Maruti Suzuki Dzire:ಸ್ಥಳೀಯ ಕಾರು ತಯಾರಕ ಮಾರುತಿ ಸುಜುಕಿ ತನ್ನ ನಾಲ್ಕನೇ ಜನರೇಶನ್ನ ಮಾರುತಿ ಡಿಸೈರ್ ಕಾಂಪ್ಯಾಕ್ಟ್ ಸೆಡಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಾರಿನ ಆರಂಭಿಕ ಬೆಲೆ 6.79 ಲಕ್ಷ ರೂ. (ಎಕ್ಸ್ ಶೋ ರೂಂ)
ಹೊಸ ತಲೆಮಾರಿನ ಮಾರುತಿ ಡಿಸೈರ್‌ಗೆ ಫುಲ್ ನ್ಯೂ ಲುಕ್ ನೀಡಲಾಗಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಆಕ್ರಮಣಕಾರಿ ಮತ್ತು ಸ್ಪೋರ್ಟಿಯಾಗಿದೆ. ಇದರ ಟಾಪ್ ಮಾಡೆಲ್‌ನ ಬೆಲೆ 10.14 ಲಕ್ಷ ರೂ (ಎಕ್ಸ್ ಶೋ ರೂಂ)ಯಿಂದ ಪ್ರಾರಂಭವಾಗುತ್ತಿದೆ.
ಮಾರುತಿ ಡಿಸೈರ್ ಸೆಡಾನ್ ಬಿಡುಗಡೆ ಕಾರ್ಯಕ್ರಮ (Maruti Suzuki) ಮಾರುತಿ ಡಿಸೈರ್ 4 ಮೀಟರ್‌ಗಿಂತಲೂ ಕಡಿಮೆ ಉದ್ದ ಹೊಂದಿದೆ. ಇದರ ಉದ್ದ 3,995 ಎಂಎಂ, ಅಗಲ 1,735 ಎಂಎಂ ಮತ್ತು ಎತ್ತರ 1,525 ಎಂಎಂ, ಇದ್ದು, 2,450 ಎಂಎಂ ವ್ಹೀಲ್‌ಬೇಸ್ ಮತ್ತು 163 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರ ಪೆಟ್ರೋಲ್ ರೂಪಾಂತರ 382 ಲೀಟರ್ಗಳಷ್ಟು ಬೂಟ್ ಸ್ಪೇಸ್ ಹೊಂದಿದ್ದರೂ, CNG ಆಯ್ಕೆ ಲಭ್ಯವಿದ್ದರೆ ಬೂಟ್ ಸ್ಪೇಸ್ ಕಡಿಮೆಯಾಗುತ್ತದೆ. ಸದ್ಯಕ್ಕೆ ಈ ಬಗ್ಗೆ ಮಾಹಿತಿ ಇಲ್ಲ.
ವಿನ್ಯಾಸ:ಒಟ್ಟು ನಾಲ್ಕು ಟ್ರಿಮ್‌ಗಳಲ್ಲಿ ಈ ಕಾರನ್ನು ಪರಿಚಯಿಸಲಾಗಿದೆ - LXI, VXI, ZXI, ಮತ್ತು ZXI+. ಇದಲ್ಲದೆ, ಗ್ಯಾಲಂಟ್ ರೆಡ್ ಮತ್ತು ಆಲೂರಿಂಗ್ ಬ್ಲೂ ಸೇರಿದಂತೆ ಒಟ್ಟು 7 ಬಣ್ಣಗಳಲ್ಲಿ ಮೂಡಿ ಬಂದಿದೆ. ಹೊಸ ತಲೆಮಾರಿನ ಮಾರುತಿ ಸ್ವಿಫ್ಟ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಭಾರತದಲ್ಲಿ ಮಾರಾಟವಾದ ಹಿಂದಿನ ಮೂರು ತಲೆಮಾರಿನ ಡಿಸೈರ್‌ಗೆ ಹೋಲಿಸಿದರೆ, ಈ ಬಾರಿ ಅದರ ವಿನ್ಯಾಸದಲ್ಲಿ ಬಹಳ ಮುಖ್ಯವಾದ ಬದಲಾವಣೆಗಳನ್ನು ಮಾಡಲಾಗಿದೆ.
