ETV Bharat Karnataka

ಕರ್ನಾಟಕ

karnataka

ETV Bharat / technology

ನೀವು ಮರೆತರೂ ವಾಟ್ಸಪ್​ ಮರೆಯದು; ಈ ಫೀಚರ್​ ಸಹಾಯದಿಂದ ನಿಮಗೆ ನೆನಪಿಸುತ್ತಲೇ ಇರುತ್ತದೆ - MESSAGE REMINDERS FEATURE

Message Reminders Feature: ಜನಪ್ರಿಯ ಮೆಸೇಜಿಂಗ್​ ಆ್ಯಪ್​ ಮತ್ತೊಂದು ಹೊಸ ಫೀಚರ್​ ಹೊರತರಲು ಕಾರ್ಯ ನಿರ್ವಹಿಸುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯೋಣ..

WHATSAPP NEW FEATURES  WHATSAPP REMINDER MESSAGE  WHATSAPP MESSAGE REMINDERS FEATURE  WHATSAPP NEW UPDATE
ನೀವು ಮರೆತರೂ ವಾಟ್ಸಾಪ್​ ಮರೆಯದು (IANS)
author img

By ETV Bharat Tech Team

Published : Dec 9, 2024, 10:48 AM IST

Message Reminders Feature: ವಾಟ್ಸಾಪ್​ನಲ್ಲಿ ಮತ್ತೊಂದು ಅದ್ಭುತ ಫೀಚರ್ ಬರಲಿದೆ. ಮರೆತುಹೋದ ಮೆಸೇಜ್​ಗಳನ್ನು ನೆನಪಿಸುವುದಕ್ಕೆ ಇದು ಉಪಯುಕ್ತವಾಗಿದೆ. ಇದನ್ನು ‘ಮೆಸೇಜ್​ ರಿಮೆಂಡರ್ಸ್​’ ಎಂಬ ಹೆಸರಿನಲ್ಲಿ ವಾಟ್ಸಪ್​ ಪರಿಚಯಿಸುತ್ತಿದೆ. ಆದರೆ ಈ ವೈಶಿಷ್ಟ್ಯವು ಯಾವಾಗ ಲಭ್ಯವಾಗಲಿದೆ.. ಇದು ಹೇಗೆ ಕೆಲಸ ಮಾಡುತ್ತದೆ..

ಈ ಫೀಚರ್ ಉಪಯೋಗಗಳೇನು?ಈಗಿನ ಯುಗದಲ್ಲಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸಪ್​ ಇದೆ. ತ್ವರಿತ ಸಂದೇಶಗಳು, ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ವಾಟ್ಸಪ್​ ಬಳಸುವುದು ಸಾಮಾನ್ಯ. ಇದರಿಂದಾಗಿ ವಾಟ್ಸಪ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂದೇಶಗಳು ಹರಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ಕೆಲ ಸಂದೇಶಗಳನ್ನು ಓದದೆ ಬಿಟ್ಟುಬಿಡುತ್ತೇವೆ. ಬಿಟ್ಟು ಹೋಗಿರುವ ಚಾಟ್​ಗಳನ್ನು ನೆನಪಿಸುವ ಉದ್ದೇಶದಿಂದ ವಾಟ್ಸಪ್ ಈ ಹೊಸ ಫೀಚರ್ ತರಲು ವ್ಯವಸ್ಥೆ ಮಾಡುತ್ತಿದೆ. ಈ ಬಗ್ಗೆ ಬೀಟಾ ಇನ್ಫೋ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

in article image
ವಾಟ್ಸಪ್​ ಸೆಟ್ಟಿಂಗ್ಸ್​ (Wabetainfo)

