Two Wheeler Sales Increasing In Rural: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಬಳಕೆಯಿಂದಾಗಿ ಭಾರತದಲ್ಲಿ ದ್ವಿಚಕ್ರ ವಾಹನಗಳ ಬಳಕೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಈ ಸೆಪ್ಟೆಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.22ರಷ್ಟು ಮತ್ತು ತ್ರಿಚಕ್ರ ವಾಹದಲ್ಲಿ ಸುಮಾರು ಶೇ.8ರಷ್ಟು ಏರಿಕೆ ಕಂಡಿದೆ ಎಂದು ಬಿಎನ್ಪಿ ಪರಿಬಾಸ್ ಇಂಡಿಯಾ (BNP Paribas India) ವರದಿ ಮಾಡಿದೆ.
ಇನ್ನು ಇದು ರಿಟೈಲ್ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಈ ಹಬ್ಬದ ಋತುವಿನಲ್ಲಿ ಇನ್ನಷ್ಟು ಹೆಚ್ಚು ಮಾರಾಟವಾಗಬಹುದೆಂದು ಒರಿಜಿನಲ್ ಎಕ್ಯುಪ್ಮೆಂಟ್ ಮ್ಯಾನುಫ್ಯಾಕ್ಟರ್ಸ್ (OEMs) ಭರವಸೆ ಇಟ್ಟುಕೊಂಡಿದ್ದಾರೆ. ಇನ್ನು ಟ್ರ್ಯಾಕ್ಟರ್ ಮಾರಾಟಗಳಲ್ಲಿ ವರ್ಷದಿಂದ ವರ್ಷಕ್ಕೆ ಸ್ಥಿರ ಬೆಳವಣಿಗೆ ಕಂಡು ಬಂದಿದೆ. ಆದರೆ, ಆರ್ಥಿಕ ವರ್ಷ 2025ರಲ್ಲಿ ಈ ಬೆಳವಣಿಗೆ ಏರಳಿತ ಕಾಣಬಹುದೆಂಬ ಆತಂಕ ವ್ಯಕ್ತಪಡಿಸಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ಯಾಸೆಂಜರ್ ವಾಹನಗಳ ಮಾರಾಟವೂ ಸಮತಟ್ಟವಾಗಿದೆ. ರಿಟೈಲ್ ಮಾರಾಟಗಳಲ್ಲಿ ಪಿವಿ ಒಇಎಮ್ಗಳು ಪ್ಯಾಸೆಂಜರ್ ವಾಹನಗಳ ರವಾನೆಯನ್ನು ಕಡಿತಗೊಳಿಸಿವೆ. ಅಷ್ಟೇ ಅಲ್ಲ ಈ ಹಬ್ಬದ ಋತುವಿನಲ್ಲಿ ದಾಸ್ತಾನು ಸಂಗ್ರಹ ಕಂಡು ಬಂದಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ.
ಗ್ರಾಮೀಣ ಭಾಗದಲ್ಲಿ ದ್ವಿಚಕ್ರವಾಹನಗಳ ಬಳಕೆಯಲ್ಲಿ ಹೆಚ್ಚಳ:ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ (PMJDY)ಯಿಂದಾಗಿ ಗ್ರಾಮೀಣ ಮತ್ತು ನಗರ ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚುತ್ತಿದೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಲೋನ್ ಪಡೆದು ದ್ವಿಚಕ್ರ ವಾಹನಗಳ ಮಾರಾಟ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನವನ್ನು ಶೇ. 62ರಷ್ಟು ಮತ್ತು ನಗರ ಭಾಗದಲ್ಲಿ ಶೇಕಡ 58ರಷ್ಟು ಖರೀದಿಯಾಗಿದೆ ಎಂದು ವರದಿ ಉಲ್ಲೇಖಿಸಿದೆ.
53 ಕೋಟಿ ಜನ್ಧನ್ ಯೋಜನೆ ಖಾತೆ:ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿ 53 ಕೋಟಿಗೂ ಹೆಚ್ಚು ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಈ ಮೂಲಕ ಲಕ್ಷಾಂತರ ಗ್ರಾಮೀಣ ಭಾಗದ ಜನರನ್ನು ಮೊದಲ ಬಾರಿಗೆ ಔಪಚಾರಿಕವಾಗಿ ಹಣಕಾಸು ವ್ಯವಸ್ಥೆಗೆ ತಂದಂತಾಗಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ವೇಗದಿಂದ ಸಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 5 ಲಕ್ಷಕ್ಕಿಂತ ಆದಾಯ ಹೆಚ್ಚು ಇರುವವರು ಸುಮಾರು ಶೇಕಡ 60ರಷ್ಟು ದ್ವಿಚಕ್ರ ವಾಹನಗಳನ್ನು ಹೊಂದಿದ್ದಾರೆ ಎಂದು ಇತ್ತೀಚೆಗೆ ವರದಿಯೊಂದು ಬಹಿರಂಗ ಪಡಿಸಿತ್ತು.
ಈ ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ 1.59 ಲಕ್ಷ ಯುನಿಟ್ಗೆ ತಲುಪಿದೆ. ಆದರೆ ಕಳೆದ ವರ್ಷ ಇದೇ ತಿಂಗಳಿಗೆ 1.29 ಲಕ್ಷ ಯುನಿಟ್ಗೆ ತಲುಪಿತ್ತು. ಡೇಟಾಗಳ ಪ್ರಕಾರ ಇವಿ ವಾಹನಗಳ ಮಾರಾಟವು 0.90 ಲಕ್ಷ ಯುನಿಟ್ಗಳಾಗಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ 0.64 ಲಕ್ಷ ಯುನಿಟ್ ಮಾರಾಟ ಕಂಡಿತ್ತು. ಇನ್ನು ಇವಿ ತ್ರಿಚಕ್ರ ಮಾರಾಟದಲ್ಲಿ ಕೊಂಚ ಏರಿಕೆ ಕಂಡಿದೆ. ಈ ವರ್ಷ 0.63 ಲಕ್ಷ ಯುನಿಟ್ ಮಾರಾಟವಾಗಿದ್ದು, ಕಳೆದ ವರ್ಷ 0.58 ಲಕ್ಷ ಯುನಿಟ್ ಮಾರಾಟವಾಗಿದೆ.
ಓದಿ:ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಅಭಿವೃದ್ಧಿಗೆ ಹೆಚ್ಚುವರಿಯಾಗಿ 500 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ಟೊಯೊಟಾ! - Electric Air Taxis