ಹೊಸ ಮಾರುತಿ ಡಿಸೈರ್ ವಿನ್ಯಾಸ ಸಾಕಷ್ಟು ನಯವಾಗಿ ಕಾಣುತ್ತಿದೆ. ಹೀಗಾಗಿ ಇದು ಹೋಂಡಾ ಅಮೇಜ್ ಅನ್ನು ಹೋಲುತ್ತದೆ. ಮಾರುತಿ ಸುಜುಕಿ ತನ್ನ ಹಳೆಯ ಮಾದರಿಗಿಂತ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಹೊಸ ಮಾರುತಿ ಡಿಸೈರ್ ಸೆಡಾನ್ ಅನ್ನು ಸಜ್ಜುಗೊಳಿಸಿದೆ. ಇದರ ಒಳಭಾಗವು ಇತ್ತೀಚಿನ ತಲೆಮಾರಿನ ಸ್ವಿಫ್ಟ್ ಅನ್ನು ಹೋಲುತ್ತದೆ.
2024 ಮಾರುತಿ ಡಿಸೈರ್ ಇಂಟೀರಿಯರ್: ಮಾರುತಿ ಡಿಸೈರ್‌ನ ಇಂಟಿರೀಯರ್ ಇತ್ತೀಚಿನ ಸ್ವಿಫ್ಟ್‌ಗೆ ಹೋಲುತ್ತದೆ. ಆದ್ದರಿಂದ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಇದೆ. ಇದು ವೈರ್‌ಲೆಸ್ Apple CarPlay ಮತ್ತು Android Auto ಅನ್ನು ಸಪೋರ್ಟ್ ಮಾಡುತ್ತದೆ. ಕಾರಿನೊಳಗೆ ಆಟೋ ಕ್ಲೈಮೇಟ್ ಕಂಟ್ರೋಲ್, ಹಿಂಬದಿ ಎಸಿ ವೆಂಟ್‌ಗಳು, ವೈರ್‌ಲೆಸ್ ಚಾರ್ಜರ್, 360-ಡಿಗ್ರಿ ಕ್ಯಾಮೆರಾವನ್ನು ಪಡೆಯುತ್ತೀರಿ. ಎಲೆಕ್ಟ್ರಿಕ್ ಸನ್‌ರೂಫ್ ಸಹ ಈ ಕಾರು ಹೊಂದಿದೆ.
ಮಾರುತಿ ಡಿಸೈರ್ ಸೆಡಾನ್ ಬಿಡುಗಡೆ ಕಾರ್ಯಕ್ರಮ (Maruti Suzuki) ಪವರ್‌ಟ್ರೇನ್:ಹೊಸ ಮಾರುತಿ ಸುಜುಕಿ ಡಿಸೈರ್ ಅದೇ Z ಸರಣಿಯ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಇತ್ತೀಚಿನ ಸ್ವಿಫ್ಟ್ ಮಾದರಿಯಲ್ಲಿ ಕಂಡುಬರುತ್ತದೆ. ಹೊಸ ಎಂಜಿನ್ 80 bhp ಪವರ್ ಮತ್ತು 111.7 Nm ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್ ಜೋಡಿಸಲಾಗಿದೆ. ಪೆಟ್ರೋಲ್ + CNG ರೂಪಾಂತರದಲ್ಲಿ, ಈ ಎಂಜಿನ್ 68 bhp ಪವರ್ ಮತ್ತು 100 Nm ವರೆಗೆ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಸುರಕ್ಷತೆ: 2024 ಮಾರುತಿ ಡಿಸೈರ್ ಆರು ಏರ್‌ಬ್ಯಾಗ್‌ಗಳು, ESC, ಎಲ್ಲಾ ಆಸನಗಳಿಗೆ ರಿಮೆಂಡರ್ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಔಟ್‌ಬೋರ್ಡ್ ಸೀಟ್‌ಗಳಿಗೆ ISOFIX ಮೌಂಟ್‌ಗಳು, ಮುಂಭಾಗದ ಸೀಟ್ ಬೆಲ್ಟ್ ಪ್ರಿಟೆನ್ಷನರ್‌ಗಳು, ಲೋಡ್ ಲಿಮಿಟರ್‌ಗಳನ್ನು ಪಡೆಯುತ್ತದೆ. ಹೊಸ ಮಾರುತಿ ಡಿಸೈರ್ ಯುಎನ್ 127 ಪಾದಚಾರಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತದೆ. ಇತ್ತೀಚೆಗೆ, ಹೊಸ ಮಾರುತಿ ಡಿಸೈರ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಸಾಧಿಸಿದೆ.
ಇದನ್ನೂ ಓದಿ:ಓಲಾ ಪ್ರಿಯರಿಗೆ ಶುಭ ಸುದ್ದಿ; ಓಲಾ ಎಲೆಕ್ಟ್ರಿಕ್ನಿಂದ 20 ಹೊಸ ಬಗೆಯ ಸ್ಕೂಟರ್ಸ್