Age Related Diseases: ಭಾರತೀಯ ಮೂಲದ ವಿಜ್ಞಾನಿ ನೇತೃತ್ವದ ಸಂಶೋಧಕರ ತಂಡವು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರೋಟೀನ್‌ನ ಹೊಸ ಕಾರ್ಯವನ್ನು ಕಂಡುಹಿಡಿದಿದೆ. ಕೆನಡಾದ ಮೆಕ್‌ಮಾಸ್ಟರ್ ವಿಶ್ವವಿದ್ಯಾಲಯದ ತಂಡವು ಪ್ರೋಟೀನ್‌ನ ಕೋಶ-ರಕ್ಷಣಾ ಕಾರ್ಯವನ್ನು ಕಂಡುಹಿಡಿದಿದೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೊಸ ಮಾರ್ಗಗಳನ್ನು ತೆರೆಯಬಹುದು ಮತ್ತು ಆರೋಗ್ಯಕರ ವಯಸ್ಸಿಗೆ ಕಾರಣವಾಗಬಹುದು.
ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜೀವಕೋಶಗಳು ತಪ್ಪಾಗಿ ಪ್ರೋಟೀನ್‌ಗಳನ್ನು ರಚಿಸಬಹುದು ಮತ್ತು ಶುಚಿಗೊಳಿಸುವ ಪ್ರಕ್ರಿಯೆಯು ದೋಷಪೂರಿತವಾಗಬಹುದು ಅಥವಾ ವಿಪರೀತವಾಗಬಹುದು. ಪರಿಣಾಮ ಪ್ರೋಟೀನ್‌ಗಳು ಒಟ್ಟಿಗೆ ಸೇರಿಕೊಳ್ಳಬಹುದು. ಇದು ಆಲ್ಝೈಮರ್ ಮತ್ತು ಪಾರ್ಕಿನ್ಸನ್‌ನಂತಹ ಕಾಯಿಲೆಗಳಿಗೆ ಸಂಬಂಧಿಸಿರುವ ಹಾನಿಕಾರಕ ರಚನೆಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಂಶೋಧಕರು.
ಈ ಪ್ರೋಟೀನ್ ಒಟ್ಟುಗೂಡಿಸುವಿಕೆ ಪ್ರಾರಂಭವಾದ ಕಾರಣ ಜೀವಕೋಶಗಳು ಒತ್ತಡವನ್ನು ಅನುಭವಿಸುತ್ತಿದ್ದರೆ, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಪ್ರೊಟೀನ್ಗಳನ್ನು ತಯಾರಿಸಿ ನಂತರ ಬಿಡುಗಡೆ ಮಾಡುತ್ತದೆ. ಆದ್ರೆ ಈ ಪ್ರೊಟೀನ್ಗಳನ್ನು ತಯಾರಿಸುವುದನ್ನು ನಿಲ್ಲಿಸುವ ಸಂಕೇತವನ್ನು ಪಡೆಯುತ್ತದೆ ಎಂದು ಸಂಶೋಧನೆಯ ಮೇಲ್ವಿಚಾರಣೆಯ ಪ್ರಾಧ್ಯಾಪಕ ಭಗವತಿ ಗುಪ್ತಾ ಹೇಳಿದರು.
MANF ಎಂದು ಕರೆಯಲ್ಪಡುವ ರಕ್ಷಣಾತ್ಮಕ ಪ್ರೋಟೀನ್‌ಗಳ ವರ್ಗವು ಜೀವಕೋಶಗಳನ್ನು ಪರಿಣಾಮಕಾರಿಯಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಕ್ರಿಯೆಯಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ ಎಂದು ತಂಡವು ಕಂಡುಹಿಡಿದಿದೆ. ಹೆಚ್ಚಿದ ಸೆಲ್ಯುಲಾರ್ ಒತ್ತಡದಿಂದ MANF ರಕ್ಷಿಸುತ್ತದೆ ಎಂದು ಹಿಂದಿನ ಅಧ್ಯಯನಗಳು ತೋರಿಸಿವೆ. ಸಿ. ಎಲೆಗನ್ಸ್ ಎಂದು ಕರೆಯಲ್ಪಡುವ ಸೂಕ್ಷ್ಮ ಹುಳುಗಳನ್ನು ಅಧ್ಯಯನ ಮಾಡುವ ಮೂಲಕ ಇದು ಹೇಗೆ ಸಂಭವಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಂಡವು ಹೊರಟಿದೆ.