ETV Bharat / bharat

ದೆಹಲಿಯ ಹಲವು ಶಾಲೆಗಳಿಗೆ ಬಾಂಬ್​ ಮತ್ತೆ ಬೆದರಿಕೆ ಕರೆ: ಸ್ಥಳಕ್ಕೆ ದೌಡಾಯಿಸಿದ ಪೊಲೀಸರು - NOIDA RECEIVE BOMB THREAT

ಈ ಹಿಂದೆ ಕೂಡ ದೆಹಲಿಯ ಹಲವು ಶಾಲೆಗಳಿಗೆ ಹುಸಿ ಬಾಂಬ್​ ಬೆದರಿಕೆ ಕರೆ ಬಂದಿದ್ದವು. ಇದೀಗ ಮತ್ತೆ ಅದೇ ರೀತಿಯ ಸಂದೇಶಗಳು ಅನೇಕ ಶಾಲೆಗಳಿಗೆ ರವಾನಿಸಲಾಗಿದೆ.

several-schools-in-delhi-noida-receive-bomb-threat-police-initiate-investigation
ದೆಹಲಿ ಪೊಲೀಸ್​​ (ಐಎಎನ್​ಎಸ್​)
author img

By PTI

Published : Feb 7, 2025, 10:25 AM IST

ನವದೆಹಲಿ: ದೆಹಲಿ ಮತ್ತು ನೋಯ್ಡಾದ ಹಲವು ಶಾಲೆಗಳಿಗೆ ಶುಕ್ರವಾರ ಬಾಂಬ್​ ಬೆದರಿಕೆ ಕರೆಗಳು ಬಂದಿದೆ. ಸೆಂಟ್​​​​ ಸ್ಟೀಪನ್​, ಮಯೂರ್​ ವಿಹಾರ್​ ಸೇರಿದಂತೆ ಹಲವು ಪ್ರಮುಖ ಶಾಲೆಗಳಿಗೆ ಬಾಂಬ್​ ಬೆದರಿಕೆ ಕರೆ ಬಂದ ಹಿನ್ನೆಲೆ ತಪಾಸಣೆ ಸಾಗಿದೆ. ಬಾಂಬ್​ ನಿಷ್ಕ್ರಿಯ ದಳ ಹಾಗೂ ಡಾಗ್​ ಸ್ವಾಡ್​ ಮತ್ತು ಪೊಲೀಸರು ಬೆದರಿಕೆ ಕರೆ ಬಂದ ಸ್ಥಳದಲ್ಲಿ ತನಿಖೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಮಯೂರ್ ವಿಹಾರ್ -1 ನಲ್ಲಿರುವ ಅಹ್ಲ್ಕಾನ್ ಇಂಟರ್​ ನ್ಯಾಷನಲ್​ ಸ್ಕೂಲ್ ಮತ್ತು ಸೆಂಟ್​​ ಸ್ಟೀಫನ್​ ಕಾಲೇಜಿಗೆ ಬೆಳಗ್ಗೆ 6.40 ಹಾಗೂ 7.42ಕ್ಕೆ ಕ್ರಮವಾಗಿ ಬೆದರಿಕೆ ಸಂದೇಶವನ್ನು ಇಮೇಲ್​ ಮೂಲಕ ಕಳುಹಿಸಲಾಗಿದೆ, ಈ ತಕ್ಷಣಕ್ಕೆ ಪ್ರಾಂಶುಪಾಲರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅದರಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಮತ್ತು ಬಾಂಬ್​​ ನಿಷ್ಕ್ರಿಯದಳದ ಅಧಿಕಾರಿಗಳು ಶಾಲೆಗೆ ಹಾಜರಾಗಿ ತನಿಖೆ ಆರಂಭಿಸಿದ್ದಾರೆ.

ಶಾಲಾ ಆವರಣದಲ್ಲಿ ತಪಾಸಣೆ ನಡೆಸಲಾಗಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಲಭ್ಯವಾಗಿಲ್ಲ. ಬೆದರಿಕೆ ಸಂದೇಶದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.

ಈ ದಿನ ಶಾಲೆಗೆ ರಜೆ ನೀಡಲಾಗಿದ್ದು, ಆನ್​ಲೈನ್​ ಮೂಲಕ ಕ್ಲಾಸ್​ ನಡೆಸಲು ನಿರ್ಧರಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಿಲ್ಲ. ಅಲ್ಲದೇ ಬಾಂಬ್​ ಬೆದರಿಕೆ ಕುರಿತು ಅವರು ಮಾಹಿತಿ ನೀಡಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ನೋಯ್ಡಾದ ಶಿವ ನಾಡರ್ ಶಾಲೆಗೂ ಬೆದರಿಕೆ ಬಂದಿದೆ. ಬಳಿಕ ನೋಯ್ಡಾ ಪೊಲೀಸರು, ಬಾಂಬ್ ಸ್ಕ್ವಾಡ್, ಅಗ್ನಿಶಾಮಕ ದಳ, ಡಾಗ್​ ಸ್ಕ್ವಾಡ್​​ , ಬಿಡಿಎಸ್ ತಂಡ ತಕ್ಷಣ ಎಲ್ಲ ಸ್ಥಳಗಳಲ್ಲಿ ತಪಾಸಣೆ ನಡೆಸಿದೆ. ಇನ್ನು ಇಮೇಲ್​ ಸಂದೇಶದ ಕುರಿತು ಸೈಬರ್​ ತಂಡ ತನಿಖೆ ಶುರು ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಕರ್ನಾಟಕದ ಇಬ್ಬರು ಸೇರಿ ನಾಲ್ವರು ಸಾವು

ಇದನ್ನೂ ಓದಿ: ಒಂದೆಡೆ ಹಸಿರು, ಮತ್ತೊಂದು ಕಡೆ ಕೃಷ್ಣೆಯ ಒಡಲು; ಮಧ್ಯದಲ್ಲೊಂದು ಬಾಹುಬಲಿ ಸೇತುವೆ: ಹೀಗಿದೆ ದೃಶ್ಯಕಾವ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.