ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ 2025ರ ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ದಿ ರಾಜಾ ಸಾಬ್'ನ ಹೊಸ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಮಾರುತಿ ನಿರ್ದೇಶನದ ಪೋಸ್ಟರ್ ಬಿಡುಗಡೆಯೊಂದಿಗೆ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದ್ದಾರೆ. ಹಬ್ಬದ ಶುಭಾಶಯಗಳ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಕೊಟ್ಟಿದ್ದಾರೆ.
ಪೋಸ್ಟರ್‌ನಲ್ಲಿ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಲಾಂಗ್ ಹೇರ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಿಳಿ ಹಳದಿ ಕುರ್ತಾ ಮತ್ತು ಬ್ರೌನ್ ಸನ್ ಗ್ಲಾಸ್ ಧರಿಸಿ, ನಗುಮೊಗದಲ್ಲಿ ಕಾಣಿಸಿಕೊಂಡಿದ್ದಾರೆ. ನಿರಾತಂಕ ಮತ್ತು ಆಕರ್ಷಕ ನೋಟ ಬೀರಿದ್ದು, ಆ್ಯಕ್ಷನ್ ಜಾನರ್ ಬಿಟ್ಟು ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಬೆಲ್ ಸ್ಟಾರ್ "ಈ ಹಬ್ಬದ ಸಂದರ್ಭ ನಿಮ್ಮೆಲ್ಲರಿಗೂ ಹಾರೈಸುತ್ತೇನೆ. ಶೀಘ್ರದಲ್ಲೇ ದಿ ರಾಜಾ ಸಾಬ್ ಮೂಲಕ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಪ್ರಭಾಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಏಪ್ರಿಲ್ 10 ರಂದು ಬಿಡುಗಡೆ ಆಗಲಿರುವ 'ದಿ ರಾಜಾ ಸಾಬ್' ಚಿತ್ರವನ್ನು ಮುಂದೂಡಲಾಗುವುದು ಎಂಬ ವದಂತಿಗಳಿವೆ. ಅದಾಗ್ಯೂ, ಪ್ರಭಾಸ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ "ಶೀಘ್ರದಲ್ಲೇ ಭೇಟಿಯಾಗೋಣ" ಎಂದು ಬರೆದಿರುವುದರಿಂದ, ಬಹುನಿರೀಕ್ಷಿತ ಚಿತ್ರ ನಿಗದಿತ ಸಮಯಕ್ಕೆ ಸರಿಯಾಗಿ ಬಿಡುಗಡೆ ಆಗಲಿದೆ ಎಂಬ ಭರವಸೆ ಅಭಿಮಾನಿಗಳಲ್ಲಿದೆ.
ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಸಿನಿಮಾ ಪ್ರಭಾಸ್ ಅವರ ಆ್ಯಕ್ಷನ್-ಪ್ಯಾಕ್ಡ್ ಭಾಗಗಳಿಂತ ವಿಭಿನ್ನವಾಗಿದೆ. ರೊಮ್ಯಾಂಟಿಕ್, ಹಾರರ್, ಕಾಮಿಡಿಯ ಮಿಶ್ರಣವಾಗಿದೆ. ನಾಯಕ ನಟ ಪ್ರಭಾಸ್ ಎರಡು ಭಾಗಗಳನ್ನು ನಿರ್ವಹಿಸುತ್ತಿರುವುದೂ ಸೇರಿದಂತೆ ಆಕರ್ಷಕ ಕಥಾವಸ್ತುವಿನಿಂದಾಗಿ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.
ಇದನ್ನೂ ಓದಿ: ಭಾರತದಲ್ಲಿ 100 ಕೋಟಿ ರೂ. ಸಮೀಪಿಸಿದ 'ಗೇಮ್ ಚೇಂಜರ್': 450 ಕೋಟಿ ಬಜೆಟ್ನ ಚಿತ್ರವಿದು
ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಹೀರೋ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ಸಂಗೀತವನ್ನು ತಮನ್ ಎಸ್ ಸಂಯೋಜಿಸಿದ್ದಾರೆ. ಕಾರ್ತಿಕ್ ಪಳನಿ ಅವರ ಕ್ಯಾಮರಾ ಕೈಚಳಕವಿದೆ. ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ. ಏಪ್ರಿಲ್ 10ರಂದು ಚಿತ್ರ ತೆರೆಕಾಣಲಿದ್ದು, ಪ್ರೇಕ್ಷಕರು 'ದಿ ರಾಜಾ ಸಾಬ್' ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಇದನ್ನೂ ಓದಿ: 'ನಿನ್ನ ವಿಷ್ಣು ಈ ಕಂಬದಲ್ಲಿರಬೇಕು ತಾನೇ?': ಭಕ್ತ ಪ್ರಹ್ಲಾದನ ಕಥೆಯ ಅದ್ಭುತ ಟೀಸರ್ ನೋಡಿ
ಭಾರತೀಯ ಚಿತ್ರರರಂಗದ ಬಹುಬೇಡಿಕೆ ನಟ ಪ್ರಭಾಸ್ ಕೊನೆಯದಾಗಿ ಸಲಾರ್ ಚಿತ್ರದಲ್ಲಿ ಕಾಣಿಸಿಕೊಂಡರು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಸೂಪರ್ ಹಿಟ್ ಆಗಿದೆ. ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.