ಇತಿಹಾಸದ ಪುಟದಲ್ಲಿ ಅದೆಷ್ಟೋ ಆಕರ್ಷಕ ಘಟನೆಗಳು ನಡೆದಿವೆ. ಅದರಲ್ಲಿ ಮನುಷ್ಯನು ಚಂದ್ರನ ಮೇಲೆ ನಡೆದಾಡಿದ ಘಟನೆಯೂ ಒಂದು. ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ ದಿನವದು. 1969 ಜುಲೈ 20ರಂದು ನೀಲ್ ಆರ್ಮ್ಸ್ಟ್ರಂಗ್ ಮತ್ತು ಬುಜ್ ಅಲ್ಡ್ರಿನ್ ಅವರು ಚಂದ್ರನ ಅಂಗಳದಲ್ಲಿ ಇಳಿದಿದ್ದರು. ಆ ದಿನದ ಗೌರವಾರ್ಥ ಅಂತಾರಾಷ್ಟ್ರೀಯ ಚಂದ್ರನ ದಿನವನ್ನು ಪ್ರತಿ ವರ್ಷ ಜುಲೈ 20 ರಂದು ಆಚರಿಸಲಾಗುತ್ತದೆ. ನಾಸಾ, ಚಂದ್ರನ ಮೇಲಿನ ಲ್ಯಾಂಡಿಂಗ್ "ಸಾರ್ವಕಾಲಿಕ ಏಕೈಕ ಶ್ರೇಷ್ಠ ತಾಂತ್ರಿಕ ಸಾಧನೆ" ಎಂದು ಬಣ್ಣಿಸಿದೆ.
ಈ ದಿನ ಶುರುವಾಗಿದ್ದೇಗೆ ?:"ಇದು ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ.. ಮಾನವಕುಲಕ್ಕೆ ಒಂದು ದೊಡ್ಡ ಜಿಗಿತ" ಎಂಬ ನೀಲ್ ಆರ್ಮ್‌ಸ್ಟ್ರಾಂಗ್ ಅವರ ಮಾತುಗಳು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತವೆ. ಏಕೆಂದರೆ ಅವರು ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ. ಅದು 1969 ವರ್ಷ ಮತ್ತು ಆ ದಿನ ಜುಲೈ 20. ನಾಸಾದ ಅಪೊಲೊ 11 ಮಿಷನ್‌ನ ಭಾಗವಾಗಿದ್ದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಹೆಜ್ಜೆ ಇರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅವರು ಟ್ರಂಕ್ವಿಲಿಟಿ ಬೇಸ್ ಎಂದು ಕರೆಯಲ್ಪಡುವ ಸ್ಥಳದಲ್ಲಿ ಇಳಿದಿದ್ದರು, ಈ ಮೂಲಕ ಬಾಹ್ಯಾಕಾಶ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) 2021 ರಲ್ಲಿ ಬಾಹ್ಯಾಕಾಶದಲ್ಲಿ ಶಾಂತಿಯುತವಾಗಿ ಒಟ್ಟಾಗಿ ಕೆಲಸ ಮಾಡುವ ಬಗ್ಗೆ 76/76 ನಿರ್ಣಯವನ್ನು ಅಂಗೀಕರಿಸಿದ ನಂತರ ಪ್ರತಿ ವರ್ಷ ಜುಲೈ 20 ರಂದು ಅಂತಾರಾಷ್ಟ್ರೀಯ ಚಂದ್ರನ ದಿನವನ್ನು ಆಚರಿಸಲು ನಿರ್ಧರಿಸಿತು.
ಚಂದ್ರನ ಕುರಿತ ಆಸಕ್ತಿಕರ ಮಾಹಿತಿ: ನಮಗೆ ತುಂಬಾ ಹತ್ತಿರವಾಗಿರುವುದರಿಂದ ಆಕಾಶದಲ್ಲಿ ಚಂದ್ರನನ್ನು ಗುರುತಿಸುವುದು ತುಂಬಾ ಸುಲಭ. ಭೂಮಿಯ ಮೇಲೆ ಉಬ್ಬರವಿಳಿತವನ್ನು ಉಂಟುಮಾಡುವಲ್ಲಿ ಚಂದ್ರನ ಪಾತ್ರ ದೊಡ್ಡದು. ಚಂದ್ರನ ಗಾತ್ರವು ಭೂಮಿಯ ಕಾಲು ಭಾಗದಷ್ಟು, ಅದರ ಸಮಭಾಜಕದ ಸುತ್ತ 10,917 ಕಿಮೀ ವ್ಯಾಸ ಮತ್ತು 1,737 ಕಿ.ಮೀ ತ್ರಿಜ್ಯವಿದೆ.
ಚಂದ್ರನಲ್ಲಿ ಗಾಳಿಯಿಲ್ಲ, ಆದ್ದರಿಂದ ಅದು ಶಾಖವನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಅಥವಾ ನೆಲವನ್ನು ಬೆಚ್ಚಗಾಗಿಸುವುದಿಲ್ಲ. ಚಂದ್ರನು ಭೂಮಿಯಿಂದ ಸುಮಾರು 384,400 ಕಿ.ಮೀ ದೂರದಲ್ಲಿದೆ. ಆದ್ದರಿಂದ ವಿಮಾನದಲ್ಲಿ ಅದನ್ನು ತಲುಪಲು 17 ದಿನಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ.
ನಾಸಾದ ಕೆಲವು ಅಂಕಿ - ಅಂಶಗಳು: