ETV Bharat / state

ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ನೀಡಿ: ಸಚಿವ ಪಿಯೂಷ್ ಗೋಯಲ್​ಗೆ ಯದುವೀರ್ ಮನವಿ - UNLICENSED TOBACCO SALES

ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ನೀಡುವಂತೆ ಸಂಸದ ಯದುವೀರ್ ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದು, ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ಸಾಧ್ಯತೆ ಬಗ್ಗೆ ಭರವಸೆ ನೀಡಿದ್ದಾರೆ.

MP YADUVEER APPEALS TO MINISTER PIYUSH GOYAL TO ALLOW UNLICENSED TOBACCO SALES
ಪರವಾನಗಿ ರಹಿತ ತಂಬಾಕು ಮಾರಾಟ ಅವಕಾಶಕ್ಕೆ ಸಚಿವ ಪಿಯೂಷ್ ಗೋಯಲ್​ಗೆ ಸಂಸದ ಯದುವೀರ್ ಮನವಿ (ETV Bharat)
author img

By ETV Bharat Karnataka Team

Published : Feb 7, 2025, 10:06 AM IST

ಮೈಸೂರು: ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಹಾಗೂ ಅವರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.

ಇದಕ್ಕೆ ಸೂಕ್ತವಾಗಿ ಸ್ಪಂದನೆ ವ್ಯಕ್ತಪಡಿಸಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, "ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು" ಭರವಸೆ ನೀಡಿದರು.

"ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ" ನೀಡುವ ಭರವಸೆಯನ್ನೂ ನೀಡಿದರು.

ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ನಮ್ಮ ಕ್ಷೇತ್ರದ ಬೆಳಗಾರರ ಪರವಾಗಿ ದನಿ ಎತ್ತಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಪ್ರಕಟಣೆ ಮೂಲಕ ಸಂಸದ ಯದುವೀರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಕೇವಲ 15% ಮಹಿಳೆಯರಲ್ಲಿ ಮಾತ್ರ ಚಾಲನಾ ಪರವಾನಗಿ: ಉಮಾ ಮಹಾದೇವನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.