ಇದರ ಕೆಲಸವೇನು?ಮಾಹಿತಿಯ ಪ್ರಕಾರ.. ಈ ಹೊಸ ವಾಟ್ಸಪ್​ನ 'Message Reminders' ವೈಶಿಷ್ಟ್ಯವು ಕೆಲವು ನಿರ್ದಿಷ್ಟ ಸಂಪರ್ಕಗಳಿಂದ ಓದದ ಮೆಸೇಜ್​ಗಳ ಬಗ್ಗೆ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ನಾವು ಆಗಾಗ್ಗೆ ಚಾಟ್ ಮಾಡುವ ಸಂಪರ್ಕಗಳ ಪಟ್ಟಿಯನ್ನು ಆಧರಿಸಿ ಆಂತರಿಕ ಅಲ್ಗಾರಿದಮ್ ನಮಗೆ ಈ ಅಧಿಸೂಚನೆಗಳನ್ನು ಕಳುಹಿಸುತ್ತದೆ. ಮಧ್ಯದಲ್ಲಿ ಕೆಲವು ಚಾಟ್‌ಗಳಿಂದಾಗಿ ನಾವು ಯಾರೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದೇವೆಯೋ ಅವರ ಸಂಪರ್ಕಗಳಿಂದ ಬಂದ ಸಂದೇಶಗಳನ್ನು ನಾವು ಮರೆತರೆ ಈ ವೈಶಿಷ್ಟ್ಯವು ನಮಗೆ ನೆನಪಿಸುತ್ತದೆ.

ಈ 'ಮೆಸೇಜ್​ ರಿಮೆಂಡರ್ಸ್​' ವೈಶಿಷ್ಟ್ಯವನ್ನು ಅದರ ಹಿಂದಿನ ಮಾದರಿಯನ್ನು ಅಪ್​ಡೇಟ್​ ಮಾಡುವುದರಿಂದ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಈ ವೈಶಿಷ್ಟ್ಯವು ಸ್ಟೆಟಸ್​ ಅಪ್​ಡೇಟ್ಸ್​ ರಿಮೈಂಡಿಂಗ್​ ನೋಟಿಫಿಕೇಶನ್​ಗಳನ್ನು ಒದಗಿಸುತ್ತಿತ್ತು. ಆದರೆ ಇತ್ತೀಚಿನ ಚಾಟ್‌ಗಳಲ್ಲಿ ಓದದಿರುವ ಸಂದೇಶಗಳನ್ನು ಟ್ರ್ಯಾಕ್ ಮಾಡಲು ಇದು ನಿಮಗೆ ಸಹಾಯ ಮಾಡಲಿದೆ ಎಂದು ಕಂಪನಿ ಹೇಳುತ್ತಿದೆ.

ಇದು ಯಾವಾಗ ಲಭ್ಯ?ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಇದು ಈಗ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗೂ ದೊರೆಯಲಿದೆ.

ಆ್ಯಕ್ಟಿವೇಟ್​ ಮಾಡುವುದು ಹೇಗೆ?ಈ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಾದ ನಂತರ, ನೀವು ಸೆಟ್ಟಿಂಗ್ಸ್​ಗೆ ಭೇಟಿ ನೀಡಿ. ಅಲ್ಲಿ ನೋಟಿಫಿಕೇಶನ್​ ಅನ್ನು ಆಯ್ದುಕೊಳ್ಳಿ. ಆಗ ನಿಮಗೆ ರಿಮೆಂಡರ್ಸ್​ ಎಂಬ ಆಪ್ಷನ್​ ಕಾಣಿಸುತ್ತದೆ. ಅದನ್ನು ಆಕ್ಟಿವೇಟ್​ ಮಾಡಿಕೊಳ್ಳುವುದರ ಮೂಲಕ ಇದರ ಲಾಭ ಪಡೆಯುತ್ತೀರಿ.

ಓದಿ:ವಾರ್ಷಿಕ ಯೋಜನೆ: ಜಿಯೋ, ಏರ್​ಟೆಲ್​, ವೊಡಾಫೋನ್​ಗೆ ಠಕ್ಕರ್​ ನೀಡಲಿದೆಯಾ ಬಿಎಸ್​ಎನ್​ಎಲ್​?

ABOUT THE AUTHOR

...view details