Expensive Gifts For Employees: ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲ ಕಂಪನಿಗಳು ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳನ್ನು ನೀಡುತ್ತವೆ. ವಾರ್ಷಿಕ ಬೋನಸ್ ಮತ್ತು ಹಬ್ಬದ ಬೋನಸ್ ಸಹ ನೀಡಲಾಗುತ್ತದೆ. ಆದರೆ, ಚೆನ್ನೈ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ಪ್ರೇರೇಪಿಸಲು ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದೆ. ತಮ್ಮ ಉದ್ಯೋಗಿಗಳಿಗೆ ಕಾರು, ಬೈಕ್, ಸ್ಕೂಟಿಗಳನ್ನು ನೀಡಿದೆ.
20 ಪ್ರತಿಭಾವಂತರಿಗೆ ಗಿಫ್ಟ್: ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುರ್ಮೌಂಟ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿದೆ. 20 ಪ್ರತಿಭಾವಂತರಿಗೆ ಟಾಟಾ ಕಾರುಗಳು, ಆಕ್ಟಿವಾ ಸ್ಕೂಟರ್‌ಗಳು ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ನೀಡಿದೆ. ಈ ಉಡುಗೊರೆಗಳು ಉದ್ಯೋಗಿಗಳನ್ನು ಕೆಲಸದಲ್ಲಿ ಪ್ರೇರೇಪಿಸುವುದಲ್ಲದೇ ಉನ್ನತ ಗುರಿಗಳನ್ನು ಸಾಧಿಸಲು ಉತ್ಸಾಹ ತುಂಬುತ್ತದೆ. ಈ ಸಂಸ್ಥೆಯು ಲಾಜಿಸ್ಟಿಕ್ಸ್, ಪಾರದರ್ಶಕತೆ ಮತ್ತು ಪೂರೈಕೆ ಸರಪಳಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕೆಲಸ ಮಾಡುತ್ತದೆ.
ಕಂಪನಿಯ ಸಂಸ್ಥಾಪಕ, ಎಂಡಿ ಡೆನ್ಸಿಲ್ ರಯಾನ್ ಮಾತನಾಡಿ, ತಮ್ಮ ಕಂಪನಿಯ ಉದ್ದೇಶವು ಎಲ್ಲ ವ್ಯವಹಾರಗಳಲ್ಲಿ ಲಾಜಿಸ್ಟಿಕ್ಸ್ ಸರಳಗೊಳಿಸುವುದಾಗಿದೆ. ಸಾಂಪ್ರದಾಯಿಕ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರಕ್ರಿಯೆಯಲ್ಲಿನ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವುದು ಗುರಿಯಾಗಿದೆ. ನೌಕರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದರಿಂದ ಅವರಲ್ಲಿ ತೃಪ್ತಿ ಹೆಚ್ಚುವುದಲ್ಲದೇ ಉತ್ಪಾದಕತೆಯೂ ಹೆಚ್ಚುತ್ತದೆ. ಪ್ರೇರಿತ ಉದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಇತ್ತೀಚೆಗೆ ಹರಿಯಾಣದ ಫಾರ್ಮಾ ಕಂಪನಿಯೊಂದು ದೀಪಾವಳಿ ಉಡುಗೊರೆಯಾಗಿ ತನ್ನ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ವಿತರಿಸಿದೆ. ಟಾಟಾ ಪಂಚ್ ಮತ್ತು ಮಾರುತಿ ಗ್ರ್ಯಾಂಡ್ ವಿಟಾರಾ ಕಾರುಗಳನ್ನು 'ವರ್ಷದ ಸ್ಟಾರ್ ಪರ್ಫಾಮರ್' ಎಂದು ನಿಂತಿರುವ ಕಂಪನಿಯ 15 ಉದ್ಯೋಗಿಗಳಿಗೆ ಈ ಉಡುಗೊರೆಯನ್ನು ನೀಡಲಾಯಿತು. ಕಳೆದ ವರ್ಷವೂ ಕಂಪನಿಯಲ್ಲಿ ಉತ್ತಮ ಕೆಲಸ ಮಾಡಿದ ಉದ್ಯೋಗಿಗಳಿಗೆ ಇದೇ ರೀತಿಯ ಬಹುಮಾನಗಳನ್ನು ನೀಡಲಾಯಿತು.
ಓದಿ:ಜನರ ಮನ ಗೆದ್ದ ಇವಿ: ಚಾರ್ಜಿಂಗ್ ಸ್ಟೇಷನ್ ಅಳವಡಿಕೆಯಲ್ಲಿ ಕರ್ನಾಟಕವೇ ನಂಬರ್ 1!