ಹೈದರಾಬಾದ್:ಬಳಕೆದಾರರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಹಲವಾರು ಹೊಸ ನಾವೀನ್ಯತೆಯ ವೈಶಿಷ್ಟ್ಯವನ್ನು ಗೂಗಲ್ ಬಿಡುಗಡೆ ಮಾಡಿದೆ. 'ಗೂಗಲ್ ಕ್ಲೌಡ್ ನೆಕ್ಸ್ಟ್ 2024' ಕಾನ್ಫರೆನ್ಸ್‌ನಲ್ಲಿ ವರ್ಕ್‌ಸ್ಪೇಸ್ ಸೂಟ್‌ನ ಬಳಕೆದಾರರಲ್ಲಿ ಉತ್ಪಾದಕತೆ ಮತ್ತು ಟೀಮ್‌ವರ್ಕ್ ಹೆಚ್ಚಿಸುವ ಉದ್ದೇಶದಿಂದ ಈ ಎಲ್ಲ ಫೀಚರ್ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಳಕೆದಾರರ ಉತ್ಪಾದಕತೆ ಮತ್ತು ಸಹಯೋಗದಲ್ಲಿ ಕ್ರಾಂತಿ ಮೂಡಿಸಲು ಸಜ್ಜಾಗಿದೆ. ಈ ಮೂಲಕ ಗೂಗಲ್ ತನ್ನ ಉತ್ಪಾದನೆಯಲ್ಲಿ ಎಐ ಅನ್ನು ಅಳವಡಿಸುವ ಮೂಲಕ ಬಳಕೆದಾರರ ಕೆಲಸ ಸುಲಭ ಮಾಡಿ ಬಳಕೆದಾರರಿಗೆ ತನ್ನ ಬದ್ಧತೆಯ ಪ್ರದರ್ಶನ ನಡೆಸಿದೆ
ಹೆಲ್ಪ್ ಮಿ ರೈಟ್: ಹೊಸ ಫೀಚರ್ ಘೋಷಣೆ ಮಾಡಿರುವ ಗೂಗಲ್, ಮೊಬೈಲ್ ಗೂಗಲ್ ಬಳಕೆದಾರರಿಗೆ ಹೊಸ ಧ್ವನಿ ಉತ್ತೇಜನ ಮತ್ತು ಇನ್ಪುಟ್ ಜೊತೆಗೆ ಬರೆಯಲು ಸಹಾಯ ಮಾಡುವ ಕಾರ್ಯಾಚರಣೆ (ಹೆಲ್ಪ್ ಮಿ ಟೈಟ್) ಪರಿಚಯಿಸಿದೆ. ಇದು ಇಮೇಲ್ ಬರವಣಿಗೆಯನ್ನು ಸುಲಭಗೊಳಿಸಲಿದೆ. ಇದರಲ್ಲಿನ ಹೊಸ ಇನ್ಸಾಟ್ ಪಾಲಿಶ್ ಫೀಚರ್, ಒಂದೇ ಕ್ಲಿಕ್ನಲ್ಲಿ ಇಮೇಲ್ನ ನವೀಕರಣ ಮಾಡಲಿದೆ.
ಗೂಗಲ್ ಡಾಕ್ಸ್:ಎಲ್ಲ ಮಾಹಿತಿಗಳನ್ನು ಒಂದೇ ಡಾಕ್ಯುಮೆಂಟ್ಗೆ ಇಡಲು ಸಹಾಯ ಮಾಡಲು ಈ ಹೊಸ ಟ್ಯಾಬ್ ಫೀಚರ್ ಅನ್ನು ಗೂಗಲ್ ಡಾಕ್ಸ್ ಅಳವಡಿಸಿದೆ. ನಿಮಗೆ ಬೇಕಾದ ವಿಷಯಕ್ಕಾಗಿ ಅನೇಕ ಡಾಕ್ಯುಮೆಂಟ್ನ್ನು ಹುಡುಕುವ ಅಥವಾ ಡ್ರೈವ್ ಅನ್ನು ತಡಕಾಡುವ ಅವಶ್ಯಕತೆ ಇಲ್ಲ. ಗೂಗಲ್ ಡಾಕ್ಸ್ನಲ್ಲಿ ಇಮೇಜ್ ಕವರ್ ಮೂಲಕ ಡಾಕ್ಯುಮೆಂಟ್ ಲಭ್ಯವಾಗುವುದರಿಂದ ಕೆಲಸ ಸುಲಭವಾಗಲಿದೆ. ಜೊತೆಗೆ ಇದು ಡಾಕ್ಯುಮೆಂಟ್ ಪ್ರಸ್ತುತಿಯನ್ನು ಸುಧಾರಿಸಲಿದೆ.
ಗೂಗಲ್ ಮೀಟ್: ಗೂಗಲ್ ಮೀಟ್ನಲ್ಲಿ ಇದೀಗ ನೀವು ಟೇಕ್ ನೋಟ್ಸ್ ಫಾರ್ ಮಿ ಫೀಚರ್ ಕಾಣಬಹುದಾಗಿದೆ. ಜೊತೆಗೆ ಗೂಗಲ್ ಚಾಟ್ ಮತ್ತು ಗೂಗಲ್ ಮೀಟ್ನಲ್ಲಿ ಸುಧಾರಿತ ಎಐ ಸಾಮರ್ಥ್ಯ ಪಡೆಯಲು ಪ್ರತಿ ಬಳಕೆದಾರರಿಗೆ ತಿಂಗಳಿಗೆ 10 ಡಾಲರ್ ನಂತೆ ಎಂಟರ್‌ಪ್ರೈಸ್ ಸೇರ್ಪಡೆ ಎಂಬ ಹೊಸ ವ್ಯಾಪಾರ ಸೇರ್ಪಡೆ ಅನ್ನು ಗೂಗಲ್ ಪರಿಚಯಿಸುತ್ತಿದೆ.