every scene, every moment with the new vivo V50. It’s sleek, powerful, and leaves a lasting impression.
— vivo India (@Vivo_India) February 6, 2025
To know more: https://t.co/kpjQzmULlr#vivoV50 #ZEISSPortraitSoPro pic.twitter.com/9r3qlvdS56
ಬ್ಯಾಟರಿಯ ಬಗ್ಗೆ ಹೇಳುವುದಾದರೆ, ಈ ಒನ್‌ಪ್ಲಸ್ ಫೋನ್‌ನಲ್ಲಿ 6000mAh ನ ಪವರ್ಫುಲ್ ಬ್ಯಾಟರಿಯನ್ನು ಒದಗಿಸಬಹುದು. ಆದರೂ ಕಂಪನಿಯು ಕಳೆದ ವರ್ಷ ಬಿಡುಗಡೆಯಾದ ವಿವೋ ವಿ 40 ಸ್ಮಾರ್ಟ್‌ಫೋನ್‌ನಲ್ಲಿ 5500mAh ಬ್ಯಾಟರಿಯನ್ನು ಒದಗಿಸಿತ್ತು. ಈ ಫೋನಿನ ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಈ ಫೋನನ್ನು ಕಂಪನಿಯ ಇತ್ತೀಚಿನ ಕಸ್ಟಮ್ ಸ್ಕಿನ್, ಆಂಡ್ರಾಯ್ಡ್ 15 ಆಧಾರಿತ ಫಂಟೌಚ್ ಓಎಸ್ 15 ನೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಈ ವಿವೋ ಫೋನ್‌ನಲ್ಲಿ ಝೈಸ್-ಬ್ರಾಂಡೆಡ್ ಡ್ಯುಯಲ್ 50MP ರಿಯರ್ ಕ್ಯಾಮರಾ ಸೆಟಪ್ ಅಳವಡಿಸಲಾಗಿದೆ. ಇದರೊಂದಿಗೆ ವಿಡಿಯೋ ಮತ್ತು ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮರಾವನ್ನು ಸಹ ಒದಗಿಸಬಹುದು. ಈ ಫೋನ್ ಅನ್ನು ಎಲ್ಲಾ ಫೋಟೋಗ್ರಫಿ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಬಹುದು. ಬೆಲೆಯ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಕಂಪನಿಯು Vivo V40 ಸ್ಮಾರ್ಟ್‌ಫೋನ್ ಅನ್ನು 34,999 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಿತು. ಕಂಪನಿಯು ತನ್ನ ಬೆಲೆಯನ್ನು ಕಡಿತಗೊಳಿಸಿ ಅದೇ ಬೆಲೆಗೆ ಹೊಸ ಫೋನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂಬ ವರದಿಗಳು ನಮ್ಮ ಸುತ್ತ ಸುತ್ತಾಡುತ್ತಿವೆ..
ಓದಿ: ನಿತ್ಯ ಮೂರೇ ರೂಪಾಯಿ ವೆಚ್ಚ: ಬಿಎಸ್ಎನ್ಎಲ್ನ ಈ ಕೈಗೆಟುಕುವ ವಾರ್ಷಿಕ ರೀಚಾರ್ಜ್ ಪ್ಲಾನ್ ಬಗ್ಗೆ ಗೊತ್ತೇ?